ಪಡುಬಿದ್ರಿ: ಪಿಡಿಒ ಕಾರ್ಯಕ್ಕೆ ಅಡ್ಡಿ ಆರೋಪ; ದೂರು

ಪಡುಬಿದ್ರಿ: ನನ್ನ ವಿರುದ್ದ ಪದೇ ಪದೇ ಮೇಲಾಧಿಕಾರಿಗಳಿಗೆ ದೋಷಪೂರಿತ ಹೆಗೆತನ ಸಾಧಿಸುವ ಮತ್ತು ವರ್ಗಾವಣೆ ಮಾಡವೇಕೆನ್ನುವ ಉದ್ದೇಶದಿಂದ ಸುಳ್ಳು ದೂರು ನೀಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ವಿರುದ್ದ ಮುದರಂಗಡಿ ಗ್ರಾಮ ಪಂಚಾಯಿತಿ ಪಿಡಿಒ ಸುರೇಶ್ ದೂರು ನೀಡಿದ್ದಾರೆ.
ನಾನು 2020ರ ಅಕ್ಟೋಬರ್ 5ರಿಂದ ಮುದರಂಗಡಿ ಗ್ರಾಮದ ಮುದರಂಗಡಿ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದೇನೆ. ಗ್ರಾಮ ಪಂಚಾಯತ್ನ ಉಪಾಧ್ಯಕ್ಷ ಶರತ್ ಶೆಟ್ಟಿ, ಅಧ್ಯಕ್ಷೆ ಯೋಗಿನಿ ಶೆಟ್ಟಿ ಮತ್ತು ಶಿವರಾಮ ಭಂಡಾರಿಯವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಸಾಧಿಸುವ ನಿಟ್ಟಿನಲ್ಲಿ ನನ್ನ ಮೇಲೆ ಒತ್ತಡ ಹೇರಿ, ಕಾನೂನುಬಾಹಿರ ಕೃತ್ಯವೆಸಗಲು ಪ್ರೇರೇಪಿಸಿರುವುದನ್ನು ಒಪ್ಪದಿರುವಾಗ ಎರಡು ಬಾರಿ ಸುಳ್ಳುದೂರುಗಳನ್ನು ನೀಡಿ ಕಾರ್ಯ ಚಟುವಟಿಕೆಗಳ ಮೇಲೆ ಇಲಾಖಾಧಿಕಾರಿಗಳು ತನಿಖೆಜಿಲ್ಲಾಧಿಕಾರಿ ನಡೆಸುವಂತೆ ಮಾಡಿದ್ದಾರೆ.
ಈ ಬಗ್ಗೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ, ಸಹಾಯಕ ಕಾರ್ಯದರ್ಶಿ, ಅಧೀಕ್ಷಕರು, ಅಭಿವೃದ್ಧಿ ಶಾಖೆ ರವರು ಮುದರಂಗಡಿ ಗ್ರಾಮ ಪಂಚಾಯತಿಗೆ ಆಗಮಿಸಿ ನಡೆಸಿದ ತನಿಖೆಯಲ್ಲಿ ಆರೋಪ ಸುಳ್ಳೆಂದು ಸಾಬೀತಾಗಿತ್ತು. ನಂತರದ ದಿನಗಳಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶರತ್ ಶೆಟ್ಟಿ, ಅಧ್ಯಕ್ಷೆ ಯೋಗಿನಿ ಶೆಟ್ಟಿ, ನಮ್ಮ ಮಾತಿಗೆ ಬೆಲೆ ಕೊಡದಿದ್ದರೆ, ಸಿಬ್ಬಂದಿಗಳ ವೇತನ, ಸಾದಿಲ್ವಾರು ಬಿಲ್ಲುಗಳಿಗೆ ಸಹಿ ಹಾಕಲು ಬಿಡುವುದಿಲ್ಲ. ಇಷ್ಟ ಇದ್ದರೆ ಕೆಲಸ ಮಾಡು, ಬೇರೆ ಅಧಿಕಾರಿಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಮತ್ತು ಗ್ರಾಮ ಪಂಚಾಯತಿಗೆ ನಾಳೆಯಿಂದ ಬೀಗಹಾಕುತ್ತೇವೆ ಎಂದು ಬೆದರಿಸಿದ್ದಾರೆ. ಸರ್ಕಾರಿ ಪ್ರೌಢಶಾಲೆ ವಿದ್ಯಾನಗರದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲೂ ತಾನೊಬ್ಬ ಅಧಿಕಾರಿಯಾಗಿದ್ದರೂ ಹೀಯಾಳಿಸಿ ಏಕವಚನದಲ್ಲಿ ನಿಂದಿಸಿದ್ದಾರೆ. ಎರಡೆರಡು ಬಾರಿ ವರ್ಗಾವಣೆ ಆದೇಶವನ್ನು ಮಾಡಿಸಿರುತ್ತಾರೆ. ಅಲ್ಲದೇ ಪಂಚಾಯತಿಯಲ್ಲಿ ಸೇವೆ ಮಾಡಲು ಬಿಡುವುದಿಲ್ಲ ಎನ್ನುವ ದುರುದ್ದೇಶದಿಂದ ಇತರೆ 7 ಜನ ಸದಸ್ಯರನ್ನು ಒಟ್ಟುಗೂಡಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಎದುರು ಪ್ರತಿಭಟನೆ ನಡೆಸಿ ಮೌಖಿಕ ದೂರು ನೀಡಿದ್ದಾರೆ.
ಇದರಿಂದ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಮೇಲಾಧಿಕಾರಿಗಳಿಗೆ ದ್ವೇಷಪೂರಿತ ಹಗೆತನ ಸಾಧಿಸುವ ಮತ್ತು ವರ್ಗಾವಣೆ ಮಾಡಬೇಕೆನ್ನುವ ಉದ್ದೇಶದಿಂದ ಪದೇ ಪದೇ ಸುಳ್ಳು ದೂರುಗಳನ್ನು ನೀಡುತ್ತಾ ತೊಂದರೆ ನೀಡಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.