ಮಿತ್ತೂರು: ಕೆ.ಜಿ.ಎನ್ ಕ್ಯಾಂಪಸ್ ನಲ್ಲಿ ಕಲಾ ಮಹೋತ್ಸವ

ವಿಟ್ಲ: ದಾರುಲ್ ಇರ್ಶಾದ್ ಅಧೀನ ಸಂಸ್ಥೆಯಾದ ಕೆ.ಜಿ.ಎನ್. ದಅವಾ ಕಾಲೇಜು ಮಿತ್ತೂರು ಇದರ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನ ಸ್ಟೂಡೆಂಟ್ ಅಸೋಸಿಯೇಷನ್ ಹಮ್ಮಿಕೊಂಡ ಆಗಸ್ಟ್ ತಿಂಗಳ ಮಾಸಿಕ ಕಲಾ ಮಹೋತ್ಸವ ಇತ್ತೀಚೆಗೆ ಕೆ.ಜಿ.ಎನ್ ಕ್ಯಾಂಪಸ್ ನಲ್ಲಿ ನಡೆಯಿತು.
ದಅವಾ ಕಾಲೇಜು ಪ್ರಾಂಶುಪಾಲ ಅಸ್ಸಯ್ಯಿದ್ ಸ್ವಲಾಹುದ್ದೀನ್ ಜಮಲುಲ್ಲೈಲಿ ಅಲ್ ಅದನಿ, ಮುದರ್ರಿಸ್ ಹುಸೈನ್ ಅಹ್ಸನಿ ಅಲ್ ಮುಈನಿ ಮಾರ್ನಾಡ್, ಅಬ್ದುಲ್ಲತೀಫ್ ಸಅದಿ, ಸಾಬಿತ್ ಸಖಾಫಿ, ಹನೀಫ್ ಅಝ್‌ಹರಿ, ಮಶೂದ್ ಸಖಾಫಿ, ಶಾಹುಲ್ ಹಮೀದ್ ಅದನಿ, ನೌರತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯ ಉಪ ಪ್ರಾಂಶುಪಾಲ ಅಬ್ದುರ್ರಹ್ಮಾನ್ ಮುಈನಿ, ಸಮದ್ ಮುಈನಿ ಮತ್ತಿತರು ಉಪಸ್ಥಿತರಿದ್ದರು.
ಕಲಾ ಸ್ಪರ್ಧೆಯಲ್ಲಿ ಫಝಲ್ ಕಬಕ ನೇತೃತ್ವದ ಟೀಂ ಗ್ರೇಟರ್ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತು.
ಸಯ್ಯಿದ್ ಖುಬೈಬ್, ಸಿದ್ದೀಕ್ ನಂದಾವರ, ನೌಶಾದ್ ಸುಳ್ಯ, ಸಲಾಂ ಸಾಲೆತ್ತೂರು, ಸಾಬಿತ್ ಸಹಕರಿಸಿದರು. ಅಮ್ಮಾರ್ ನೀರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
Next Story





