ಹೊಸಂಗಡಿ; ಅಯ್ಯಪ್ಪ ಮಂದಿರದಿಂದ ಕಳವು: ಆರೋಪಿ ಲಕ್ಷ್ಮೀಶ ಬಂಧನ

ಕಾಸರಗೋಡು: ಮಂಜೇಶ್ವರ ಹೊಸಂಗಡಿಯ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆದ ಪಂಚಲೋಹ ವಿಗ್ರಹ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ಮಜಿಬೈಲ್ ನ ಲಕ್ಷ್ಮೀಶ (49) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 20ರಂದು ಕಳವು ಕೃತ್ಯ ಬೆಳಕಿಗೆ ಬಂದಿತ್ತು. ಗರ್ಭಗುಡಿಯೊಳಗಿದ್ದ ದೇವರ ಪಂಚ ಲೋಹ ವಿಗ್ರಹವನ್ನು ಕಳವುಗೈದು, ಕ್ಷೇತ್ರದ ಮುಂಭಾಗ ಹಾಗೂ ತೀರ್ಥ ಮಂಟಪದಲ್ಲಿದ್ದ ಕಾಣಿಕೆ ಹುಂಡಿಗಳಿಂದ ಹಣವನ್ನು ದೋಚಲಾಗಿತ್ತು. ಬಳಿಕ ಹುಂಡಿಗಳನ್ನು ಕ್ಷೇತ್ರ ಸಮೀಪ ಎಸೆದು ಪರಾರಿಯಾಗಿದ್ದನು. ಕಳವುಗೈಯ್ಯಲಾದ ವಿಗ್ರಹ ಪೊದೆಗಳೆಡೆಯಲ್ಲಿ ಪತ್ತೆಯಾಗಿತ್ತು.
ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಹಿಂದುತ್ವ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಈ ವೇಳೆ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದರು.
ಕಳವು ಪ್ರಕರಣ ದಾಖಲಿಸಿಕೊಂಡಿದ್ದ ಮಂಜೇಶ್ವರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಓರ್ವ ಆರೋಪಿ ಲಕ್ಷ್ಮೀಶನನ್ನು ಮಂಗಳವಾರ ಸಂಜೆ ಬಂಧಿಸಿದ್ದಾರೆ.
The protest happened after the theft https://t.co/2MoMV7hk1D
— Mohammed Irshad (@Shaad_Bajpe) August 25, 2022







