Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸೋನಾಲಿ ಫೋಗಟ್‌ರನ್ನು ಅತ್ಯಾಚಾರ ಎಸಗಿ...

ಸೋನಾಲಿ ಫೋಗಟ್‌ರನ್ನು ಅತ್ಯಾಚಾರ ಎಸಗಿ ಹತ್ಯೆಗೈಯಲಾಗಿದೆ: ಕುಟುಂಬ ಆರೋಪ

ವಾರ್ತಾಭಾರತಿವಾರ್ತಾಭಾರತಿ25 Aug 2022 11:51 PM IST
share
ಸೋನಾಲಿ ಫೋಗಟ್‌ರನ್ನು ಅತ್ಯಾಚಾರ ಎಸಗಿ ಹತ್ಯೆಗೈಯಲಾಗಿದೆ: ಕುಟುಂಬ ಆರೋಪ

‌ಪಣಜಿ, ಆ. 25: ತನ್ನ ಸಹೋದರಿಯನ್ನು ಆಕೆಯ ಆಪ್ತ ಸಹಾಯಕ ಸುಧೀರ್ ಸಂಗ್ವಾನ್ ಹಾಗೂ ಆತನ ಗೆಳೆಯ ಸುಖ್ವಿಂದರ್ ಅತ್ಯಾಚಾರ ಎಸಗಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಿ ಸೋನಾಲಿ ಫೋಗಟ್ ಸಹೋದರ ರಿಂಕು ಧಾಕಾ ಅವರು ಗೋವಾ ಪೊಲೀಸರಿಗೆ ದೂರು ನೀಡಿದ್ದಾರೆ.
‌
ಬಿಜೆಪಿಯ ನಾಯಕಿಯಾಗಿರುವ ಸೋನಾಲಿ ಫೋಗಟ್ ಅವರು ಆಗಸ್ಟ್ 23ರಂದು ಸಾವನ್ನಪ್ಪುವ ಕೆಲವು ಗಂಟೆಗಳಿಗೆ ಮುನ್ನ ತನ್ನ ತಾಯಿ, ಸಹೋದರಿ ಹಾಗೂ ಸೋದರಳಿಯನೊಂದಿಗೆ ಮಾತನಾಡಿದ್ದಾರೆ. ಮಾತುಕತೆಯ ಸಂದರ್ಭ ಅವರು ತನ್ನ ಸಿಬ್ಬಂದಿ ಬಗ್ಗೆ ದೂರಿದ್ದಾರೆ ಎಂದು ರಿಂಕು ಧಾಕಾ ದೂರಿನಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ:  ಬಾಗಲಕೋಟೆ; ಪುರಸಭೆ ಅಧ್ಯಕ್ಷರ‌ ಪದಗ್ರಹಣ ವೇಳೆ ಕುರಾನ್ ಪಠಿಸಿದ ಆರೋಪ: ಸಭಾಂಗಣಕ್ಕೆ ಗೋಮೂತ್ರ ಸಿಂಪಡಿಸಿದ BJP ಸದಸ್ಯರು

‘‘ಸಂಗ್ವಾನ್ ತನಗೆ ಮತ್ತು ಬರುವ ಔಷಧ ಸೇರಿಸಿದ ಆಹಾರ ನೀಡಿದ್ದ. ತಾನು ಪ್ರಜ್ಞೆ ಕಳೆದುಕೊಂಡ ಬಳಿಕ ಅತ್ಯಾಚಾರ ಎಸಗಿದ್ದ ಹಾಗೂ ವೀಡಿಯೊ ಮಾಡಿದ್ದ. ಅನಂತರ ವೀಡಿಯೊವನ್ನು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಲಾಗುವುದು ಎಂದು ಬೆದರಿಕೆ ಒಡ್ಡಿದ್ದ ಎಂದು ಆಕೆ (ಸೋನಾಲಿ) ತಿಳಿಸಿದ್ದಾಳೆ’’ ಎಂದು ದೂರಿನಲ್ಲಿ ಹೇಳಲಾಗಿದೆ.

ರಾಜಕೀಯ ಹಾಗೂ ನಟನೆಯ ವೃತ್ತಿ ಬದುಕನ್ನು ನಾಶಮಾಡಲಾಗುವುದು ಎಂದು ಸಂಗ್ವಾನ್ ಬೆದರಿಕೆ ಕೂಡ ಒಡ್ಡಿದ್ದ. ಅಲ್ಲದೆ, ಆಕೆಯ ಮೊಬೈಲ್ ಫೋನ್, ಸೊತ್ತಿನ ದಾಖಲೆಗಳು, ಎಟಿಎಂ ಕಾರ್ಡ್ ಹಾಗೂ ಮನೆಯ ಕೀಲಿ ಕೈಗಳನ್ನು ವಶಪಡಿಸಿಕೊಂಡಿದ್ದ ಎಂದು ದೂರಿನಲ್ಲಿ ಪ್ರತಿಪಾದಿಸಲಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸೋನಾಲಿ ಫೋಗಟ್ ಅವರ ಸೋದರಳಿಯ ಮೋನಿಂದರ್ ಫೋಗಟ್, ನಮ್ಮ ಸಹೋದರಿಯನ್ನು ಅತ್ಯಾಚಾರಗೈದು ಹತ್ಯೆಗೈಯಲಾಗಿದೆ ಎಂಬದು ಖಚಿತವಾಗಿದೆ ಎಂದಿದ್ದಾರೆ. ಗೋವಾದಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆ ಬಗ್ಗೆ ಸೋನಾಲಿ ಕುಟಂಬದ ಸದಸ್ಯರು ತೃಪ್ತರಾಗಿಲ್ಲ. ನಾವು ಹೊಸದಿಲ್ಲಿ ಏಮ್ಸ್‌ನಲ್ಲಿ ಸಹೋದರಿಯ ಮರಣೋತ್ತರ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲಿದ್ದೇವೆ ಎಂದು ರಿಂಕು ಧಾಕಾ ತಿಳಿಸಿದ್ದಾರೆ.

‘‘ನಮಗೆ ಇಲ್ಲಿ ತೃಪ್ತಿಯಾಗಿಲ್ಲ. ನಾವು ದಿಲ್ಲಿಯ ಏಮ್ಸ್‌ನಲ್ಲಿ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲಿದ್ದೇವೆ. ನನ್ನ ಸಹೋದರಿ ಬಿಜೆಪಿಗೆ ಬದ್ಧರಾಗಿದ್ದರು. ಆದರೆ, ಒಬ್ಬನೇ ಒಬ್ಬ ಬಿಜೆಪಿ ನಾಯಕ ನಮಗೆ ನೆರವು ನೀಡಲು ಇಲ್ಲಿಗೆ ಬಂದಿಲ್ಲ. ನಮಗೆ ನ್ಯಾಯ ಬೇಕು’’ ಎಂದು ರಿಂಕು ಧಾಕಾ ಹೇಳಿದ್ದಾರೆ.

ತನ್ನ ಸಹೋದರಿಗೆ ವಿಷ ಪ್ರಾಶನ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ‘‘ನನ್ನ ಸಹೋದರಿಯ ಮೃತ ದೇಹವನ್ನು ನೋಡಿದ್ದೇನೆ. ಆಕೆಯ  ಮುಖ, ಕಿವಿ ನೀಲಿ ಬಣ್ಣಕ್ಕೆ ತಿರುಗಿತ್ತು. ದೇಹದ ಒಳಗೆ ವಿಷ ಇದ್ದರೆ ಮಾತ್ರ ಹೀಗಾಗುತ್ತದೆ. ಹೃದಯಾಘಾತದಿಂದ ಹೀಗಾಗುವುದಿಲ್ಲ’’ ಎಂದಿದ್ದಾರೆ.

ಈ ನಡುವೆ ಸೋನಾಲಿ ಫೋಗಟ್‌ನ 15 ವರ್ಷದ ಪುತ್ರಿ ಯಶೋಧರಾ, ‘‘ನನ್ನ ತಾಯಿಯ ಸಾವಿಗೆ ನ್ಯಾಯ ದೊರೆಯಬೇಕು. ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’’ ಎಂದು ಹೇಳಿದ್ದಾಳೆ.

ಹರ್ಯಾಣದ ಹಿಸಾರ್ ಜಿಲ್ಲೆಯ 42ರ ಹರೆಯದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಮಂಗಳವಾರ ಗೋವಾದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿತ್ತು. ಅವರನ್ನು ಉತ್ತರ ಗೋವಾದ ಅಂಜುನಾದಲ್ಲಿರುವ ಸಂತ ಆ್ಯಂಟನಿ ಆಸ್ಪತ್ರೆಗೆ ತರಲಾಗಿತ್ತು. ಆದರೆ, ಅಲ್ಲಿಗೆ ಕರೆ ತರುವ ಮುನ್ನವೇ ಅವರು ಮೃತಪಟ್ಟಿದ್ದರು.

ಆಂಭದಲ್ಲಿ ಸೋನಾಲಿ ಫೋಗಟ್ ಅವರ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ, ಅನಂತರ ಅವರ ಕುಟುಂಬ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು.

ಸಿಬಿಐ ತನಿಖೆಗೆ ಕುಟುಂಬ ಆಗ್ರಹ 

ಸೋನಾಲಿ ಫೋಗಟ್ ಅವರ ಮೃತದೇಹದಲ್ಲಿ ಹಲವು ಗಾಯಗಳಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗಗೊಂಡ ಬಳಿಕ ಅವರ ಕುಟುಂಬ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದೆ.

ಈ ನಡುವೆ ಸೋನಾಲಿ ಫೋಗಟ್ ಅವರನ್ನು ಅತ್ಯಾಚಾರಗೈದು ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾದ ಅವರ ಆಪ್ತ ಕಾರ್ಯದರ್ಶಿ ಸುಧೀರ್ ಸಂಗ್ವಾನ್ ಹಾಗೂ ಆತನ ಗೆಳೆಯ ಸುಖ್ವಿಂದರ್ ವಿರುದ್ಧ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ದೇಹದಲ್ಲಿ ಹಲವು ಗಾಯಗಳ ಬಗ್ಗೆ ಉಲ್ಲೇಖಿಸಿದೆ. ಆದರೆ, ಸಾವಿಗೆ ಕಾರಣವನ್ನು ಉಲ್ಲೇಖಿಸಿಲ್ಲ. ಅಂಗಾಂಶಗಳ ರಾಸಾಯನಿಕ ವಿಶ್ಲೇಷಣೆ ಸೇರಿದಂತೆ ಹಲವು ಪರೀಕ್ಷೆಗಳು ಬಾಕಿ ಇವೆ.

ಇಬ್ಬರು ಆರೋಪಿಗಳ ಬಂಧನ

ಸೋನಾಲಿ ಫೋಗಟ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಆಪ್ತ ಕಾರ್ಯದರ್ಶಿ ಸುಧೀರ್ ಸಂಗ್ವಾನ್ ಹಾಗೂ ಆತನ ಗೆಳೆಯ ಸುಖ್ವಿಂದರ್ ಅವರನ್ನು ಪೊಲೀಸರು ಗೋವಾದಿಂದ ಗುರುವಾರ ಬಂಧಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X