ಜಿಲ್ಲಾ ರಜತೋತ್ಸವದಲ್ಲಿ ಮಾಜಿ ಶಾಸಕರ ನಿರ್ಲಕ್ಷ ವಿಷಾಧನೀಯ: ಅಶೋಕ್ ಕುಮಾರ್ ಕೊಡವೂರು

ಉಡುಪಿ: ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದು 25 ವರ್ಷಗಳು ಸಂದಿದ್ದು ಇದೀಗ ನಡೆದಿರುವ ರಜತ ಮಹೋತ್ಸವ ಸಂಭ್ರಮಾಚರಣೆಯ ಸಂದರ್ಭದಲ್ಲಿ ಶಿಷ್ಠಾಚಾರದ ನೆಪದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ, ತಮ್ಮ ಶಾಸಕತ್ವದ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವಿರತ ಶ್ರಮಿಸಿದ ಮಾಜಿ ಶಾಸಕರುಗಳ ಹೆಸರನ್ನು ಉಲ್ಲೇಖಿಸದಿರುವುದು ವಿಷಾದನೀಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಹೇಳಿದ್ದಾರೆ.
ಜಿಲ್ಲಾಡಳಿತದ ಈ ನಡೆಯನ್ನು ಹೇಳಿಕೆಯೊಂದರಲ್ಲಿ ಖಂಡಿಸಿರುವ ಅವರು, ರಾಜ್ಯದ ಮಾಜಿ ನಗರಾಭಿವೃದ್ದಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ ಕುಮಾರ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ ಹಾಗೂ ಇತರೇ ಗಣ್ಯ ಸಚಿವರು, ಜಿಲ್ಲಾ ಉಸ್ತುವಾರಿಗಳು, ಸಂಸದರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಕೈ ಬಿಟ್ಟಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾಡಿದ ಮಹಾಮೋಸ ಎಂದಿದ್ದಾರೆ.
ಜಿಲ್ಲಾ ರಜತೋತ್ಸವ ಸಮಾರಂಭ ಸರಕಾರಿ ಪ್ರಾಯೋಜಿತ ಸಾರ್ವಜನಿಕ ಕಾರ್ಯಕ್ರಮವಾಗಿದೆಯೇ ಹೊರತು ಸರಕಾರದ ಖಾಸಗೀ ಕಾರ್ಯಕ್ರಮವಲ್ಲ. ಆ ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಶಿಷ್ಟಾಚಾರದ ನಿಯಮಾವಳಿಗಳಿಲ್ಲ ಎಂದಿದ್ದಾರೆ.