ಬಿಜೆಪಿ ಸೇರುವ ಊಹಾಪೋಹ: ತ್ರಿಪುರಾ ಮುಖ್ಯಸ್ಥನನ್ನು ವಜಾಗೊಳಿಸಿದ ಟಿಎಂಸಿ

Photo:PTI
ಗುವಾಹಟಿ: ಬಿಜೆಪಿಗೆ ಮರಳಬಹುದು ಎಂಬ ಊಹಾಪೋಹಗಳ ನಡುವೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ತ್ರಿಪುರಾ ರಾಜ್ಯ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಸುಬಲ್ ಭೌಮಿಕ್ ಅವರನ್ನು ಬುಧವಾರ ವಜಾಗೊಳಿಸಲಾಗಿದೆ.(The Trinamool Congress (TMC) on Wednesday sacked Subal Bhowmik )
ಭೌಮಿಕ್ ಕಳೆದ ಕೆಲವು ದಿನಗಳಿಂದ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ.
ಹೊಸ ರಾಜ್ಯಾಧ್ಯಕ್ಷರ ನೇಮಕವಾಗುವವರೆಗೆ ಪಶ್ಚಿಮ ಬಂಗಾಳದ ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ, ತ್ರಿಪುರಾ ಪಕ್ಷದ ಉಸ್ತುವಾರಿ ಹಾಗೂ ರಾಜ್ಯಸಭಾ ಸಂಸದೆ ಸುಸ್ಮಿತಾ ದೇವ್ ಅವರು ಪಕ್ಷದ ಕಾರ್ಯಚಟುವಟಿಕೆಯನ್ನು ನೋಡಿಕೊಳ್ಳುತ್ತಾರೆ ಎಂದು ಟಿಎಂಸಿ ಘೋಷಿಸಿದೆ.
ಆಗಸ್ಟ್ 28 ರಂದು ತ್ರಿಪುರಾಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿಯ ಸಂದರ್ಭದಲ್ಲಿ ಭೌಮಿಕ್ ಬಿಜೆಪಿಗೆ ಸೇರುವ ಸಾಧ್ಯತೆಯಿದೆ.
Next Story





