ಮಂಗಳೂರು: ಟ್ಯಾಲೆಂಟ್ ವತಿಯಿಂದ 17ನೇ 'ಟಿಆರ್‌ಎಫ್ ಮಹಲ್' ಮನೆ ಕೀ ಹಸ್ತಾಂತರ

ಮಂಗಳೂರು, ಆ.26: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ನಿರ್ಮಿಸಿದ ʼಟಿ.ಆರ್.ಎಫ್ ಮಹಲ್ ಕೀʼ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಮಂಗಳೂರು ತಾಲೂಕಿನ ಅಂಬ್ಲಮೊಗರು ಗ್ರಾಮದ ತಿಲಕ್ ನಗರದ ಆಯಿಷಾರವರ ಮನೆಯ ಕೀ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಮ್.ಜೆ.ಎಮ್ ಕಲ್ಪಾದೆ ಮಸೀದಿಯ ಖತೀಬ್ ಸಿದ್ದೀಕ್ ಸಖಾಫಿ ಉದ್ಘಾಟಿಸಿದರು. ಅನ್‍ಆಮ್ ಫಾಮ್ಸ್ ಇದರ ಪಾಲುದಾರರಾದ ತುಫೈಲ್ ಅಹ್ಮದ್ ಕೀ ಹಸ್ತಾಂತರಿಸಿದರು.
ಎಕ್ಸ್‌ಪರ್ಟೈಸ್ ಸಂಸ್ಥೆಯ ಜಿಲ್ಲಾ ಉಪಾದ್ಯಕ್ಷರಾದ ಕೆ.ಎಸ್.ಅಬ್ದುಲ್ ರಹಿಮಾನ್, ಇಸ್ಮಾಯಿಲ್ ಹಾಜಿ ಕಂಕನಾಡಿ, ಸರ್ಫೆಸ್ ಕೇರ್ ಇದರ ಮಾಲಕರಾದ ಅಖಿಲ್ ಖಾನ್, ದ.ಕ ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ಸೈದುದ್ದೀನ್ ಬಜ್ಪೆ, ಅಡ್ವಕೇಟ್ ಜಿಷಾನ್ ಅಲಿ, ಅರಫತ್ ಇಂಜಿನಿಯರ್, ಅಡ್ವಕೇಟ್ ಶೇಖ್ ಇಸ್ಹಾಕ್, ಶರೀಫ್ ಮಾನಿಪ್ಪಾಡಿ, ಅಬ್ಬಾಸ್ ತಿಲಕ್ ನಗರ ಉಪಸ್ಥಿತರಿದ್ದರು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷರಾದ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಟ್ಯಾಲೆಂಟ್‍ನ ಸದಸ್ಯರಾದ ನಕಾಶ್ ಬಾಂಬಿಲ ವಂದಿಸಿದರು. ಟ್ಯಾಲೆಂಟ್‍ನ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಟ್ಯಾಲೆಂಟ್‍ನ ಸದಸ್ಯರಾದ ಮಜೀದ್ ತುಂಬೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಮನೆ ನಿರ್ಮಾಣದಲ್ಲಿ ಸಹಾಯ ಸಹಕಾರ ನೀಡಿದ ಅನ್‍ಆಮ್ ಫಾಮ್ಸ್ ಇದರ ಪಾಲುದಾರರಾದ ತುಫೈಲ್ ಅಹ್ಮದ್, ದ.ಕ ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ಸೈದುದ್ದೀನ್ ಬಜ್ಪೆ, ಸರ್ಫೆಸ್ ಕೇರ್ ಇದರ ಮಾಲಕ ಅಖಿಲ್ ಖಾನ್, ನೆರೆ ಮನೆಯವರಾದ ಅಬ್ಬಾಸ್ ತಿಲಕ್ ನಗರ ಅವರನ್ನು ಸನ್ಮಾನಿಸಲಾಯಿತು.
ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಾಪಕಾಧ್ಯಕ್ಷರ ಮಾರ್ಗದರ್ಶನದಲ್ಲಿ ಟ್ಯಾಲೆಂಟ್ ಮಹಲ್ 17ನೇ ಮನೆಯ ಕೀ ಹಸ್ತಾಂತರ ಕಾರ್ಯಕ್ರಮವು ನಡೆಯಿತು. ಈ ವರ್ಷಕ್ಕೆ ಬೇಕಾದ ಎಲ್ಲಾ ಅರ್ಜಿಗಳು ಬಂದಿವೆ. ವಿಧವೆಯರು, ವಿಕಲಚೇತನರು ಹಾಗೂ ಅಸಹಾಯಕ ಹೆಣ್ಣು ಮಕ್ಕಳಿರುವ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುಲು ಸಹಾಯ ಮಾಡಲು ಇಚ್ಛಿಸುವ ದಾನಿಗಳು ಸಂಸ್ಥೆಯನ್ನು ಸಂಪರ್ಕಿಸುವಂತೆ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷರಾದ ರಿಯಾಝ್ ಕಣ್ಣೂರು ತಿಳಿಸಿದ್ದಾರೆ. 0824-4267883, 9844773906, 9972283365
ಮೊದಲು - ನಂತರ