ರಾಜಸ್ಥಾನದಲ್ಲಿ ಮತ್ತೆ ಲಘು ಭೂಕಂಪ

ಜೈಪುರ: ರಾಜಸ್ಥಾನದ ವಾಯವ್ಯ ಬಿಕನೇರ್ ಪ್ರದೇಶದಲ್ಲಿ ಸೋಮವಾರ ಬೆಳಗಿನ ಜಾವ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.1ರಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ National Center for Seismology (NCS) ಹೇಳಿದೆ.
ಸೋಮವಾರ ಬೆಳಗ್ಗಿನ ಜಾವ 2:01 ಗಂಟೆಗೆ ಭೂಕಂಪ ಸಂಭವಿಸಿದ್ದು, ನೆಲಮಟ್ಟದಿಂದ ಸುಮಾರು 10 ಕಿಲೋಮೀಟರ್ ಕೆಳಗೆ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.
"4.1 ತೀವ್ರತೆಯ ಭೂಕಂಪ 22-08-2022ರಂದು 2:01 ಗಂಟೆಗೆ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಬಿಕನೇರ್‌ನಿಂದ ವಾಯವ್ಯ ಭಾಗಕ್ಕೆ 236 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ಟ್ವೀಟ್ ಮಾಡಿದೆ. ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ.
ಶನಿವಾರ ಮುಂಜಾನೆ 1.12ಕ್ಕೆ ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ಹೊಂದಿದ್ದ ಭೂಕಂಪ ಲಕ್ನೋದ ಈಶಾನ್ಯದಲ್ಲಿ ಸಂಭವಿಸಿತ್ತು. ಈ ಭೂಕಂಪ ನೆಲಮಟ್ಟದಿಂದ 82 ಕಿಲೋಮೀಟರ್ ಆಳದಲ್ಲಿ ಸಂಭವಿಸಿತ್ತು. ಇದಲ್ಲದೇ ಉತ್ತರಾಖಂಡದ ಪಿತ್ತೋರ್ ಗಢದಲ್ಲಿ 3.6 ತೀವ್ರತೆಯ ಭೂಕಂಪ ಶುಕ್ರವಾರ ಸಂಭವಿಸಿತ್ತು ಎಂದು hindustantimes.com ವರದಿ ಮಾಡಿದೆ.





