ಬೇಟಿ ಬಚಾವೋ ಘೋಷಣೆ ನೀಡುವವರು ಅತ್ಯಾಚಾರಿಗಳನ್ನು ರಕ್ಷಿಸುತ್ತಿದ್ದಾರೆ: ರಾಹುಲ್ ಗಾಂಧಿ ಆಕ್ರೋಶ

ಹೊಸದಿಲ್ಲಿ,ಆ.25: ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ಜೈಲು ಶಿಕ್ಷೆಯನ್ನು ರದ್ದುಪಡಿಸಿದ ಗುಜರಾತ್ ಸರಕಾರದ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಖಂಡಿಸಿದ್ದಾರೆ. ಸಂತ್ರಸ್ತೆ ಬಿಲ್ಕಿಸ್ ಬಾನುಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿದ ಅವರು, ಬೇಟಿ ಬಚಾವೋನಂತಹ ಘೋಷಣೆಗಳನ್ನು ನೀಡುವವರು, ಅತ್ಯಾಚಾರಿಗಳನ್ನು ರಕ್ಷಿಸುತ್ತಿದ್ದಾರೆಂದು ಎಂದವರು ಆಪಾದಿಸಿದ್ದಾರೆ.
ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಅವರು ‘ ದೇಶದಲ್ಲಿ ಮಹಿಳೆಯರ ಗೌರವ ಹಾಗೂ ಹಕ್ಕುಗಳ ಬಗ್ಗೆ ಮಾತನಾಡಲಾಗುತ್ತಿದೆ. ಬಿಲ್ಕಿಸ್ ಬಾನೊ ಅವರಿಗೆ ನ್ಯಾಯ ದೊರಕಿಸಿಕೊಡಿ’’ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರ ಅವರು ಕೂಡಾ ಬಿಲ್ಕಿಸ್ ಬಾನುಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.
‘‘ ಅತ್ಯಾಚಾರದ ಪ್ರಕರಣದ 11 ಮಂದಿಯ ಬಿಡುಗಡ್ಗೆ ಹಾಗೂ ಕ್ಯಾಮೆರಾದ ಮುಂದೆಯೇ ಅವರನ್ನು ಸ್ವಾಗತಿಸಿ ಬೆಂಬಲದ ಪ್ರತಿಕ್ರಿಯೆಗಳನ್ನು ನೀಡಿರುವ ಬಗ್ಗೆ ವೌನವಹಿಸುವ ಮೂಲಕ ಸರಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ’’ ಎಂದವರು ಟ್ವೀಟಿಸಿದ್ದಾರೆ.
ಆದರೆ ದೇಶದ ಮಹಿಳೆಯರಿಗೆ ಸಂವಿಧಾನದ ಬಗ್ಗೆ ಭರವಸೆಯಿದೆ. ಕಟ್ಟಕಡೆ ಸಾಲಿನಲ್ಲಿ ನಂತಿರುವ ಮಹಿಳೆಗೂ ನ್ಯಾಯಕ್ಕಾಗಿ ಹೋರಾಡುವಂತಹ ಧೈರ್ಯವನ್ನು ನಮ್ಮ ಸಂವಿಧಾನ ನೀಡಿಈದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.







