ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

ಮಂಗಳೂರು, ಆ.24: ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ವಿಭಾಗದ ವತಿಯಿಂದ ಕೊಂಕಣಿ ಮಾನ್ಯತಾ ದಿನವನ್ನು ಇಂದು ಆಚರಿಸಲಾಯಿತು.
ಗುಮ್ಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಸಂಸ್ಥೆಯ ರೆಕ್ಟರ್ ಪಾ. ಮೆಲ್ವಿನ್ ಪಿಂಟೋ ಹಾಗೂ ಕಾಲೇಜಿನ ಪ್ರಾಂಶುಪಾಲ ಫಾ. ಪ್ರವೀಣ್ ಮಾರ್ಟಿಸ್ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ದೈಜಿವರ್ಲ್ಡ್ ಸಂಸ್ಥೆಯ ನಿರ್ದೇಶಕ ವಾಲ್ಟರ್ ನಂದಳಿಕೆ ಭಾಗವಹಿಸಿದ್ದರು. ಕೊಂಕಣಿ ಸಂಘದ ಅಧ್ಯಕ್ಷ ಫ್ಲೋರ ಕ್ಯಾಸ್ತಲಿನೋ, ಸೆವ್ರಿನ್ ಪಿಂಟೋ, ರಿಷಲ್, ದಿವ್ಯ ಜ್ಯೋತಿ ಹಾಗೂ ವಿದ್ಯಾರ್ಥಿ ಕಾರ್ಯದರ್ಶಿ ಜಾಯಲ್ ಕ್ರಾಸ್ತಾ, ಸ್ಟೀವನ್ ಅಲ್ಮೇಡಾ ಉಪಸ್ಥಿತರಿದ್ದರು.
Next Story





