ಪುತ್ತೂರು: ಕೆಫೆಯಲ್ಲಿ ಸೇರಿದ್ದ ಯುವಕ-ಯುವತಿಯರು; ಹಿಂದುತ್ವ ಸಂಘಟನೆ ಕಾರ್ಯಕರ್ತರ ವಿರೋಧ

ಸಾಂದರ್ಭಿಕ ಚಿತ್ರ (ಚರೆದಿತ: increasily)
ಪುತ್ತೂರು(Puttur): ನಗರದ ಖಾಸಗಿ ಬಸ್ಸು ನಿಲ್ದಾಣದ ಸಮೀಪದ ಕೆಫೆ ಒಂದರಲ್ಲಿ ಬೇರೆ ಬೇರೆ ಧರ್ಮಕ್ಕೆ ಸೇರಿದ್ದ ಯುವಕ ಮತ್ತು ಯುವತಿಯರು ಜತೆಯಾಗಿ ಕುಳಿತು ಆಹಾರ ಸೇವಿಸಿರುವುದನ್ನು ಹಿಂದುತ್ವ ಸಂಘಟನೆಯ ಕೆಲ ಕಾರ್ಯಕರ್ತರು ಆಕ್ಷೇಪಿಸಿದ್ದು, ನಂತರ ಪೊಲೀಸರು ಮಧ್ಯ ಪ್ರವೇಶಿಸಿ ತಿಳಿಗೊಳಿಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ವಿದ್ಯಾರ್ಥಿಗಳು ಕೆಫೆಯಲ್ಲಿ 'ಗೆಟ್ ಟು ಗೆದರ್' ನಡೆಸುತ್ತಿದ್ದರು. ಇದನ್ನು ವಿರೋಧಿಸಿ ಹಿಂದುತ್ವ ಸಂಘಟನೆಯ ಕೆಲ ಯುವಕರು ಕೆಫೆ ಮುಂಭಾಗ ಜಮಾವಣೆಗೊಂಡಿದ್ದರು. ಈ ಬಗ್ಗೆ ಮಾಹಿತಿ ಅರಿತ ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗೊಂದಲ ತಿಳಿಗೊಳಿಸುವ ಕಾರ್ಯ ನಡೆಸಿದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಆರ್ಥಿಕ ಕೊರತೆಯಿಂದ ಗುತ್ತಿಗೆದಾರರಿಗೆ ಹಣ ಪಾವತಿ ಬಾಕಿ: ಸಚಿವ ಕೋಟ
Next Story