ಭಟ್ಕಳ: ಬಾಲಕನ ಅಪಹರಣ ಪ್ರಕರಣ; ಮೂವರು ಆರೋಪಿಗಳ ಬಂಧನ

ಭಟ್ಕಳ: ಭಟ್ಕಳ(Bhatkal) ಆಜಾದ್ ನಗರ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮುಹಮ್ಮದ್ ಅನೀಸ್, ಅಬ್ರಾರ್ ಶೇಖ್, ಮುಹಮ್ಮದ್ ಮಂಜೂರ ಎಂದು ತಿಳಿದು ಬಂದಿದೆ.
ಈ ಮೂವರು ಆರೋಪಿಗಳು ಬಾಲಕನ ಅಜ್ಜನ ಸೂಚನೆಯಂತೆ ಬಾಲಕನನ್ನು ಅಪಹರಿಸಿದ್ದರು. ಈ ಅಪಹಣದ ಮುಖ್ಯ ಆರೋಪಿ ಬಾಲಕನ ಅಜ್ಜ ಸದ್ಯ ಸೌದಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಕನ ಅಪಹರಣಕ್ಕೆ ಬಳಸಿದ ಕಾರು ಹಾಗೂ ಚಾಕುವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಸೆ. 2ರಂದು ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ
Next Story





