ಕೋವಿಡ್ ಸಂದರ್ಭ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ತಂಡ ಮಹತ್ವದ ಕಾರ್ಯ ನಿರ್ವಹಿಸಿದೆ: ವೇದವ್ಯಾಸ ಕಾಮತ್
ವೆನ್ಲಾಕ್ ಆವರಣದಲ್ಲಿ ವಾಚನಾಲಯ ಉದ್ಘಾಟನಾ ಕಾರ್ಯಕ್ರಮ

ಮಂಗಳೂರು : ಕೋವಿಡ್ ಸಂದರ್ಭದಲ್ಲಿ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ತಂಡ ರೋಗಿಗಳ ಪ್ರಾಣ ಉಳಿಸುವಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್ ನೆನಪಿಸಿಕೊಂಡರು.
ವೆನ್ಲಾಕ್ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ.ಕ ಜಿಲ್ಲೆ. ಯುವ ರೆಡ್ ಕ್ರಾಸ್ ಘಟಕ ಮಂಗಳೂರು ವಿಶ್ವ ವಿದ್ಯಾನಿಲಯ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಸಮುದಾಯ ವಾಚನಾಲಯ ಸಮನ್ವಯ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿಂದು ಸಮುದಾಯ ವಾಚನಾಲಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ಉದ್ಘಾಟಕರಾಗಿ ಭಾಗವಹಿಸಿದ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಶುಭ ಹಾರೈಸಿ ವೆನ್ಲಾಕ್ ಆಸ್ಪತ್ರೆ,ಅಲ್ಲಿನ ರೋಗಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ದ ದೃಷ್ಟಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಮನ್ವಯ ಸಮಿತಿಯ ಮೂಲಕ ಹಮ್ಮಿಕೊಂಡಿರುವ ಸಮುದಾಯ ಸಹಾಯ ಕೇಂದ್ರ, ಸಮುದಾಯ ವಾಚನಾಲ ಯ ಮಾದರಿ ಕಾರ್ಯಕ್ರಮ ಎಂದು ಶುಭ ಹಾರೈಸಿದರು.
ಮಂಗಳೂರು ಮಹಾನಗರ ಪಾಲಿಕೆ ಮಹಾ ಪೌರರಾದ ಪ್ರೇಮಾನಂದ ಶೆಟ್ಟಿ ದಾನಿಗಳಿಗೆ ಗೌರವಾರ್ಪಣೆ ಮಾಡಿ ಸಮುದಾಯ ವಾಚನಾಲಯ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಣೆಗೆ ಮನಪಾ ವತಿಯಿಂದ ಸಹಕಾರ ನೀಡುವುದಾಗಿ ಶುಭ ಹಾರೈಸಿದರು.
ಅತಿಥಿ ಗಳಾಗಿ ದ.ಕ.ಜಿ.ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಅನ ಸೂಯ ರೈ, ಶ್ರೀ ಅನಘ ರಿಫೈನರೀಸ್ ಪ್ರೈವೇ ಟ್ .ಲಿ.ನ ಆಡಳಿತ ನಿರ್ದೇಶಕ ಸಾಂಬ ಶಿವರಾವ್, ಕೆಐಒಸಿಎಲ್ (ಎಚ್ .ಆರ್ &ಕೊ ಆರ್ಡಿನೇಶನ್) ಹಿರಿಯ ಪ್ರಬಂಧ ಕ ಮುರುಗೇಶ್, ಮಹಾರಾಷ್ಟ್ರ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಮತ್ತು ಸಮುದಾಯ ವಾಚನಾಲಯ ಮಂಗಳೂರು. ದ.ಕ.ಜಿಲ್ಲೆಯ ಸಮನ್ವಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸಮಾ ರಂಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ವೆನ್ಲಾಕ್ ಅಧೀಕ್ಷಕ ಡಾ.ಸದಾಶಿವ ಸ್ವಾಗತಿಸಿದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ ಜಿಲ್ಲೆಯ ಸಭಾಪತಿ ಶಾಂತರಾ ಮ ಶೆಟ್ಟಿ ವಂದಿಸಿದರು.ಹಿರಿಯ ವೈದ್ಯರಾದ ಡಾ.ಕೆ.ಆರ್.ಕಾಮತ್ ಸಮುದಾಯ ವಾಚನಾಲಯದ ರೂಪುಗೊಂಡ ಬಗ್ಗೆ ವಿವರಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ)ದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮನ್ವಯ ಸಮಿತಿ ಯ ಸದಸ್ಯ ಭಾಸ್ಕರ ರೈ ಕಟ್ಟ ,ಪುಷ್ಷರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.