ಉಡುಪಿ: ಕನಿಷ್ಠ ಪಿಂಚಣಿಗೆ ಒತ್ತಾಯಿಸಿ ಸಿಐಟಿಯು ಮನವಿ

ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಪಿಂಚಣಿದಾರರ ಸಂಘಟನೆ(ಇಪಿಎಫ್ಒ)ಯ ಕರೆಯ ಮೇರೆಗೆ ಸಿಐಟಿಯು ನೇತೃತ್ವದ ನಿಯೋಗ ಇಂದು ಉಡುಪಿಯಲ್ಲಿರುವ ಪಿ.ಎಫ್ ಕಛೇರಿಯಲ್ಲಿ ಅಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.
3000ರೂ. ಪಿಂಚಣಿ ನೀಡಬೇಕು. ಬೆಲೆಯೇರಿಕೆಗೆ ಅನುಗುಣವಾಗಿ ತುಟ್ಟಿಭತ್ಯೆ ನೀಡಬೇಕು. ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.
ನಿಯೋಗದಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಎಚ್ ನರಸಿಂಹ, ಮಹಾಬಲ ಹೋಡೆಯರ ಹೋಬಳಿ, ಶಶಿಧರ್ ಗೋಲ್ಲ, ಕವಿರಾಜ್. ಎಸ್.ಉಮೇಶ್ ಕುಂದರ್, ಬಲ್ಕೀಸ್, ನಳಿನಿ ಡಿ., ಗಿರಿಜ, ಸುನೀತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Next Story