ರಾಜ್ಯ ಮಟ್ಟದ ಸ್ಕೇಟಿಂಗ್: ನಿರ್ಮಯ್‌ಗೆ ಬೆಳ್ಳಿ ಕಂಚಿನ ಪದಕ

ಮಂಗಳೂರು, ಆ.24: ಬೆಂಗಳೂರಿನ ಸಿಟಿ ಸ್ಕೇಟರ್ಸ್ ಅರೇನಾದಲ್ಲಿ ಇತ್ತೀಚೆಗೆ ನಡೆದ ಮುಕ್ತ ರಾಜ್ಯ ಮಟ್ಟದ ಸ್ಕೇಟಿಂಗ್ (ಕ್ವಾರ್ಡ್ ವಿಭಾಗ ) 11ರಿಂದ 14 ವರ್ಷದ ವಿಭಾಗದ ಪಂದ್ಯದಲ್ಲಿ ನಿರ್ಮಯ್ ವೈ.ಎನ್. ಅವರು ರಿಂಕ್ 1000 ಮೀ. ಮತ್ತು 500ಡಿಯಲ್ಲಿ 2 ಬೆಳ್ಳಿ ಪದಕ ಹಾಗೂ ರೋಡ್ ರೇಸ್ 1500 ಮೀ. ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ನಿರ್ಮಯ್ ಅವರು ಉರ್ವ ಹೊಯಿಗೆಬೈಲ್ ನಿವಾಸಿ ಯದುನಂದನ್ ಹಾಗೂ ವಿಜಯಲಕ್ಷ್ಮಿದಂಪತಿ ಪುತ್ರನಾಗಿದ್ದು ಪ್ರಸ್ತುತ ಲೇಡಿಹಿಲ್ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ೮ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮಂಗಳೂರಿನ ಎಫ್‌ಡಿಎಸ್‌ಸಿಯ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಸದಸ್ಯರಾಗಿದ್ದು, ತರಬೇತುದಾರರಾದ ಜಯರಾಜ್, ಮೋಹನ್, ರಮಾನಂದ, ಹರ್ಷದ್ ಹುಸೇನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
Next Story