ಪಡುಬಿದ್ರೆಯಲ್ಲಿ ಆ.29ರಂದು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನೂತನ ಶಾಖೆ ಪ್ರಾರಂಭ

ಮಂಗಳೂರು: ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಇದರ ಪ್ರಥಮ ಶಾಖೆಯು ಉಡುಪಿ ಜಿಲ್ಲೆಯ ಪಡುಬಿದ್ರಿ ಶ್ರೀ ಮಹಾಗಣೇಶ್ ಕಾಂಪ್ಲೆಕ್ಸ್ ನಲ್ಲಿ ಆಗಸ್ಟ್ 29ರಂದು ಸೋಮವಾರ ಬೆಳಗ್ಗೆ ಉದ್ಘಾಟನೆಗೊಳ್ಳಲಿದೆ.
ಈ ಕುರಿತು ಮಾಹಿತಿ ನೀಡಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಚ್ . ವಸಂತ್ ಬರ್ನಾಡ್ , ಕಳೆದ ಒಂದುವರೆ ವರ್ಷಗಳ ಹಿಂದೆ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಕಡಿಮೆ ಅವಧಿಯಲ್ಲಿಯೇ ಉತ್ತಮ ಅಭಿವೃದ್ಧಿ ಹೊಂದಿ ಇದೀಗ ಶಾಖೆ ತೆರೆಯುತ್ತಿರುವುದಕ್ಕೆ ಸಂಘದ ಸದಸ್ಯರ ಮತ್ತು ಗ್ರಾಹಕರ ಸಹಕಾರದಿಂದ ಸಾಧ್ಯವಾಗಿದೆ ಎಂದರು.
ಸಂಘವು ಪ್ರಸ್ತುತ 12 ಕೋಟಿ ರೂ. ಠೇವಣಿಯನ್ನು ಹೊಂದಿದ್ದು, ಪ್ರಥಮ ವರ್ಷದಲ್ಲಿಯೇ ಲಾಭವನ್ನು ಪಡೆದಿದೆ. ಸ್ಥಳೀಯವಾಗಿ ಉದ್ಯೋಗವಕಾಶಗಳ ಸೃಷ್ಠಿಯೊಂದಿಗೆ ಸಹಕಾರ ತತ್ವಗಳನ್ನು ಅನುಷ್ಟಾನ ಗೊಳಿಸಿ ಉಭಯ ಜಿಲ್ಲೆಗಳಲ್ಲಿ ಸಾಮಾಜಿಕ ಸೇವೆಗಳನ್ನು ಮಾಡುವ ಗುರಿಯನ್ನು ಸೊಸೈಟಿ ಹೊಂದಿದೆ ಎಂದು ತಿಳಿಸಿದ್ದಾರೆ.
ಪಡುಬಿದ್ರೆಯ ನೂತನ ಶಾಖೆಯನ್ನು ಕರ್ನಾಟಕ ಸರಕಾರದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ . ಹರಿಪ್ರಸಾದ್ ಅವರು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು ವಹಿಸಲಿದ್ದು, ಮಾಜಿ ಸಚಿವರಾದ ಕೆ. ಅಭಯ ಚಂದ್ರ ಜೈನ್ ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಭದ್ರತಾ ಕೊಠಡಿಯನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟನೆ ಮಾಡಲಿದ್ದಾರೆ. ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಲೋಕಾರ್ಪಣೆ ಮಾಡಲಿದ್ದು, ಯುವ ನಾಯಕ ಮಿಥುನ್ ರೈ ಅವರು ಪ್ರಿಯದರ್ಶಿನಿ ಸ್ವಸಹಾಯ ಗುಂಪಿಗೆ ಚಾಲನೆ ನೀಡಲಿದ್ದಾರೆ. ಠೇವಣಿ ಪತ್ರವನ್ನು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮುಕ್ತೇಶ್ವರರಾದ ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳ್ ಅವರು ಬಿಡುಗಡೆಗೊಳಿಸಲಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರಾದ ಲಕ್ಷ್ಮೀ ನಾರಾಯಣ್ ಅವರು ಪಾಸ್ ಬುಕ್ ವಿತರಿಸಲಿದ್ದಾರೆ.
ಕರ್ನಾಟಕ ದೈವ ಶಾಸ್ತ್ರೀಯ ಮಹಾವಿದ್ಯಾಲಯ ಮಂಗಳೂರು ಇದರ ಪ್ರಾಂಶುಪಾಲರಾದ ರೇ. ಡಾ. ಹ್ಯೂಬಟ್ ಎಂ. ವಾಟ್ಸನ್, ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಬಿ ಸೂರ್ಯ ಕುಮಾರ್, ಹಿಮಾಯತ್ ಇಸ್ಲಾಂ ಸಂಘ ಪಡುಬಿದ್ರೆ ಇದರ ಅಧ್ಯಕ್ಷರಾದ ಶಬೀರ್ ಹುಸೈನ್ ಅವರು ಘನ ಉಪಸ್ಥಿತಿತರಿರುತ್ತಾರೆ.
ಮುಖ್ಯ ಅತಿಥಿಗಳಾಗಿ ಉಡುಪಿಯ ನಾದಶ್ರೀ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಶ್ರೀಧರ್ ದೇವಾಡಿಗ, ಪಡುಬಿದ್ರೆ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ, ಕೆಪಿಸಿಸಿ ಕೋ ಆರ್ಡಿನೇಟರ್ ನವೀನ್ ಚಂದ್ರ ಶೆಟ್ಟಿ, ಮಾಜಿ ಅಧ್ಯಕ್ಷರಾದ ಸಂಜೀವಿ ಪೂಜಾರ್ತಿ, ದಮಯಂತಿಯ ವಿ. ಅಮೀನ್ ಮತ್ತು ಕಟ್ಟಡದ ಮಾಲಕರಾದ ಸುಧಾಕರ್ ದೇವಾಡಿಗ ಅವರು ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭ ಉಪಾಧ್ಯಕ್ಷರಾದ ಶ್ರೀಮತಿ ಪ್ರತಿಭಾ ಕುಲಾಯಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ನಿರ್ದೇಶಕರುಗಳಾದ ಡಾ ಗಣೇಶ್ ಅಮೀನ್ ಸಂಕಮಾರ್, ಧನಂಜಯ ಮಟ್ಟು, ಗೌತಮ್ ಜೈನ್, ಶರತ್ ಶೆಟ್ಟಿ ಪಂಚವಟಿ, ಉಮಾನಾಥ ಜೆ. ಶೆಟ್ಟಿಗಾರ್, ಜೈ ಕೃಷ್ಣ ಕೋಟ್ಯಾನ್, ಗಣೇಶ್ ಪ್ರಸಾದ್ ದೇವಾಡಿಗ, ಧನರಾಜ್ ಕೋಟ್ಯಾನ್, ಮಿರ್ಝಾ ಅಹ್ಮದ್, ಚಿರಂಜೀವಿ ಅಂಚನ್, ಶರೀಲ್ ಅಯೊನ ಐಮನ್, ಹರೀಶ್ ಎನ್. ಪುತ್ರನ್, ನವೀನ್ ಸಾಲಿಯಾನ್, ಸಂದೀಪ್ ಹಾಗೂ ಶಾಖಾ ಪ್ರಬಂಧಕರಾದ ಪ್ರಜ್ಞಾಶ್ರೀ ಉಪಸ್ಥರಿದ್ದರು.