ಗುರುವಾರದವರೆಗೆ ಶಿವಸೇನಾ ಚಿಹ್ನೆ ಕುರಿತು ಕ್ರಮ ಕೈಗೊಳ್ಳಬೇಡಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಶಿವಸೇನಾಗೆ ಸಂಬಂಧಿಸಿದ ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ

Photo:PTI
ಹೊಸದಿಲ್ಲಿ: ಶಿವಸೇನೆ ವಿರುದ್ಧದ ದಾವೆಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ (Supreme Court)ಇಂದು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (Maharashtra Chief Minister Eknath Shinde and Shiv Sena chief Uddhav Thackeray)ನಡುವಿನ ಕದನವನ್ನು ನಿರ್ಧರಿಸಲು ವಿಸ್ತ್ರತ ಪೀಠಕ್ಕೆ ಎಂಟು ಪ್ರಶ್ನೆಗಳನ್ನು ನ್ಯಾಯಾಲಯ ಸಿದ್ಧಪಡಿಸಿದೆ.
ಠಾಕ್ರೆ ಮತ್ತು ಶಿಂಧೆ ಅವರ ಪಾಳಯಗಳ ನಡುವಿನ ಪಕ್ಷದ ಚಿಹ್ನೆ ವಿವಾದದ ಬಗ್ಗೆ ಗುರುವಾರದವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಚುನಾವಣಾ ಆಯೋಗಕ್ಕೆ(Election Commission) ಸುಪ್ರೀಂಕೋರ್ಟ್ ಸೂಚಿಸಿದೆ.
ಐವರು ಸದಸ್ಯರ ಸಾಂವಿಧಾನಿಕ ಪೀಠ ಗುರುವಾರ ಅರ್ಜಿಯ ವಿಚಾರಣೆ ನಡೆಸಲಿದೆ.
ಶಾಸಕರ ಅನರ್ಹತೆ ಹಾಗೂ ಇತರ ತಾಂತ್ರಿಕ ಸಮಸ್ಯೆಗಳ ಕುರಿತು ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.
ಉದ್ಧವ್ ಠಾಕ್ರೆ ಅವರ ತಂಡದ ಎಲ್ಲಾ ಮನವಿಗಳನ್ನು ವಜಾಗೊಳಿಸುವಂತೆ ಹಾಗೂ ಯಾರ ಬಣ ನಿಜವಾದ ಶಿವಸೇನೆ ಎಂಬುದನ್ನು ಚುನಾವಣಾ ಆಯೋಗವು ನಿರ್ಧರಿಸಲಿ ಎಂದು ಶಿಂಧೆ ಕಳೆದ ತಿಂಗಳ ಕೊನೆಯಲ್ಲಿ ಸುಪ್ರೀಂ ಕೋರ್ಟ್ಗೆ ಒತ್ತಾಯಿಸಿದ್ದರು.







