ಎಫ್ಟಿಎಕ್ಸ್ ಕ್ರಿಪ್ಟೋ ಕಪ್: ವಿಶ್ವದ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್ಸನ್ರನ್ನು ಸೋಲಿಸಿದ ಪ್ರಜ್ಞಾನಂದ

Photo:twitter
ಹೊಸದಿಲ್ಲಿ: ಭಾರತದ ಯುವ ಗ್ರ್ಯಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ (R Praggnanandhaa) ಅವರು ಸೋಮವಾರ ನಡೆದ ಎಫ್ಟಿಎಕ್ಸ್ ಕ್ರಿಪ್ಟೋ ಕಪ್ನ ಅಂತಿಮ ಸುತ್ತಿನಲ್ಲಿ ವಿಶ್ವದ ನಂ.1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್ಸನ್ರನ್ನು (world No.1 Magnus Carlsen) 4-2 ಅಂತರದಿಂದ ಸೋಲಿಸಿದರು. ಪ್ರಜ್ಞಾನಂದ ಅವರು ಬ್ಲಿಟ್ಜ್ ಟೈ ಬ್ರೇಕ್ಗಳಲ್ಲಿ ಎರಡು ಸೇರಿದಂತೆ ಮೂರು ನೇರ ಗೇಮ್ಗಳನ್ನು ಗೆದ್ದರು.
ಕಾರ್ಲ್ಸನ್ ವಿರುದ್ಧದ ಗೆಲುವಿನ ಹೊರತಾಗಿಯೂ 17 ವರ್ಷ ವಯಸ್ಸಿನವ ಪ್ರಜ್ಞಾನಂದ ಅವರು ಅಂತಿಮ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಮಾತ್ರ ಪಡೆಯಬಹುದು. ಹೆಚ್ಚಿನ ಅಂಕಗಳ ಆಧಾರದ ಮೇಲೆ ನಾರ್ವೆಯ ಕಾರ್ಲ್ ಸನ್ ಅಗ್ರ ಬಹುಮಾನವನ್ನು ಗೆದ್ದುಕೊಂಡರು. ಕಾರ್ಲ್ಸನ್ ಅವರು 16 ಮ್ಯಾಚ್ ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನ ಪಡೆದರೆ, ಪ್ರಜ್ಞಾನಂದ 15 ಅಂಕ ಗಳಿಸಿದರು.
ಪ್ರಜ್ಞಾನಂದ ಈ ವರ್ಷ ಅದ್ಭುತ ಫಾರ್ಮ್ನಲ್ಲಿದ್ದಾರೆ . ಈ ಹಿಂದೆ ಆನ್ಲೈನ್ ಈವೆಂಟ್ಗಳಲ್ಲಿ ವಿಶ್ವ ಚಾಂಪಿಯನ್ ಕಾರ್ಲ್ಸನ್ ರನ್ನು ಎರಡು ಬಾರಿ ಸೋಲಿಸಿದ್ದರು.





