ತ್ರಿವರ್ಣ ಧ್ವಜ ಹಿಡಿದಿದ್ದ ಪ್ರತಿಭಟನಾಕಾರನಿಗೆ ತೀವ್ರವಾಗಿ ಥಳಿಸಿದ ಉನ್ನತ ಅಧಿಕಾರಿ: ವೀಡಿಯೊ ವೈರಲ್
ಪಾಟ್ನಾ: ಶಿಕ್ಷಕರ ನೇಮಕಾತಿಯಲ್ಲಾಗುತ್ತಿರುವ ವಿಳಂಬವನ್ನು ವಿರೋಧಿಸಿ ಸೋಮವಾರ ಪಾಟ್ನಾದಲ್ಲಿ(Patna) ಪ್ರತಿಭಟನೆ ನಡೆಸಿದ ನೂರಾರು ಶಿಕ್ಷಕ ಹುದ್ದೆಯ(Teachers protest) ಆಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ನೆಲದಲ್ಲಿ ಬಿದ್ದಿದ್ದ ಪ್ರತಿಭಟನಾಕಾರರಲ್ಲೊಬ್ಬಾತನಿಗೆ ಉನ್ನತ ಅಧಿಕಾರಿಯೊಬ್ಬರು ಥಳಿಸುತ್ತಿರುವ ವೀಡಿಯೋ ಕೂಡ ವೈರಲ್(Video Viral) ಆಗಿದೆ.
ಪಾಟ್ನಾದ ಡಾಕ್ ಬಾಂಗ್ಲಾ ಚೌರಾಹದಲ್ಲಿ ಪ್ರತಿಭಟನೆ ನಡೆಯುತ್ತಿದ್ದಂತಹ ಸಂದರ್ಭದಲ್ಲಿ ಪಾಟ್ನಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆ.ಕೆ ಸಿಂಗ್ ಎಂದು ಗುರುತಿಸಲಾದ ಅಧಿಕಾರಿಯೊಬ್ಬರು ಕೈಯ್ಯಲ್ಲಿ ರಾಷ್ಟ್ರಧ್ವಜ(Indian Flag) ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬನನ್ನು ದರದರನೆ ಎಳೆಯುತ್ತಿರುವುದು ಹಾಗೂ ಆತನಿಗೆ ಹೊಡೆಯುತ್ತಿರುವುದು ಕಾಣಿಸುತ್ತದೆ. ಆತನ ಕೈಯ್ಯಲ್ಲಿದ್ದ ರಾಷ್ಟ್ರಧ್ವಜವನ್ನು ನಂತರ ಪೊಲೀಸರು ಸೆಳೆಯುವುದೂ ಕಾಣಿಸುತ್ತದೆ.
ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಗಳನ್ನು ಬಳಸಿದರು. 2019ರಿಂದ ನೇಮಕಾತಿಗಾಗಿ ಕಾಯುತ್ತಿದ್ದೇವೆ ಎಂದು ಹಲವು ಪ್ರತಿಭಟನಾಕಾರರು ಹೇಳಿದ್ದಾರೆ. ನೇಮಕಾತಿ ಕುರಿತು ಪ್ರಥಮ ಸಚಿವ ಸಂಪುಟ ಸಭೆಯಲ್ಲಿಯೇ ನಿರ್ಧರಿಸಲಾಗುವುದು ಸರಕಾರ ರಚನೆಗಿಂತ ಮುಂಚೆ ತೇಜಸ್ವಿ ಯಾದವ್ ಹೇಳಿದ್ದರೆ ಆದರೆ ಏನೂ ಆಗಿಲ್ಲ ಎಂದು ಕೆಲ ಪ್ರತಿಭಟನಾಕಾರರು ದೂರಿದ್ದಾರೆ.
Patna, Bihar:Look at the ADM's hooliganism, lathi-charge on those seeking jobs in teacher posts. ADM did not even care about the tricolor and brutally beat up the young man!
— Shehzad Jai Hind (@Shehzad_Ind) August 22, 2022
RJD had promised employment but is giving them lathi! Free run for criminals & lathis for youth! pic.twitter.com/Rk3DY4hHv0