ಬೈಂದೂರು: ಪ್ರತಿಭಾವಂತ ವಿದ್ಯಾರ್ಥಿ, ಉಲೆಮಾ, ಮುಅಝ್ಝಿನ್‌ಗಳಿಗೆ ಸನ್ಮಾನ

ಬೈಂದೂರು : ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕ ಮತ್ತು ನಾಖುದಾ ವೆಲ್ಫೇರ್ ಅಸೊಸಿಯೇಶನ್ ಶಿರೂರು ಇವುಗಳ ಜಂಟಿ ಆಶ್ರಯದಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಮಸೀದಿ ಮದ್ರಸಾಗಳಲ್ಲಿ 10 ವರ್ಷಗಳಿಗೂ ಅಧಿಕ ಸೇವೆ ಸಲ್ಲಿಸಿದ ಉಲೆಮಾ ಮತ್ತು ಮುಅಝ್ಝಿನ್ ಅವರ ಸನ್ಮಾನ ಕಾರ್ಯಕ್ರಮವು ಶಿರೂರು ಮಾರ್ಕೆಟ್‌ನ ಮಿಫ್ತಾಹುಲ್ ಉಲೂಮ್ ಮದ್ರಸದಲ್ಲಿ ಜರಗಿತು.
ಈ ಸಂದರ್ಭದಲ್ಲಿ 30 ಮಂದಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿ.ಯು.ಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಮಸೀದಿ ಮದ್ರಸಾಗಳಲ್ಲಿ 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಸುಮಾರು 13 ಉಲೆಮಾ ಮತ್ತು ಮುಅಝ್ಝಿನ್ ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಅಬ್ದುರ‌್ರಕೀಬ್ ಶೇಖ್ಜಿ, ಚಾರ್ಟರ್ಡ್ ಅಕೌಂಟಂಟ್ ಮಹಮ್ಮದ್ ಆದಿಲ್, ಕೆ.ಎಂ.ಸಿ. ಮಣಿಪಾಲ್ ಉಪನ್ಯಾಸಕಿ ಸಮ್ರೀನ್ ಶೇಖ್, ಡಾ.ಮಹಮ್ಮದ್ ಅಲಿ ಹಬೀಬುಲ್ಲಾ, ಮೆಕಾಟ್ರಾನಿಕ್ಸ್ ಇಂಜಿನಿಯರ್ ಮಣೆಗಾರ್ ಸಾಬಿತ್, ಜಾಮಿಯ ಝಿಯಾಉಲ್ ಉಲೂಮ್ ಲೆಕ್ಚರರ್ ಝಮೀರ್ ಅಹ್ಮದ್ ರಶಾದಿ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಎಂ.ಎಂ.ಜಿಫ್ರಿ ಶಿರೂರು, ನಾಖುದಾ ವೆಲ್ಫೇರ್ ಅಸೊಸಿಯೇಶನ್ ಅಧ್ಯಕ್ಷ ಮಮ್ದು ಇಬ್ರಾಹೀಮ್, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಖಜಾಂಚಿ ಸಯ್ಯದ್ ಮಹಮ್ಮದ್ ಅಜ್ಮಲ್, ಮಿಫ್ತಾಹುಲ್ ಉಲೂಮ್ ಮದ್ರಸಾ ಅಧ್ಯಕ್ಷ ಬುಡ್ಡು ಯೂಸುಫ್, ಅಬ್ದುಲ್ಲಾ ತಲಾಹಿ ಮಸ್ಜಿದ್ ಅಧ್ಯಕ್ಷ ಬುಡ್ಜಿ ಅಬೂಬಕರ್, ಜಿಲ್ಲಾ ಸದಸ್ಯರಾದ ಪರಿ ಹುಸೈನ್, ಮಹಮ್ಮದ್ ಇಲಿಯಾಸ್ ಬೈಂದೂರು, ತಾಲೂಕು ಕಾರ್ಯದರ್ಶಿ ಮುಕ್ರಿ ಅಲ್ತಾಫ್, ಸದಸ್ಯರಾದ ಮನೇಗಾರ್ ಮನ್ಸೂರ್, ಮೊಹ್ಸಿನ್ ಬುವಾಜಿ, ಮಹಮ್ಮದ್ ತಾಹಾ, ಮಹಮ್ಮದ್ ಅಮ್ಮಾರ್ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಸ್ವಾಗತಿಸಿದರು. ಮುಫ್ತಿ ಮಹಮ್ಮದ್ ಸಾಕಿಬ್ ಬುಡ್ಜಿ ಕುರಾನ್ ಪಠಿಸಿದರು. ಸದಸ್ಯ ಕಾಪ್ಸಿ ಖಲೀಲ್ ವಂದಿಸಿದರು. ತಂಝೀಮ್ ಅಧ್ಯಕ್ಷ ಮೌಲಾನಾ ಬಾವುದ್ದಿನ್ ದುವಾ ನೆರವೇರಿಸಿದರು. ನಾಖುದಾ ವೆಲ್ಫೇರ್ ಅಸೊಸಿಯೇಶನ್ ಶಿರೂರಿನ ಸದಸ್ಯ ಹೊಂಗೆ ನೂರುಲ್ ಇಸ್ಲಾಮ್ ಕಾರ್ಯಕ್ರಮ ನಿರೂಪಿಸಿದರು.






.jpeg)
.jpeg)

.jpeg)
.jpeg)

.jpeg)



