ಪುತ್ತೂರು: ಎಲ್ಕೆಜಿ ವಿದ್ಯಾರ್ಥಿನಿ ಅನ್ವಿಕಾ ಪ್ರಭು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ

ರೆಕಾರ್ಡ್ಸ್
ಪುತ್ತೂರು: ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎಲ್ಕೆಜಿ ವಿದ್ಯಾರ್ಥಿನಿ ಅನ್ವಿಕಾ ಪ್ರಭು ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾಳೆ.
ಅನ್ವಿಕಾ ಪ್ರಭು ವಯಸ್ಸು 3ವರ್ಷ 8 ತಿಂಗಳು. ಆಕೆ 35 ಹಣ್ಣುಗಳ, 16 ಬಣ್ಣಗಳ ಹೆಸರನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ 2 ಶ್ಲೋಕ, 4 ರೈಮ್ಸ್(ಪ್ರಾಸಗಳು), ದೇಹದ 20 ಅಂಗಗಳ ಹೆಸರು, 8 ರಾಷ್ಟ್ರಗಳ ರಾಷ್ಟ್ರಲಾಂಛನಗಳನ್ನು ಗುರುತಿಸುವ ಸಾಧನೆ ಮಾಡಿದ್ದಾರೆ. ಇದೀಗ ಪುಟಾಣಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಅನ್ವಿಕಾ ಪ್ರಭು ಪುತ್ತೂರು ತಾಲೂಕಿನ ಕೋಡಿಂಬಾಡಿ ನಿವಾಸಿ ಅಶೋಕ್ ಪ್ರಭು ಡಿ.ಕೆ ಮತ್ತು ಶ್ವೇತಾ ಪ್ರಭು ದಂಪತಿಯ ಪುತ್ರಿ.
Next Story





