ಉಡುಪಿ: ಬಾಟಲಿಯಲ್ಲಿ ಕುಳಿತ ಗಣಪತಿ ಪ್ರದರ್ಶನ

ಉಡುಪಿ : ಈ ಬಾರಿ ಉಡುಪಿಯ ಮಾರುತಿ ವೀಥೀಕಾದಲ್ಲಿರುವ ೨೨ನೇ ವರುಷದ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಉಡುಪಿ ಖ್ಯಾತ ಕಲಾವಿದ ಮಹೇಶ್ ಮರ್ಣೆ ಅವರು ನಿರ್ಮಿಸಿದ ವಿಶಿಷ್ಟ ಗಣೇಶ ಮೂರ್ತಿ ಯ ಕಲಾಕೃತಿಯೊಂದು ಪ್ರದರ್ಶನಗೊಳ್ಳಲಿದ್ದಾರೆ.
ಮಹೇಶ್ ಅವರು ಸುಮಾರು 10 ವರ್ಷಗಳ ಹಿಂದೆ ಆವೆಮಣ್ಣಿನಿಂದ ಬಾಟಲಿಯೊಳಗೆ ರಚಿಸಿದ ಗಣೇಶ ವಿಗ್ರಹವನ್ನು ಮಾರುತಿವಿಥಿಕಾದ ಶ್ಯಾಮ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಈ ಬಾರಿ ಪ್ರದರ್ಶನಕ್ಕಿಡಲಾಗುವುದು.
ಈ ಗಣಪತಿಯ ಕಲಾಕೃತಿಯನ್ನು ಪ್ರಾಕೃತಿಕ ಬಣ್ಣದ ಸಹಿತವಾಗಿ ರಚಿಸಲಾಗಿದೆ. ಇದನ್ನು ಆ.31ರ ಬುಧವಾರ ಗಣೇಶ ಚೌತಿಯ ದಿನದಂದು ಬೆಳಗಿನಿಂದ ಸಂಜೆಯವರೆಗೆ ನಮ್ಮ ಗಣಪತಿ ಪೆಂಡಾಲಿನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಕಲಾಸಕ್ತರಿಗೆ. ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶವಿದೆ ಎಂದು ಮಾರುತಿ ವೀಥೀಕಾದ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್‌ರಾಜ್ ಸರಳೇಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





