ಅಮೆರಿಕ ವಿರುದ್ಧ ಇರಾನ್ ಆರೋಪ

ಟೆಹ್ರಾನ್, ಆ.೨೨: ೨೦೧೫ರ ಪರಮಾಣು ಒಪ್ಪಂದವನ್ನು ಪುನರುಜ್ಜೀವನಗೊಳಿಸಲು ನಡೆಯುತ್ತಿರುವ ಮಾತುಕತೆಯನ್ನು ಅಮೆರಿಕ ವಿಳಂಬಿಸುತ್ತಿದೆ ಎಂದು ಇರಾನ್ನ ವಿದೇಶಾಂಗ ಇಲಾಖೆಯ ವಕ್ತಾರ ನಾಸೆರ್ ಕನ್ನಾನಿ ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇರಾನ್ ತನ್ನ ಕಾನೂನುಬದ್ಧ ಹಕ್ಕುಗಳನ್ನು ಸಂರಕ್ಷಿಸುವ ಸುಸ್ಥಿರ ಒಪ್ಪಂದವನ್ನು ಬಯಸುತ್ತಿದೆ. ಆದರೆ ಅಮೆರಿಕ ಮಾತುಕತೆಯನ್ನು ಮುಂದೂಡುತ್ತಿದೆ ಎಂದು ಹೇಳಿದ್ದಾರೆ.
Next Story





