ಕೇರಳ ತುಳು ಅಕಾಡಮಿ ಅಧ್ಯಕ್ಷರಾಗಿ ಕೆ.ಆರ್.ಜಯಾನಂದ ನೇಮಕ

ಕೆ.ಆರ್.ಜಯಾನಂದ
ಕಾಸರಗೋಡು, ಆ.24: ಕೇರಳ ತುಳು ಅಕಾಡಮಿಯ ನೂತನ ಅಧ್ಯಕ್ಷರಾಗಿ ಕೆ.ಆರ್.ಜಯಾನಂದ ನೇಮಕಗೊಂಡಿದ್ದಾರೆ. ಅಕಾಡಮಿಯನ್ನು ಪುನಾರಚಿಸಿ ಸಾಂಸ್ಕೃತಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಅಧ್ಯಕ್ಷ, ಕಾರ್ಯದರ್ಶಿ, ಮೂವರು ಅಧಿಕೃತ ಸದಸ್ಯರು ಸೇರಿದಂತೆ 17 ಮಂದಿ ಆಡಳಿತ ಸಮಿತಿಯಲ್ಲಿದ್ದಾರೆ.
ಕಾರ್ಯದರ್ಶಿಯಾಗಿ ಕಾಸರಗೋಡು ಸಹಕಾರಿ ಸಹಾಯಕ ನೋಂದಣಾಧಿಕಾರಿ ಎ.ರವೀಂದ್ರನಾಥ್ ಆಯ್ಕೆಯಾಗಿದ್ದಾರೆ. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎ.ಕೆ.ಎಂ.ಅಶ್ರಫ್ ಹಾಗೂ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಅಧಿಕೃತ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಮಂಗಳೂರು ಸಹಿತ 10 ಮಹಾನಗರ ಪಾಲಿಕೆಗಳ ಮೇಯರ್-ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಪ್ರಕಟ
ನ್ಯಾಯವಾದಿ ಜಿ.ಚಂದ್ರ ಮೋಹನ್, ಕೃಷ್ಣವೇಣಿ ಟೀಚರ್, ಜೋಸೆಫ್ ಕ್ರಾಸ್ತಾ, ಸಿ.ಕೆ.ಅಜಿತ್ ಚಿಪ್ಪಾರ್, ಉದಯ್ ಸಾರಂಗ್, ಗಣೇಶ್ , ಭುಜಂಗ ಶೆಟ್ಟಿ, ಎ.ಚಂದ್ರಶೇಖರ್, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಾರತಿ ಸುಳ್ಯಮೆ, ಪೈವಳಿಕೆ ಗ್ರಾಪಂ ಅಧ್ಯಕ್ಷೆ ಜಯಂತಿ, ಅಬ್ದುಲ್ಲ ಪೈವಳಿಕೆ, ಗಂಗಾಧರ ದುರ್ಗಿಪಳ್ಳ ಮೊದಲಾದವರು ಸಮಿತಿ ಸದಸ್ಯ ರಾಗಿ ಆಯ್ಕೆಯಾಗಿದ್ದಾರೆ.







