ಹೈದರಾಬಾದ್ ಹೋಟೆಲ್ನಲ್ಲಿ ಒಂದೇ ಕುಟುಂಬದ 4 ಮಂದಿ ಮೃತ್ಯು, ಆತ್ಮಹತ್ಯೆ ಶಂಕೆ: ಪೊಲೀಸರ ಮಾಹಿತಿ
Photo:PTI
ನಿಝಾಮಾಬಾದ್ (ಹೈದರಾಬಾದ್): ದಂಪತಿ ಹಾಗೂ ಅವರ ಇಬ್ಬರು ಮಕ್ಕಳು ಹೈದರಾಬಾದ್ನ ನಿಝಾಮಾಬಾದ್ ಪಟ್ಟಣದ ಹೋಟೆಲ್ ಕೊಠಡಿಯಲ್ಲಿ ರವಿವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸೂರ್ಯಪ್ರಕಾಶ್ (37ವರ್ಷ) ಅವರ ಪತ್ನಿ ಅಕ್ಷಯ, ಮಗಳು ಪ್ರತೂಷಾ (13) ಹಾಗೂ ಮಗ ಅದ್ವೈತ್ (10) ವಿಷ ಸೇವಿಸಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿಝಾಮಾಬಾದ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಾರ, ಸೂರ್ಯಪ್ರಕಾಶ್ ಅವರು ಹೈದರಾಬಾದ್ನ ಮಾದಾಪುರ ಹಾಗೂ ಕೊಂಡಾಪುರ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ಹೊಂದಿದ್ದು, ನಷ್ಟವನ್ನು ಎದುರಿಸುತ್ತಿದ್ದರು.
ಅವರು ತಮ್ಮ ಮೂವರು ವ್ಯಾಪಾರ ಪಾಲುದಾರರಿಂದ ಹಣವನ್ನು ಸಾಲ ಪಡೆದಿದ್ದರು. ಪಾಲುದಾರರು ಹಣವನ್ನು ಹಿಂದಿರುಗಿಸುವಂತೆ ಒತ್ತಡ ಹೇರುತ್ತಿದ್ದರು.
ಕುಟುಂಬವು ನಿಝಾಮಾಬಾದ್ನ ಹೋಟೆಲ್ಗೆ ಬಂದಿದ್ದು, ಅಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಸೂರ್ಯಪ್ರಕಾಶ್ ಅವರ ವ್ಯಾಪಾರ ಪಾಲುದಾರರು ತನಗೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಸಾಲ ಪಡೆದ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.