ಚಿಕ್ಕಮಗಳೂರು | BJP ಮುಖಂಡ ನೀಡಿದ ಕೇಸರಿ ಶಾಲು ಹೊದ್ದು ಫೋಟೊ ಕ್ಲಿಕ್ಕಿಸಿಕೊಂಡ ಎಸ್ಪಿ
ಫೋಟೊ ವೈರಲ್, ಸಾರ್ವಜನಿಕ ವಲಯದಲ್ಲಿ ಅಸಮಾಧಾನ

ಚಿಕ್ಕಮಗಳೂರು, ಆ.23: ಜಿಲ್ಲೆಯ ನೂತನ ಎಸ್ಪಿ ಉಮಾ ಪ್ರಶಾಂತ್ ಅವರು ಬಿಜೆಪಿ ಮುಖಂಡರೊಬ್ಬರು ನೀಡಿದ್ದ ಕೇಸರಿ ಶಾಲು ಹೊದ್ದು ಪೊಟೊ ಕ್ಲಿಕ್ಕಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಸದ್ಯ ನೂತನ ಎಸ್ಪಿ (Chikkamagaluru) ಕೇಸರಿ ಶಾಲು ಹೊದ್ದಿರುವ ಪೊಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ನೂತನ ಎಸ್ಪಿಯಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿರುವ ಉಮಾ ಪ್ರಶಾಂತ್ ಅವರನ್ನು ಸಾರ್ವಜನಿಕರು, ಮಹಿಳಾ ಸಂಘಟನೆಗಳು, ವಿವಿಧ ಸಂಘಸಂಸ್ಥೆಗಳೂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಅಭಿನಂದಿಸುತ್ತಿದ್ದಾರೆ. ಹೀಗೆ ಅಭಿನಂದಿಸುವ ಸಂಘಟನೆಗಳ ಮುಖಂಡರು ಯಾವುದೇ ಪಕ್ಷ, ಸಂಘಟನೆಗಳಿಗೆ ಸೇರಿದ ಶಾಲು ಹೊದಿಸಿರುವ ಉದಾಹರಣೆ ಇಲ್ಲ. ಆದರೆ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿರುವ ದೇವನೂರು ರವಿ ಎಂಬವರು ಮಂಗಳವಾರ ಎಸ್ಪಿ ಕಚೇರಿಯಲ್ಲಿ ಉಮಾ ಪ್ರಶಾಂತ್ ಅವರನ್ನು ಅಭಿನಂದಿಸಿದ್ದು, ಈ ವೇಳೆ ಅವರು ಕೇಸರಿ ಶಾಲನ್ನು ಹೊದಿಸಿದ್ದಾರೆ.
ಈ ಶಾಲನ್ನು ಪೊಲೀಸ್ ಸಮವಸ್ತ್ರದ ಮೇಲೆಯೇ ಹೊದ್ದಿರುವ ಎಸ್ಪಿ ಉಮಾ ಪ್ರಶಾಂತ್ ಬಿಜೆಪಿ ಮುಖಂಡನೊಂದಿಗೆ ಪೊಟೊ ಕ್ಲಿಕ್ಕಿಸಿಕೊಂಡಿರುವುದು ಫೋಟೊದಲ್ಲಿ ಕಾಣಿಸಿಕೊಂಡಿದೆ.
ಇದನ್ನೂ ಓದಿ ► ನಿಷೇಧಾಜ್ಞೆ ತೆರವಾದ ಬಳಿಕ ‘ಕೊಡಗು ಚಲೋ’: ಹೆಚ್.ಸಿ.ಮಹದೇವಪ್ಪ







