ಪಕ್ಷದ ಕಾರ್ಯಕರ್ತರ ಬಂಧನದ ವಿರುದ್ಧ ಪ್ರತಿಭಟನೆ: ತೆಲಂಗಾಣ ಬಿಜೆಪಿ ಅಧ್ಯಕ್ಷ ಪೊಲೀಸ್ ವಶಕ್ಕೆ

Photo: Twitter/@bandisanjay_bjp
ಹೈದರಾಬಾದ್ (ತೆಲಂಗಾಣ): ತೆಲಂಗಾಣ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ (
Telangana Bharatiya Janata Party chief Bandi Sanjay Kumar) ಅವರನ್ನು ತೆಲಂಗಾಣ ಪೊಲೀಸರು ಮಂಗಳವಾರ ಜನಗಾಂವ್ ಜಿಲ್ಲೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ನಾಯಕ ಹಾಗೂ ಅಧಿಕೃತ ವಕ್ತಾರ ಎನ್.ವಿ. ಸುಭಾಷ್ ಅವರು ಅಧ್ಯಕ್ಷರನ್ನು ವಶಪಡಿಸಿಕೊಂಡ ವರದಿಗಳನ್ನು ಖಚಿತಪಡಿಸಿದ್ದಾರೆ.
"ಹೈದರಾಬಾದ್ನಲ್ಲಿ ಬಿಜೆಪಿ ಕಾರ್ಯಕರ್ತರ ಬಂಧನದ ವಿರುದ್ಧ ಜನಗಾಂವ್ ಜಿಲ್ಲೆಯಲ್ಲಿ ಬಂಡಿ ಪ್ರತಿಭಟನೆ ನಡೆಸುತ್ತಿದ್ದರು" ಎಂದು ಸುಭಾಷ್ ಹೇಳಿದರು.
ಹೈದರಾಬಾದ್ನಲ್ಲಿ ಸೋಮವಾರ ಎಂಎಲ್ಸಿ ಕವಿತಾ ಅವರ ನಿವಾಸದ ಮೇಲೆ ದಾಳಿ ನಡೆಸಿದ ಬಿಜೆಪಿ ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ಅವರು ಪ್ರತಿಭಟನೆ ನಡೆಸಿದರು.
ಇದಕ್ಕೂ ಮುನ್ನ, ಪ್ರವಾದಿ ಮುಹಮ್ಮದ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ಹೈದರಾಬಾದ್ ಪೊಲೀಸರು ಮಂಗಳವಾರ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ ಹೈದರಾಬಾದ್ ದಕ್ಷಿಣ ವಲಯ ಪೊಲೀಸರು ರಾಜಾ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153a, 295, ಮತ್ತು 505 ರ ಅಡಿಯಲ್ಲಿ ದಬೀರ್ಪುರ ಪೊಲೀಸ್ ಠಾಣೆಯಲ್ಲಿ ಶಾಸಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.







