ಮಲ್ಪೆ ಬೀಚ್‌ಗೆ ಭೇಟಿ ನೀಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

ಉಡುಪಿ: ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಗುರುವಾರ ಮಲ್ಪೆ ಕಡಲ ಕಿನಾರೆಗೆ ಭೇಟಿ ನೀಡಿ ಬೀಚ್ ಸುತ್ತಮುತ್ತ ಕೆಲವು ಸಮಯ ಕಳೆದರು.
ಈ ವೇಳೆ ಸಚಿವ ವಿ.ಸುನಿಲ್ ಕುಮಾರ್ ರಾಜ್ಯಪಾಲರಿಗೆ ಸಾಥ್ ನೀಡಿದರು. ಮಲ್ಪೆಗೆ ಭೇಟಿ ನೀಡಿದ್ದ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಪ್ರವಾಸಿಗರು, ಹಾವೇರಿ ಜಿಲ್ಲೆಯ ಪ್ರವಾಸಿಗರು ಹಾಗೂ ಸ್ಥಳೀಯರೊಂದಿಗೆ ಸಂವಾದ ನಡೆಸಿದ ರಾಜ್ಯಪಾಲರು ಮಲ್ಪೆ ಹಾಗೂ ಇಲ್ಲಿನ ಸೌಲಭ್ಯಗಳ ಕುರಿತು ಅವರ ಅಭಿಪ್ರಾಯ ಪಡೆದರು.
ಈ ಸಂದರ್ಭದಲ್ಲಿ ಸಚಿವರೊಂದಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Next Story





