ಗಾಂಜಾ ಸೇವನೆ: ಐವರು ಪೊಲೀಸ್ ವಶಕ್ಕೆ

ಉಡುಪಿ : ಗಾಂಜಾ ಸೇವನೆಗೆ ಸಂಬಂಧಿಸಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆ.22ರಂದು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಣಿಯೂರು ಎಂಬಲ್ಲಿ ಮೂಳೂರಿನ ತುಫೇಲ್(19), ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಪೊಲಿಪು ಜಂಕ್ಷನ್ ಬಳಿ ಶಿರ್ವದ ಮಹಮ್ಮದ್ ಅಫ್ರಜ್(19), ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪಾಲ ಆರ್‌ಟಿಓ ಕಛೇರಿ ರಸ್ತೆಯಲ್ಲಿ ಹೈದರಬಾದ್ ಮೂಲದ ರಿಶಿತ್ ಶಿವಕುಮಾರ್ ವಡ್ಡೆಪಳ್ಳಿ(21), ಮಣಿಪಾಲ ಕಾಯಿನ್ ಸರ್ಕಲ್ ಬಳಿ ಮಡಿಕೇರಿಯ ನಕುಲ್ ಪೊನ್ನಪ್ಪ(21), ಮಣಿಪಾಲ ಪೆರಂಪಳ್ಳಿ ರಸ್ತೆಯಲ್ಲಿ ಬಿಹಾರ ರಾಜ್ಯದ ಅನುರಾಗ್ ಕುಮಾರ್(20) ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story