ದ್ವೇಷ ರಾಜಕಾಣದಿಂದ ದೇಶಕ್ಕೆ ಅಪಾಯ: ಸಂಸದ ಜಾನ್ ಬ್ರಿಟ್ಟಸ್

ಮಂಗಳೂರು: ದ್ವೇಷದ ರಾಜಕಾರಣದಿಂದ ದೇಶದ ಭವಿಷ್ಯಕ್ಕೆ ,ಸಮಾಜಕ್ಕೆ ಅಪಾಯವಿದೆ ಇದರ ವಿರುದ್ಧ ಜನ ಸಂಘಟಿತರಾಗಬೇಕಾಗಿದೆ ಎಂದು ಸಂಸದ, ಮಾಧ್ಯಮ ತಜ್ಞ ಜಾನ್ ಬ್ರಿಟ್ಟಸ್ ತಿಳಿಸಿದ್ದಾರೆ.
ಭಾರತ ಸ್ವಾತಂತ್ರ್ಯದ ವಾರ್ಷಿಕ ಸಮಾರಂಭದ ಅಂಗವಾಗಿ ನಗರದ ಬಿಷಪ್ ಜತ್ತನ್ನ ಸಭಾಂಗಣದಲ್ಲಿಂದು ಜನಶಕ್ತಿ ಪತ್ರಿಕೆಯ ಅಮೃತ ಕರ್ನಾಟಕ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದ ಸ್ವಾತಂತ್ರ್ಯದ 75 ವರ್ಷ ಆಚರಣೆಯ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವ ವಿದ್ಯಾಮಾನ ಅತ್ಯಂತ ಕಳವಳಕಾರಿಯಾಗಿದೆ. ಬಿಲ್ಕೀಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿ ಗಳಿಗೆ ಜೀವಾವಧಿ ಶಿಕ್ಷೆ ಯನ್ನು ನ್ಯಾಯಾಲಯ ನೀಡಿತ್ತು. ಗುಜರಾತ್ ಸರಕಾರ ಈ ಅಪರಾಧಿ ಗಳನ್ನು ಬಿಡುಗಡೆ ಮಾಡುತ್ತದೆ. ಬಿಡುಗಡೆ ಮಾಡಿದ ಅಪರಾಧಿ ಗಳ ಜೊತೆ ಶಾಸಕರು ಸೇರಿ ಹೂ ಹಾರ ಹಾಕಿ ಸಂಭ್ರಮಿಸುತ್ತಾರೆ. ಈ ಪ್ರಕರಣದ ಸಂತ್ರಸ್ತರಿ ಗೆ ನೀಡಬೇಕಾದ ಪರಿಹಾರ ವನ್ನು ನೀಡಿಲ್ಲ. ಸುಪ್ರೀಂಕೋರ್ಟ್ ನ ಹಿರಿಯ ನ್ಯಾಯ ವಾದಿ ಕಪಿಲ್ ಸಿಬಲ್ ಇತ್ತೀಚೆಗೆ ನ್ಯಾಯಾಲಯದ ಮೇಲಿನ ನಂಬಿಕೆ ಕಳೆದುಕೊಂಡಿರುವ ಮಾತು ಗಳನ್ನು ಆಡುತ್ತಾರೆ ಎಂದು ಬ್ರಿಟ್ಟಸ್ ತಿಳಿಸಿದ್ದಾರೆ.
ವಿಶ್ರಾಂತ ಪ್ರಾಧ್ಯಾಪಕ, ಸಂಶೋಧಕ ಪುರುಷೋತ್ತಮ ಬಿಳಿಮಲೆ ಮಾತನಾಡಿದರು. ಹಿರಿಯ ಸಾಹಿತಿ ಸಂಶೋಧಕಿ ಬಿ.ಎಂ. ರೋಹಿಣಿ ಮಹಿಳಾ ದೌರ್ಜನ್ಯ ಗಹ ವಿರುದ್ಧ ದ ಹೋರಾಟದ ಬಗ್ಗೆ ವಿವರಿಸಿದರು. ಸಮಾರಂಭದ ಅಧ್ಯಕ್ಷತೆ ಯನ್ನು ಯಾದವ ಶೆಟ್ಟಿ ವಹಿಸಿದ್ದರು.
ಸಮಾರಂಭದಲ್ಲಿ ಯು. ಬಸವರಾಜ, ಡಾ.ಪ್ರಕಾಶ್, ವಾಸುದೇವ ಉಚ್ಚಿಲ್, ಡಾ.ಕೃಷ್ಣ ಪ್ಪ ಕೊಂಚಾಡಿ, ಮುನೀರ್ ಕಾಟಿಪಳ್ಳ, ಕೃಷ್ಣಪ್ಪ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಗುರುಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಜನಶಕ್ತಿ ಉತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ವಸಂತ ಕುಮಾರ್ ಸ್ವಾಗತಿಸಿದರು. ಮನೋಜ್ ವಾಮಂಜೂರು ವಂದಿಸಿದರು.