ಆಮ್ ಆದ್ಮಿ ಪಕ್ಷ ತೊರೆದು ತಮ್ಮೊಂದಿಗೆ ಸೇರಿಕೊಳ್ಳುವಂತೆ ಬಿಜೆಪಿಯಿಂದ ಸಂದೇಶ: ಮನೀಷ್ ಸಿಸೋಡಿಯಾ

Photo: PTI
ಹೊಸದಿಲ್ಲಿ: ಮದ್ಯದ ನೀತಿ ಉಲ್ಲಂಘನೆಗೆ ಸಂಬಂಧಿಸಿದಂತೆ ಸಿಬಿಐಯಿಂದ ತನಿಖೆ ಎದುರಿಸುತ್ತಿರುವ ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Delhi's Deputy Chief Minister Manish Sisodia) ಅವರು ಆಮ್ ಆದ್ಮಿ ಪಕ್ಷವನ್ನು ತೊರೆದು ತಮ್ಮೊಂದಿಗೆ ಸೇರಿಕೊಳ್ಳಿ ಎಂದು ಬಿಜೆಪಿಯಿಂದ ಸಂದೇಶ ಬಂದಿದೆ ಎಂದು ಹೇಳಿದ್ದಾರೆ.
ಬಿಜೆಪಿ ಸೇರಿದರೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನ್ನ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಕೊನೆಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.
" ಆಪ್ ಒಡೆದು ಬಿಜೆಪಿಗೆ ಸೇರಿಕೊಳ್ಳಿ. ನಿಮ್ಮ ವಿರುದ್ಧ ಸಿಬಿಐ ಹಾಗೂ ಈಡಿ ಎಲ್ಲಾ ಪ್ರಕರಣಗಳನ್ನು ಮುಚ್ಚಲಾಗುತ್ತದೆ" ಎಂಬ ಸಂದೇಶವನ್ನು ಬಿಜೆಪಿಯಿಂದ ಸ್ವೀಕರಿಸಿದ್ದೇನೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ತ್
ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು ಎಂದು ಒತ್ತಿ ಹೇಳಿದ ಸಿಸೋಡಿಯಾ, ನೀವು ಏನು ಬೇಕಾದರೂ ಮಾಡಿ ಎಂದು ಬಿಜೆಪಿಗೆ ಸವಾಲು ಹಾಕಿದರು.
“ನಾನು ಮಹಾರಾಣಾ ಪ್ರತಾಪ್ ಹಾಗೂ ರಜಪೂತ್ ವಂಶಸ್ಥ. ನಾನು ತಲೆ ಕತ್ತರಿಸಿಕೊಳ್ಳಲು ಸಿದ್ಧನಿದ್ದೇನೆ. ಆದರೆ ಪಿತೂರಿಗಾರರು ಗಾಗೂ ಭ್ರಷ್ಟರ ಮುಂದೆ ಎಂದಿಗೂ ತಲೆಬಾಗಲಾರೆ. ನನ್ನ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು. ನೀವು ಏನು ಮಾಡಲು ಬಯಸುತ್ತೀರೋ ಅದನ್ನು ಮಾಡಿ ” ಎಂದು ಅವರು ಹಿಂದಿಯಲ್ಲಿ ಮಾಡಿರುವ ಟ್ವೀಟ್ ನಲ್ಲಿ ಸಿಸೋಡಿಯಾ ಉತ್ತರ ನೀಡಿದ್ದಾರೆ.
मेरे पास भाजपा का संदेश आया है- “आप” तोड़कर भाजपा में आ जाओ, सारे CBI ED के केस बंद करवा देंगे
— Manish Sisodia (@msisodia) August 22, 2022
मेरा भाजपा को जवाब- मैं महाराणा प्रताप का वंशज हूँ, राजपूत हूँ। सर कटा लूँगा लेकिन भ्रष्टाचारियो-षड्यंत्रकारियोंके सामने झुकूँगा नहीं। मेरे ख़िलाफ़ सारे केस झूठे हैं।जो करना है कर लो







