Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮುಖ್ಯಮಂತ್ರಿಯಾಗಿ ಬೊಮ್ಮಾಯಿ ...

ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಏಳು-ಬೀಳುಗಳು

► ವಾರ್ತಾಭಾರತಿ ಅವಲೋಕನ

ಆರ್. ಜೀವಿಆರ್. ಜೀವಿ22 Aug 2022 10:17 AM IST
share
ಮುಖ್ಯಮಂತ್ರಿಯಾಗಿ ಬೊಮ್ಮಾಯಿ  ಏಳು-ಬೀಳುಗಳು

ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಕಳೆದ ಜುಲೈ 28ಕ್ಕೆ ಒಂದು ವರ್ಷ ಪೂರೈಸಿದ್ದಾರೆ. ಇದೇ 28ರಂದು ಆ ಸಂಭ್ರಮವನ್ನು ಆಚರಿಸಲು ಅದ್ದೂರಿ ಜನೋತ್ಸವಕ್ಕೂ ಸಿದ್ಧತೆ ನಡೆದಿದೆ. ಆದರೆ ನಿಜವಾಗಿಯೂ ರಾಜ್ಯ ಬಿಜೆಪಿಯಲ್ಲಿ ಸಂಭ್ರಮವಿದೆಯೇ? ಈ ಒಂದು ವರ್ಷದಲ್ಲಿ ಬೊಮ್ಮಾಯಿ ಮಾಡಿರುವ ಸಾಧನೆಗಳೇನು ಮತ್ತು ಅವರ ವೈಫಲ್ಯಗಳೇನು? ನಡುನಡುವೆ ಸಿಎಂ ಬದಲಾವಣೆ ವದಂತಿಯೂ ಕೇಳಿಬರುತ್ತಿರುವುದೇಕೆ? ಹಿರಿಯ ಸಚಿವರೂ ಸೇರಿ ಪಕ್ಷದೊಳಗಿನವರೇ ಸರಕಾರದ ಬಗ್ಗೆ ಟೀಕೆಗೆ ಇಳಿದಿರುವುದರ ಮರ್ಮವೇನು? ಇದೆಲ್ಲದಕ್ಕೂ ಉತ್ತರ ಹುಡುಕುವ ಪ್ರಯತ್ನ ಮಾಡಬೇಕು.

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ವರ್ಷವಾಗಿದೆ. ಕಳೆದ ಜುಲೈ 28ಕ್ಕೆ ವರ್ಷ ತುಂಬಿದ ಸಡಗರವನ್ನು ದೊಡ್ಡಬಳ್ಳಾಪುರದಲ್ಲಿ ಆಯೋಜಿಸುವುದೆಂದು ತೀರ್ಮಾನವಾಗಿತ್ತು. ಆದರೆ ಜುಲೈ 26ರಂದು ದಕ್ಷಿಣ ಕನ್ನಡದಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆಯಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿತ್ತು. ಅದನ್ನೀಗ ಇದೇ ತಿಂಗಳ 28ಕ್ಕೆ ಆಚರಿಸುತ್ತಿದೆ ಸರಕಾರ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೈಕಮಾಂಡ್ ಕೃಪೆಯಿಂದ ಸಿಎಂ ಸ್ಥಾನ ಪಡೆದವರು ಬೊಮ್ಮಾಯಿ. ಹಾಗಾಗಿ ಇಲ್ಲಿಯವರೆಗೂ ಬೊಮ್ಮಾಯಿ ಅವರು ಒಂದೆಡೆ ಯಡಿಯೂರಪ್ಪನವರನ್ನು ಹಾಗೂ ಇನ್ನೊಂದೆಡೆ ಪಕ್ಷದ ವರಿಷ್ಠರು ಮತ್ತು ಆರೆಸ್ಸೆಸ್ ಅನ್ನು ಮೆಚ್ಚಿಸುವ ಮತ್ತು ಒಂದು ಸಮತೋಲದಲ್ಲಿ ಅದನ್ನೆಲ್ಲ ಸಂಭಾಳಿಸುವ ಕಸರತ್ತಿನಲ್ಲಿ ಪಾಸಾಗಿದ್ದಾರೆ. ಮುಂಬರುವ ಚುನಾವಣೆಯನ್ನು ತಮ್ಮ ನಾಯಕತ್ವದಲ್ಲೇ ಎದುರಿಸುವ ವಿಚಾರದಲ್ಲೂ ಅವರು ನಾಯಕರ ಮನವೊಲಿಸಿದ್ದಾರೆ. ಆದರೆ ಅದಕ್ಕಾಗಿ ಸಿಎಂ ಆಗಿ ಅವರು ತೆತ್ತ ಬೆಲೆ ಬಹಳ ದೊಡ್ಡದು ಎಂಬ ವ್ಯಾಪಕ ದೂರುಗಳಿವೆ.

ಅವರೇನೇನು ಮಾಡಿದ್ದಾರೆ, ಎಲ್ಲೆಲ್ಲಿ ಎಡವಿದ್ದಾರೆ ಎಂಬುದನ್ನು ನೋಡಿಕೊಳ್ಳುವಾಗ, ಹಲವೆಡೆ ಅವರು ಮುಗ್ಗರಿಸಿರುವುದು ಎದ್ದು ಕಾಣುತ್ತದೆ. ಜನಪರ ಆಡಳಿತದ ಬಗ್ಗೆ ಮಾತಾಡುತ್ತಲೇ ಸಿಎಂ ಹುದ್ದೆ ವಹಿಸಿಕೊಂಡಿದ್ದ ವರು ಬೊಮ್ಮಾಯಿ. ಅದಕ್ಕೆ ತಕ್ಕಂತೆ ಆರಂಭದಲ್ಲಿಯೇ ಅವರು ಘೋಷಿಸಿದ ಯೋಜನೆಗಳೂ ನಿರೀಕ್ಷೆ ಹುಟ್ಟಿಸಿದ್ದವು. ಬೊಮ್ಮಾಯಿ ಸರಕಾರದ ಸಾಧನೆಗಳನ್ನು ಗಮನಿಸುವುದಾದರೆ,

   ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ಮೊದಲ ದಿನವೇ ರೈತ ವಿದ್ಯಾನಿಧಿ ಎಂಬ ದೂರದೃಷ್ಟಿಯುಳ್ಳ ಯೋಜನೆಯ ಘೋಷಣೆ. ಇದು ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆಯಾಗಿದ್ದು, 2,000 ರೂ.ಯಿಂದ 11,000 ರೂ.ಯವರೆಗೆ ಕೋರ್ಸ್‌ಗೆ ತಕ್ಕಂತೆ ವಿದ್ಯಾರ್ಥಿ ವೇತನ ವಿತರಣೆ. ದೇಶದಲ್ಲೇ ಇದೊಂದು ವಿನೂತನ ಯೋಜನೆಯಾಗಿದ್ದು, ಕಳೆದ ವರ್ಷ 8 ಲಕ್ಷ 50 ಸಾವಿರ ವಿದ್ಯಾರ್ಥಿಗಳಿಗೆ ಹಾಗೂ ಈ ವರ್ಷ 9 ಲಕ್ಷ 80 ಸಾವಿರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದೆ ಎಂಬುದನ್ನು ಮೊನ್ನೆಯಷ್ಟೇ ಬೊಮ್ಮಾಯಿ ಪ್ರಕಟಿಸಿದ್ದಾರೆ. ವಿದ್ಯಾನಿಧಿ ಯೋಜನೆ ನೇಕಾರರು, ಮೀನುಗಾರರು ಹಾಗೂ ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿಸ್ತರಣೆಯಾಗಲಿದೆ ಎಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬೊಮ್ಮಾಯಿ ಪ್ರಕಟಿಸಿದ್ದಾರೆ. ರೈತರನ್ನೇ ಗಮನದಲ್ಲಿಟ್ಟುಕೊಂಡಿದ್ದ ಇನ್ನೊಂದು ಘೋಷಣೆ ರೈತ ಶಕ್ತಿ ಯೋಜನೆ. ಕೃಷಿಯಲ್ಲಿ ಯಂತ್ರೋಪಕರಣ ಬಳಕೆ ಉತ್ತೇಜಿಸುವುದಕ್ಕಾಗಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಅಪರೂಪದ ಯೋಜನೆ ಪ್ರಕಟ. ಡೀಸೆಲ್ ಸಹಾಯಧನವಾಗಿ ಎಕರೆಗೆ 250 ರೂ.ಯತೆ ಗರಿಷ್ಠ 5 ಎಕರೆವರೆಗೆ ಹಣದ ನೆರವು ಒದಗಿಸುವ ಯೋಜನೆ ಇದು.

ರೈತ ಮಹಿಳೆಯರನ್ನು ಪ್ರೋತ್ಸಾಹಿಸುವುದಕ್ಕಾಗಿ ಕೃಷಿ ಪ್ರಶಸ್ತಿ ಹಾಗೂ ಕೃಷಿ ಪಂಡಿತ ಪ್ರಶಸ್ತಿಗಳ ಸ್ಥಾಪನೆ. ಕೃಷಿಯೆಡೆಗೆ ಇತರ ಮಹಿಳೆಯರನ್ನು ಆಕರ್ಷಿಸುವ ಉದ್ದೇಶವೂ ಇದರ ಹಿಂದೆ ಇತ್ತು. ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ ಇನ್ನೊಂದು ಮಹತ್ವಾಕಾಂಕ್ಷಿ ಹೆಜ್ಜೆಯಾಗಿದ್ದು, ರೈತರ ಆದಾಯ ಹೆಚ್ಚಿಸುವ ಉದ್ದೇಶದ್ದಾಗಿದೆ. ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ. ಇದು ಕೂಡ ದೇಶದಲ್ಲೇ ಮೊದಲು. ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡುವ ಉದ್ದೇಶ.

ದಿಲ್ಲಿ ಮಾದರಿಯ ನಮ್ಮ ಕ್ಲಿನಿಕ್‌ಗಳನ್ನು ಪ್ರಮುಖ ನಗರಗಳಲ್ಲಿ ಸ್ಥಾಪಿಸುವ ಯೋಜನೆ.

ಅಪೌಷ್ಟಿಕತೆ ನಿವಾರಿಸಲು ಸಾರವರ್ಧಿತ ಅಕ್ಕಿ ವಿತರಿಸುವ ಪೌಷ್ಟಿಕ ಕರ್ನಾಟಕ ಯೋಜನೆ 14 ಜಿಲ್ಲೆಗಳಲ್ಲಿ ಜಾರಿ.

ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂದು ರಾಜ್ಯದ ಏಳು ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮೇಲ್ದರ್ಜೆಗೆ.

 ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸ್ವಾತಂತ್ರ ಅಮೃತ ಮಹೋತ್ಸವದ ಕೊಡುಗೆಯಾಗಿ 3,000 ಕೋಟಿ.

 ಸೇವಾವಧಿ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1,000 ರೂ.ಯಿಂದ 1,500 ರೂ.ಯವರೆಗೆ ಏರಿಕೆ.

 ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ 1,200 ರೂ.ಗಳಿಗೆ, ವಿಧವಾ ವೇತನ 800 ರೂ.ಗೆ ಹಾಗೂ ವಿಕಲ ಚೇತನರ ಮಾಸಿಕ ವೇತನ 800 ರೂ.ಗಳಿಗೆ ಏರಿಕೆ ನೇಕಾರ ಸಮ್ಮಾನ್ ನೆರವಿನ ಮೊತ್ತ 2ರಿಂದ 5 ಸಾವಿರಕ್ಕೆ ಹೆಚ್ಚಳ. 2021-22ನೇ ಸಾಲಿನಲ್ಲಿ 49,544 ನೇಕಾರರಿಗೆ ನೇರ ನಗದು.

 ಎಸ್ಸಿ, ಎಸ್ಟಿ ನಿಗಮಕ್ಕೆ 580.19 ಕೋಟಿ ರೂ. ಹೆಚ್ಚುವರಿ ಅನುದಾನ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 572 ಕೋಟಿ ವಿದ್ಯಾರ್ಥಿವೇತನ.

ಪೌರ ಕಾರ್ಮಿಕರಿಗೆ ಇದೇ ಮೊದಲ ಬಾರಿಗೆ ಮಾಸಿಕ 2,000 ರೂ. ಸಂಕಷ್ಟ ಭತ್ತೆ. ಬೆಂಗಳೂರು ನಗರದಲ್ಲಿ ಮೂಲ ಸೌಕರ್ಯ ಒದಗಿಸುವುದಕ್ಕಾಗಿ 6,000 ಕೋಟಿ ರೂ. ವೆಚ್ಚದ ಅಮೃತ್ ನಗರೋತ್ಥಾನ ಯೋಜನೆ.2021-22ನೇ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆ ಕರ್ನಾಟಕದಲ್ಲಿ.

ಹೀಗೆ ಹೇಳಿಕೊಳ್ಳಲು, ಬೊಮ್ಮಾಯಿ ಸರಕಾರ ಘೋಷಿಸಿದ ಯೋಜನೆಗಳ ಪಟ್ಟಿ ದೊಡ್ಡದೇ ಇದ್ದರೂ, ಎಲ್ಲ ಬಣ್ಣವನ್ನೂ ಮಸಿ ನುಂಗಿತು ಎನ್ನುವ ಹಾಗೆ ಬೊಮ್ಮಾಯಿ ಸರಕಾರದ ವಿರುದ್ಧ ಕೇಳಿಬಂದ ಗುರುತರ ಆರೋಪಗಳ ಪಟ್ಟಿಯೂ ಸುದೀರ್ಘವಾಗಿದೆ. ನಿರಂತರ ವಿವಾದಗಳಲ್ಲೇ ಸಿಕ್ಕಿಬಿದ್ದು ಒದ್ದಾಡಿದೆ ಸರಕಾರ. ಬೊಮ್ಮಾಯಿ ಸಿಎಂ ಆಗಿ ಅಧಿಕಾರಕ್ಕೆ ಬರುತ್ತಲೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸರಕಾರದ ಮಾನ ಕಳೆದದ್ದು ಬಿಟ್ ಕಾಯಿನ್ ಹ್ಯಾಕಿಂಗ್ ಹಗರಣ. ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧದ ಪ್ರಕರಣಗಳ ಗದ್ದಲ ಒಂದೆಡೆಯಾದರೆ, ಆತನನ್ನೇ ಬಳಸಿಕೊಂಡು ಸರಕಾರದ ದೊಡ್ಡ ಪ್ರಭಾವಿಗಳನೇಕರು ಭಾರೀ ಹ್ಯಾಕಿಂಗ್ ನಡೆಸಿದ್ದಾರೆ ಎಂಬ ಆರೋಪ ಇನ್ನೊಂದೆಡೆ ಕೇಳಿಬಂದಿತ್ತು.

ಪಿಎಸ್ಸೈ ಅಕ್ರಮ ನೇಮಕಾತಿ ಪ್ರಕರಣದಿಂದಾಗಿ ಕೂಡ ಸರಕಾರ ತೀವ್ರ ಮುಜುಗರಕ್ಕೆ ಒಳಗಾಗಬೇಕಾಯಿತು. ಸರಕಾರದ ಅಧೀನದಲ್ಲಿರುವ ಸಿಐಡಿ ಯಿಂದಲೇ ಪ್ರಕರಣ ಬಯಲಾದಾಗ, ನೇಮಕಾತಿ ವಿಭಾಗದ ಎಡಿಜಿಪಿಯೇ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಂಧನಕ್ಕೊಳಗಾದಾಗ ಸರಕಾರ ಅಲ್ಲಾಡಿ ಹೋಗಿತ್ತು. ಅಷ್ಟು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಬಂಧನಕ್ಕೆ ಒಳಗಾಗಿದ್ದು ಇದೇ ಮೊದಲು.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣವೂ ಇಂಥದೇ ಆಗಿತ್ತು. 400 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿದೆ ಎಂದು ಸಚಿವ ಅಶ್ವತ್ಥನಾರಾಯಣ ವಿರುದ್ಧವೇ ಗಂಭೀರ ಆರೋಪ ಮಾಡಲಾಗಿತ್ತು. ಈ ಪ್ರಕರಣದಲ್ಲೂ ಕರ್ನಾಟಕ ವಿವಿ ಕುಲಸಚಿವರಲ್ಲದೆ ಕೆಲ ಉಪನ್ಯಾಸಕರೂ ಬಂಧನಕ್ಕೊಳಗಾದರು. ಹಿಜಾಬ್ ಧರಿಸಿ ಬರದಂತೆ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಿಷೇಧ ಹೇರಲಾದ ಪ್ರಕರಣವಂತೂ ಮತ್ತೊಂದು ಅನಗತ್ಯ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಇದರಲ್ಲಿ ಬೊಮ್ಮಾಯಿ ಸರಕಾರ ಎಲ್ಲ ವಿದ್ಯಾರ್ಥಿನಿಯರನ್ನು ಸಮಾನವಾಗಿ ನೋಡದೆ, ಯಾವುದೇ ಮುಲಾಜಿಲ್ಲದೆ ಸಂಘ ಪರಿವಾರಕ್ಕೆ ಬೇಕಾದಂತೆಯೇ ವರ್ತಿಸಿದ್ದು ತೀರಾ ಕೆಟ್ಟ ನಿದರ್ಶನವೊಂದನ್ನು ಸೃಷ್ಟಿಸಿತು. ‘ಬೇಟಿ ಬಚಾವೋ ಬೇಟಿ ಪಢಾವೋ’ಎಂದು ಹೇಳುವ ಪಕ್ಷದವರು ನಡೆದುಕೊಳ್ಳುವ ರೀತಿಯೇ ಇದು ಎಂದು ಜನರು ಕೇಳುವಂತಾಯಿತು.

ಇದೇ ಉಡುಪಿಯಲ್ಲಿಯೇ ಪ್ರಾರಂಭಿಸಿ ಹಿಂದೂ ಧಾರ್ಮಿಕ ಕೇಂದ್ರಗಳ ಆವರಣದಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅವಕಾಶ ಕೊಡಕೂಡದು ಎಂಬ ಒತ್ತಾಯವೊಂದು ಶುರುವಾಯಿತು. ಮುಸ್ಲಿಮರ ಅಂಗಡಿಗಳಲ್ಲಿ ಖರೀದಿ ಮಾಡಕೂಡದು, ಅವರ ಆಟೋಗಳಲ್ಲಿ ಪ್ರಯಾಣಿಸಬಾರದು ಎಂಬ ಸಂಘ ಪರಿವಾರದ ಸಂಘಟನೆಗಳ ಬೇಡಿಕೆಗಳು ವ್ಯಾಪಕ ಟೀಕೆಗೆ ಒಳಗಾದವು. ರಾಜ್ಯ ದಲ್ಲಿನ ವಿಭಜಿಸುವ ಕೋಮುವಾದಿ ಅಜೆಂಡಾ ವಿರುದ್ಧ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ರಂತಹ ಉದ್ಯಮಿಗಳು ಬಿಜೆಪಿ ಸರಕಾರಕ್ಕೆ ಎಚ್ಚರಿಕೆಯನ್ನೂ ನೀಡಿದರು. ಪಠ್ಯಪುಸ್ತಕ ಪರಿಶೀಲನೆ ನೆವದಲ್ಲಿ ಇತಿಹಾಸಕ್ಕೆ ಅಪಚಾರವಾಗುವ ರೀತಿ ಯಲ್ಲಿ ಮತ್ತು ಸಮಾಜ ಸುಧಾರಕರು, ಮಹಾನಾಯಕರುಗಳಿಗೆ ಅವಮಾನ ವಾಗುವ ರೀತಿಯಲ್ಲಿ ಸಮಿತಿ ನಡೆದುಕೊಂಡಾಗ ಅದರ ಸಮರ್ಥನೆಗೇ ಮುಂದಾದ ಸರಕಾರ ಕಡೆಗೆ ತಪ್ಪೊಪ್ಪಿಕೊಂಡು, ತಪ್ಪುಗಳನ್ನು ಸರಿಪಡಿಸುವ ಮಾತಾ ಡಿತು. ಆದರೂ ಶಿಕ್ಷಣ ಸಚಿವರೇ ಈ ವಿಷಯದಲ್ಲಿ ಹಿರಿಯ ವಿದ್ವಾಂಸರುಗಳ ಬಗ್ಗೆ ಆಡಿದ ಮಾತುಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

ಪಂಚಾಯತ್ ರಾಜ್ ಇಲಾಖೆಯಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪ ವಂತೂ ತೀವ್ರ ಮಟ್ಟದ ಮುಜುಗರಕ್ಕೆ ಸರಕಾರವನ್ನು ಸಿಕ್ಕಿಸಿತು. ಕಮಿಷನ್ ವಿಚಾರ ವಾಗಿ ದೂರು ಕೊಟ್ಟಿದ್ದ ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಈಶ್ವರಪ್ಪ ರಾಜೀನಾಮೆಯನ್ನು ಕೇಳಿ ಪಡೆಯಬೇಕಾಯಿತು. ಇದೆಲ್ಲದರ ಜೊತೆಗೆ ಬೊಮ್ಮಾಯಿ ಹಲವು ಯಡವಟ್ಟುಗಳನ್ನೂ ಮಾಡಿಕೊಂಡರು. ಬೊಮ್ಮಾಯಿ ಸಂಘಪರಿವಾರದ ಹಿನ್ನೆಲೆಯವರಲ್ಲ, ಬದಲಾಗಿ ಸಮಾಜವಾದಿ ಚಿಂತನೆಯ ನೆಲೆಯಿಂದ ಬಂದವರು, ಜನತಾ ಪರಿವಾರದ ಹಿನ್ನೆಲೆಯವರಾಗಿರುವುದರಿಂದ ಕಠಿಣ ಹಿಂದುತ್ವದ ಪ್ರತಿಪಾದಕರಾಗಲಾರರು ಎಂಬ ನಿರೀಕ್ಷೆಗಳು ಹುಸಿಯಾಗುವಂತೆ ಅವರ ನಡೆ ನುಡಿಯಲ್ಲಿ ವ್ಯಕ್ತವಾಗತೊಡಗಿದ್ದವು. ತೀರಾ ಈಚಿನ ಉದಾಹರಣೆಯೆಂದರೆ, ಸ್ವಾತಂತ್ರೋತ್ಸವ ಜಾಹೀರಾತಿ ನಲ್ಲಿ ನೆಹರೂ ಭಾವಚಿತ್ರವನ್ನು ಹೊರಗಿಟ್ಟ ನಡೆ. ಇಂಥ ಪ್ರಮಾದವೊಂದು ಆದ ಬಳಿಕ ಅದನ್ನು ಸ್ವತಃ ಮುಖ್ಯಮಂತ್ರಿಯೇ ಸಮರ್ಥಿಸಿಕೊಂಡಿದ್ದು ಬೇರೆ. ನೆಹರೂ ತಮ್ಮ ನಾಯಕರಲ್ಲ, ಕಾಂಗ್ರೆಸ್ ನಾಯಕರು ಎಂಬರ್ಥದ ಬೊಮ್ಮಾಯಿ ಹೇಳಿಕೆಯೂ ವ್ಯಾಪಕ ಟೀಕೆಗೆ ಒಳಗಾಯಿತು. ಸಮವಸ್ತ್ರ ಸಂಹಿತೆಯಿಂದಾಗಿ ಧಾರ್ಮಿಕ ಸಂಕೇತಗಳಿಗೆ ಅವಕಾಶ ನೀಡ ಲಾಗದು ಎಂಬ ನೆಪದಲ್ಲಿ ಹಿಜಾಬ್ ನಿಷೇಧಿಸಿದ ಇದೇ ಸರಕಾರ ‘ಶಾಲೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಲು ಅವಕಾಶ ನೀಡುತ್ತೇವೆ’ ಎಂದು ಹೇಳಿ ತನ್ನ ದ್ವಂದ್ವ ನಿಲುವು ಜಾಹೀರು ಮಾಡಿತು.

ಅಕ್ಟೋಬರ್ 2021ರಲ್ಲಿ ಹಿಂದುತ್ವವಾದಿ ಗುಂಪುಗಳ ಅನೈತಿಕ ಪೊಲೀಸಿಂಗ್ ಕುರಿತ ಪ್ರಶ್ನೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬೊಮ್ಮಾಯಿ ಸಮಾಜದಲ್ಲಿ ನೈತಿಕತೆ ಇಲ್ಲದಿದ್ದಾಗ ಕ್ರಿಯೆ ಮತ್ತು ಅದಕ್ಕೆ ಪ್ರತಿಕ್ರಿಯೆ ಸಂಭವಿಸುತ್ತದೆ ಎಂದು ಹೇಳುವ ಮೂಲಕ ಹಿಂದುತ್ವ ಗುಂಪುಗಳ ಕ್ರಮಗಳನ್ನು ಸಮರ್ಥಿಸುವ ನಡೆಯನ್ನೇ ತೋರಿಸಿದ್ದರು. ಹಿಜಾಬ್ ನಿಷೇಧ, ಮುಸ್ಲಿಮ್ ವ್ಯಾಪಾರಿಗಳ ವಿರುದ್ಧದ ಆರ್ಥಿಕ ಬಹಿಷ್ಕಾರ, ಹಲಾಲ್ ಕಟ್ ಮತ್ತು ಅಝಾನ್ ವಿರುದ್ಧದ ಅಭಿಯಾನಗಳನ್ನೆಲ್ಲ ಮುಖ್ಯಮಂತ್ರಿ ಬೊಮ್ಮಾಯಿ ಬೆಂಬಲಿಸುತ್ತಲೇ ಬಂದರೆಂಬುದು ಗುಟ್ಟೇನೂ ಅಲ್ಲ.

ಮೊನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಕೊಲೆಯಾದ ಬಿಜೆಪಿ ಯುವ ನಾಯಕ ಪ್ರವೀಣ್ ಮನೆಗೆ ಹೋಗಿ ಸಾಂತ್ವನ ಹೇಳಿ ಪರಿಹಾರ ಕೊಟ್ಟ ಬೊಮ್ಮಾಯಿಯವರು ಅದೇ ಊರಿನಲ್ಲಿ ಎರಡು ದಿನಗಳ ಹಿಂದೆ ಕೊಲೆಯಾಗಿದ್ದ ಮಸೂದ್ ಮನೆಗೆ ಹೋಗಲಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಅವರ ಈ ಪಕ್ಷಪಾತಿ, ಸಂವಿಧಾನ ವಿರೋಧಿ ನಡೆಯನ್ನು ಸಮರ್ಥಿಸಿ ಕೊಳ್ಳುವುದು ಸ್ವತಃ ಬಿಜೆಪಿ ಮುಖಂಡರಿಗೂ ಕಷ್ಟವಾಯಿತು.

ಸಂಘ ಪರಿವಾರದ ಸಂಘಟನೆಗಳ ಪುಂಡಾಟಿಕೆ, ಅದಕ್ಕೆ ಬಿಜೆಪಿ ನಾಯಕರೇಸಮರ್ಥನೆ ನೀಡುವುದು ನಡೆದುಕೊಂಡೇ ಬಂದಿದೆ. ಮೊನ್ನೆ ಸಿದ್ದರಾಮಯ್ಯ ನವರ ಕೊಡಗು ಜಿಲ್ಲೆ ಪ್ರವಾಸದ ವೇಳೆ ಅವರ ಕಾರಿಗೆ ಮೊಟ್ಟೆ ಎಸೆಯಲಾಯಿತು. ಇದನ್ನು ಪ್ರತಿಭಟನೆ, ಕೊಡಗಿನ ಜನರಿಗೆ ಸಿದ್ದರಾಮಯ್ಯ ಮೇಲಿರುವ ಸಿಟ್ಟಿನ ಪ್ರತಿರೂಪ ಎಂದೆಲ್ಲ ಬಿಜೆಪಿಯ ವಿವಿಧ ನಾಯಕರು ಹೇಳುತ್ತಲೇ ಇದ್ದಾರೆ. ಮೊಟ್ಟೆ ಎಸೆದ ಪುಂಡರನ್ನು ಸಮರ್ಥಿಸಿಕೊಳ್ಳುವ ಬಗೆ ಮತ್ತು ಅದಕ್ಕೆ ಕೊಡುವ ಕಾರಣಗಳಲ್ಲೇ ಕೋಮುದ್ವೇಷವೂ ವ್ಯಕ್ತವಾಗುತ್ತಿರುವುದು ಕಣ್ಣಿಗೆ ರಾಚುವಷ್ಟು ಸ್ಪಷ್ಟ.

share
ಆರ್. ಜೀವಿ
ಆರ್. ಜೀವಿ
Next Story
X