Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಅನೇಕ ದೇವಾಲಯಗಳಲ್ಲಿ ಮಾಂಸ, ಮದ್ಯದ...

ಅನೇಕ ದೇವಾಲಯಗಳಲ್ಲಿ ಮಾಂಸ, ಮದ್ಯದ ನೈವೇದ್ಯ ಪದ್ಧತಿಯಿದೆ: ಎಚ್.ಎಂ.ರೇವಣ್ಣ

''ದೇಶದಲ್ಲಿ ಶೇ.79ರಷ್ಟು ಮಂದಿ ಮಾಂಸಾಹಾರಿಗಳು''

ವಾರ್ತಾಭಾರತಿವಾರ್ತಾಭಾರತಿ23 Aug 2022 6:35 PM IST
share
ಅನೇಕ ದೇವಾಲಯಗಳಲ್ಲಿ ಮಾಂಸ, ಮದ್ಯದ ನೈವೇದ್ಯ ಪದ್ಧತಿಯಿದೆ: ಎಚ್.ಎಂ.ರೇವಣ್ಣ

ಬೆಂಗಳೂರು, ಆ.23: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಾಲಯ ಪ್ರವೇಶಿಸಿದರು ಎಂದು ಆರೋಪಿಸಿ, ಅವರ ವಿರುದ್ಧ ಬಿಜೆಪಿಯವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಮ್ಮ ದೇಶದಲ್ಲಿ ಶೇ.79ರಷ್ಟು ಮಂದಿ ಮಾಂಸಾಹಾರಿಗಳು ಇದ್ದಾರೆ. ಹಿಂದಿನಿಂದಲೂ ಅನೇಕ ದೇವಾಲಯಗಳಲ್ಲಿ ಮಾಂಸವನ್ನು ನೈವೇದ್ಯ ಮಾಡಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ. 

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಂಡವಪುರದ ಆಲತಿಹುತ್ತ ದೇವಾಲಯ, ದಿಲ್ಲಿ ಸಮೀಪದ ಭೈರವೇಶ್ವರ ದೇವಾಲಯದಲ್ಲಿ ಬ್ರಾಂದಿ ಹಾಗೂ ಮಾಂಸ ನೈವೇದ್ಯ ಮಾಡುತ್ತಾರೆ. ಕೇರಳದ ಕನ್ನೂರು ಜಿಲ್ಲೆಯ ಇರ್ಕೂರಿನ ದೇವಾಲಯವೊಂದರಲ್ಲಿ ಕೋಳಿ ಹಾಗೂ ಮದ್ಯವನ್ನು ಇಟ್ಟು ಪೂಜೆ ಮಾಡಿ ಪ್ರಸಾದವಾಗಿ ನೀಡುತ್ತಾರೆ ಎಂದರು.

ಬಿಜೆಪಿಯವರು ಪ್ರಚಲಿತ ವಿಚಾರ, ಜನರ ಸಮಸ್ಯೆ ಬಿಟ್ಟು, ಚುನಾವಣೆ ವರ್ಷಗಳಲ್ಲಿ ಇಂತಹ ನಾಟಕವನ್ನು ಮಾಡುತ್ತಾರೆ. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳ ಚುನಾವಣೆ ಸಮಯದಲ್ಲೂ ಇಂತಹ ವಿಚಾರಗಳನ್ನು ಚರ್ಚೆಗೆ ತಂದರು. ಆದರೆ ಯಾವುದೇ ಸಹಾಯ ಆಗಲಿಲ್ಲ. ಕರ್ನಾಟಕದಲ್ಲೂ ಇಂತಹ ವಿಚಾರಗಳಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಸರಕಾರದ ಇಂತಹ ಗಿಮಿಕ್ ಅನ್ನು ಜನ ಒಪ್ಪುವುದಿಲ್ಲ ಎಂದು ಅವರು ಹೇಳಿದರು. 

ನೆರೆ ಪೀಡಿತ ಕೊಡಗು ಜಿಲ್ಲೆ ಜನರ ಸಂಕಷ್ಟಗಳನ್ನು ಆಲಿಸಲು ಸಿದ್ದರಾಮಯ್ಯ ತೆರಳಿದಾಗ ಅವರ ಕಾರಿಗೆ ಮೊಟ್ಟೆ ಹೊಡೆದು, ಗೋ ಬ್ಯಾಕ್ ಸಿದ್ದರಾಮಯ್ಯ ಎಂಬ ಘೋಷಣೆ ಕೂಗಿರುವುದಕ್ಕೆ ರಾಜ್ಯಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿದೆ. ವಿಷಯಾಂತರ ಮಾಡುವಲ್ಲಿ ಬಿಜೆಪಿಯವರು ನಿಸ್ಸೀಮರು. ಸಂಸದ ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆಯುವುದು ತಪ್ಪು, ಆದರೆ, ಅವರ ಮಾತಿನಿಂದ ಉದ್ರೇಕಗೊಂಡು ಈ ಕೃತ್ಯ ಎಸಗಲಾಗಿದೆ ಎಂಬ ಸಮರ್ಥನೆಯನ್ನು ನೀಡಿದ್ದಾರೆ ಎಂದು ರೇವಣ್ಣ ಹೇಳಿದರು.

ಎರಡು ರೀತಿಯಲ್ಲಿ ಮಾತನಾಡುವ ಪ್ರತಾಪ ಸಿಂಹನನ್ನು ‘ಗುಳ್ಳೆ ನರಿ ಸಿಂಹ’ ಎಂದು ಕರೆಯಬೇಕು. ಇಂಧನ ಸಚಿವ ಸುನೀಲ್ ಕುಮಾರ್, ಶಾಸಕರಾದ ರೇಣುಕಾಚಾರ್ಯ, ಸಿ.ಟಿ.ರವಿ ಇದೇ ದಾಟಿಯಲ್ಲಿ ಮಾತನಾಡುತ್ತಿದ್ದಾರೆ. ಅಕ್ರಮ ನೇಮಕಾತಿ ಹಗರಣಗಳ ಬಗ್ಗೆ ಚರ್ಚೆ ಮಾಡುವ ಬದಲು ಮಾಂಸಾಹಾರ ಹಾಗೂ ಸಸ್ಯಾಹಾರ ವಿಚಾರವಾಗಿ ಚರ್ಚೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. 

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ರಾಜ್ಯದಲ್ಲಿನ ಭ್ರಷ್ಟಾಚಾರ ಕುರಿತು ಪ್ರಧಾನಿಗೆ ಎರಡನೇ ಪತ್ರವನ್ನು ಸಿದ್ಧಪಡಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಬಂದಿದೆ. ಭ್ರಷ್ಟಾಚಾರ, ಅಭಿವೃದ್ಧಿ ಕುಂಠಿತ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪ್ರವಾಹದಿಂದ 74 ಜನ ಸತ್ತಿರುವುದಾಗಿ ಕಂದಾಯ ಸಚಿವರೆ ಹೇಳಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದು ಸರಕಾರದ ಕರ್ತವ್ಯವಾಗಿದೆ ಎಂದರು.

ಆದರೆ ಸರಕಾರ ಎಲ್ಲ ರೀತಿ ವಿಫಲವಾಗಿರುವ ಸಮಯದಲ್ಲಿ ಸಿದ್ದರಾಮಯ್ಯ ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಿ ಅಲ್ಲಿನ ಸಮಸ್ಯೆ ಆಲಿಸಲು ಹೋದಾಗ ಜನರ ದಾರಿ ತಪ್ಪಿಸಲು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿಯವರು ಆಹಾರ ವ್ಯವಸ್ಥೆ ಮೇಲೆ ಪುಂಖಾನುಪುಂಖವಾದ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು. 

ದೇಶದಲ್ಲಿ ಅಘೋರಿಗಳು, ನಾಗಸಾಧುಗಳು, ಋಷಿಮುನಿಗಳ ಆಹಾರ ಪದ್ಧತಿ ಬೇರೆ ಬೇರೆ ಇದೆ. ಬಿಜೆಪಿಯ ಆಧುನಿಕ ರಾಮಭಕ್ತರು ಎಷ್ಟು ಜನ ರಾಮಾಯಣ ಓದಿದ್ದಾರೆ. ರಾಮ, ಲಕ್ಷ್ಮಣ, ಸೀತೆ ವನವಾಸಕ್ಕೆ ತೆರಳುವಾಗ ಸೀತೆಯು ಗಂಗಾ ಮಾತೆಗೆ ‘ತಾಯಿ ನೀನು 14 ವರ್ಷ ನಮ್ಮನ್ನು ರಕ್ಷಣೆ ಮಾಡು, ನಾವು ಹಿಂತಿರುಗಿದ ನಂತರ ನಿಮಗೆ ತೃಪ್ತಿಯಾಗುವಷ್ಟು ಮಾಂಸ ಹಾಗೂ ಮದ್ಯದ ನೈವೇದ್ಯ ನೀಡುತ್ತೇನೆ’ ಎಂದು ಹೇಳುತ್ತಾಳೆ ಎಂದು ಉಗ್ರಪ್ಪ ತಿಳಿಸಿದರು. 

ಭಾರಧ್ವಜರ ಆಶ್ರಮಕ್ಕೆ ಹೋದಾಗ ಮಹರ್ಷಿ ಭಾರಧ್ವಜರು ಶ್ರೀರಾಮನಿಗೆ ‘ನೀನು ಕ್ಷತ್ರಿಯ. ನೀನು, ಲಕ್ಷ್ಮಣ ಹಾಗೂ ನಿನ್ನ ಮಡದಿ ಸೀತೆ ಮಾಂಸಾಹಾರಿಯಾಗಿದ್ದು, ನಿಮಗೆ ಮಾಂಸಾಹಾರ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾರೆ’. ಶಿವನಿಗೆ ಬೇಡರ ಕಣ್ಣಪ್ಪ ಮಾಂಸದ ನೈವೇದ್ಯ ನೀಡುತ್ತಾರೆ. ತಿರುಪತಿ ತಿಮ್ಮಪ್ಪನ ಒಕ್ಕಲಿನವರು ಶ್ರಾವಣ ಶನಿವಾರದಲ್ಲಿ ಮಾಂಸದ ನೈವೇದ್ಯ ನೀಡುತ್ತಾರೆ. ತುಮಕೂರಿನ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಮಾಂಸದ ನೈವೇದ್ಯ ನೀಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಂಸಾಹಾರಿಗಳು ಅತ್ಯಂತ ಸ್ವಾಭಿಮಾನಿಗಳು, ದೈವ ಭಕ್ತರು. ಮಾಂಸ ತಿಂದ ಮಾತ್ರಕ್ಕೆ ಭಕ್ತಿ ಕಡಿಮೆ ಆಗುವುದಿಲ್ಲ. ಮಾಹಿತಿ, ವೈಚಾರಿಕತೆ ತಿಳಿದುಕೊಳ್ಳದೆ ಸಮಾಜವನ್ನು ಒಡೆದು ಆಳುವ ಪ್ರಯತ್ನವನ್ನು ಪ್ರಬುದ್ಧ ಜನರು ಗಮನಿಸಲಿದ್ದಾರೆ. ಇಂತಹ ಅವಕಾಶವಾದಿ ಹೇಳಿಕೆ ನೀಡುವ, ಆಹಾರ, ಬಟ್ಟೆ, ಆಚಾರ ವಿಚಾರವಾಗಿ ಸಮಾಜ ಒಡೆಯುವ ಬಿಜೆಪಿಯವರಿಗೆ ರಾಜ್ಯ ಹಾಗೂ ದೇಶದಲ್ಲಿ ಪಾಠ ಕಲಿಸುತ್ತಾರೆ ಎಂದು ಉಗ್ರಪ್ಪ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಎಂ.ರಾಮಚಂದ್ರಪ್ಪ, ಮುಖಂಡರಾದ ಗೋವಿಂದ ರೆಡ್ಡಿ, ಮಂಜುನಾಥ್ ಉಪಸ್ಥಿತರಿದ್ದರು.

-----------------------------------

ದೇಶದಲ್ಲಿ ಈಗ ನಾಗಪುರದ ಚಿತ್ಪಾವನ್ ಬ್ರಾಹ್ಮಿನ್ ಮತ್ತು ಇತರರ ವಿಚಾರಧಾರೆ ನಡುವೆ ಸಂಘರ್ಷ ನಡೆಯುತ್ತಿದೆ. ಸ್ವಾಮಿ ವಿವೇಕಾನಂದರು ಮೀನು, ಏಡಿ, ಸಿಗಡಿ ಸೇರಿದಂತೆ ಸಮುದ್ರದ ಆಹಾರ ಸ್ವೀಕರಿಸುತ್ತಿರಲಿಲ್ಲವೇ? ಅವರು ಹಿಂದೂಗಳಲ್ಲವೇ? ದೇವರಿಗೆ ಹೃದಯದಲ್ಲಿ ಭಕ್ತಿ ಇರಬೇಕು. ಮಾಂಸಾಹಾರಿಗಳನ್ನು ದ್ವೇಷಿಸುವವರು ಇಂದು ವಂಚನೆಯಲ್ಲಿ ಪೂಜೆ ಮಾಡುತ್ತಿದ್ದಾರೆಯೇ ಹೊರತು ನಿಜವಾದ ಭಕ್ತಿಯಿಂದ ಅಲ್ಲ. ಬಿಜೆಪಿ ಹಾಗೂ ಆರೆಸೆಸ್ಸ್‍ನವರಿಗೆ ಧಮ್ಮು ತಾಕತ್ತು ಇದ್ದರೆ, ಮೊಟ್ಟೆ, ಮಾಂಸ, ಮೀನು ತಿನ್ನುವವರ ಮತ ಬೇಕಿಲ್ಲ, ಇವರು ನಮ್ಮ ಶಾಖೆಗೆ ಬರುವುದು ಬೇಡ ಎಂದು ಘೋಷಿಸಲಿ. 

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X