Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾರತೀಯ ಪೌರತ್ವ ದೊರೆಯದೆ...

ಭಾರತೀಯ ಪೌರತ್ವ ದೊರೆಯದೆ ವಾಪಸಾಗುತ್ತಿರುವ ಹಲವು ಪಾಕ್ ಹಿಂದೂ ನಿರಾಶ್ರಿತರು

ವಾರ್ತಾಭಾರತಿವಾರ್ತಾಭಾರತಿ23 Aug 2022 2:18 PM IST
share
ಭಾರತೀಯ ಪೌರತ್ವ ದೊರೆಯದೆ ವಾಪಸಾಗುತ್ತಿರುವ ಹಲವು ಪಾಕ್ ಹಿಂದೂ ನಿರಾಶ್ರಿತರು

ಜೈಸಲ್ಮೇರ್: ನಿರಾಶ್ರಿತರಿಗೆ ಭಾರತೀಯ ಪೌರತ್ವ(Indian citizenship) ನೀಡುವ ಕುರಿತಂತೆ ಕಠಿಣ ನಿಯಮಗಳನ್ನು ಸರಕಾರ ಜಾರಿಗೆ ತಂದಿರುವುದರಿಂದ ದೊಡ್ಡ ಸಂಖ್ಯೆಯ ಪಾಕಿಸ್ತಾನಿ ಹಿಂದು ನಿರಾಶ್ರಿತರು(refugees) ಪೌರತ್ವ ದೊರೆಯದೆ ಮರಳಿ ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆ ಎಂದು timesofindia ವರದಿ ಮಾಡಿದೆ.

ಅವರು ಅಲ್ಲಿ ದೌರ್ಜನ್ಯವೆದುರಿಸಿ ಭಾರತಕ್ಕೆ ಬಂದಿದ್ದರು. ಈ ವರ್ಷದ ಜನವರಿಯಿಂದ ಜುಲೈ ತನಕ 334 ಪಾಕಿಸ್ತಾನಿ ಹಿಂದು ನಿರಾಶ್ರಿತರು ಭಾರತೀಯ ಪೌರತ್ವ ದೊರೆಯದೆ ತಮ್ಮ ದೇಶಕ್ಕೆ ವಾಪಸಾಗಿದ್ದಾರೆ ಎಂದು ವರದಿಯಾಗಿದೆ.

"2021ರಿಂದ ಇಲ್ಲಿಯ ತನಕ ಸುಮಾರು 1500 ಪಾಕಿಸ್ತಾನಿ ಹಿಂದುಗಳು ಪಾಕಿಸ್ತಾನಕ್ಕೆ ವಾಪಸಾಗಿದ್ದಾರೆ. ಭಾರತೀಯ ಪೌರತ್ವ ಪಡೆಯುವ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆಗಳನ್ನು ನಡೆಸಲು ಇವರಲ್ಲಿ ಹೆಚ್ಚಿನವರಿಗೆ ಹಣ ಹಾಗೂ ಸಂಪನ್ಮೂಲಗಳಿಲ್ಲ. ಇದೇ ಕಾರಣಕ್ಕೆ ಅವರು ವಾಪಸಾಗುತ್ತಿದ್ದಾರೆ,'' ಎಂದು ಸಿಮಂತ್ ಲೋಕ್ ಸಂಘಟನ್ ಅಧ್ಯಕ್ಷ ಹಿಂದು ಸಿಂಗ್ ಸೋಧ ಹೇಳುತ್ತಾರೆ.

ಭಾರತೀಯ ಪೌರತ್ವಕ್ಕಾಗಿ ಕಾದಿರುವ ಸುಮಾರು 25,000 ಪಾಕ್ ಹಿಂದುಗಳಿದ್ದಾರೆ ಹಾಗೂ ಅವರು ಇಲ್ಲಿ ಕಳೆದ 10-15 ವರ್ಷಗಳಿಂದ ನೆಲೆಸಿದ್ದಾರೆ ಎಂದು ಅವರು ಹೇಳಿದರು.

2004 ಹಾಗೂ 2005 ರಲ್ಲಿ ನಡೆದ ಶಿಬಿರಗಳಲ್ಲಿ 13000 ಪಾಕ್ ಹಿಂದುಗಳಿಗೆ ಭಾರತೀಯ ಪೌರತ್ವ ದೊರಕಿದ್ದರೆ ಕಳೆದ ಐದು ವರ್ಷಗಳಲ್ಲಿ ಕೇವಲ 2000 ಮಂದಿಗೆ ಪೌರತ್ವ ದೊರಕಿದೆ ಎಂದು ವರದಿಯಾಗಿದೆ.

ಸರಕಾರದ ನಿಯಮಗಳ ಪ್ರಕಾರ ಪಾಕಿಸ್ತಾನಿ ಹಿಂದುಗಳು ಭಾರತದ ಪೌರತ್ವ ಪಡೆಯಬೇಕಾದರೆ ಪಾಕಿಸ್ತಾನಿ ದೂತಾವಾಸದಿಂದ ತಮ್ಮ ಪಾಸ್‍ಪೋರ್ಟ್ ನವೀಕರಿಸಬೇಕಿದೆ ಮತ್ತು ಪಾಸ್‍ಪೋರ್ಟ್ ಹಸ್ತಾಂತರಿಸುವ ಕುರಿಂತೆ ಅಲ್ಲಿನ ದೂತಾವಾಸದಿಂದ ಪ್ರಮಾಣಪತ್ರ ಕೂಡ ಪಡೆಯಬೇಕಿದೆ.

ಪಾಕ್ ದೂತಾವಾಸದಲ್ಲಿ ಪಾಸ್‍ಪೋರ್ಟ್ ನವೀಕರಣ ಶುಲ್ಕ ರೂ. 8000 ದಿಂದ ರೂ. 10,000 ದಷ್ಟಿದ್ದು ಬಡ ನಿರಾಶ್ರಿತರಿಗೆ ಇಷ್ಟೊಂದು ಹಣ ಪಾವತಿಸಲು ಸಾಧ್ಯವಿಲ್ಲದೇ ಇರುವುದರಿಂದ ಹಲವರು ವಾಪಸಾಗುತ್ತಿದ್ದು ನಿಯಮಗಳನ್ನು ಸರಳೀಕರಿಸಬೇಕೆಂದು ಸೋಧ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನಿಷೇದಾಜ್ಞೆ ಪಾಲಿಸ್ತೀವಿ, ಆಗಸ್ಟ್‌ 26ಕ್ಕೆ 'ಕೊಡಗು ಚಲೋ' ಇಲ್ಲ: ಸಿದ್ದರಾಮಯ್ಯ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X