ಕಾಂಗ್ರೆಸ್ ಸೇವಾದಳದಿಂದ ಹರ್ಡೀಕರ್ ಪುಣ್ಯಸ್ಮರಣೆ

ಮಂಗಳೂರು : ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳದ ವತಿಯಿಂದ ಸೇವಾದಳದ ಸಂಸ್ಥಾಪಕ, ಸ್ವಾತಂತ್ರ್ಯ ಹೋರಾಟಗಾರ ಡಾ. ನಾರಾಯಣರಾವ್ ಸುಬ್ಬರಾವ್ ಹರ್ಡೀಕರ್‌ರ ಪುಣ್ಯಸ್ಮರಣೆ ಕಾರ್ಯಕ್ರಮವು ಶುಕ್ರವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಹರ್ಡೀಕರ್‌ರ ಭಾವಚಿತ್ರಕ್ಕೆ ಪುರ್ಷಾರ್ಚಣೆಗೈದ ಬಳಿಕ ಮಾತನಾಡಿದ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಸೇವಾದಳ ಶಿಸ್ತಿನ ಸಂಘಟನೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಸೇವಾದಳಕ್ಕೆ ಹೆಚ್ಚಿನ ಮಾನ್ಯತೆ ನೀಡಿ ಪ್ರಥಮ ಪ್ರಾಶಸ್ತ್ಯ ನೀಡಲಾಗಿದೆ. ಸ್ವಾತಂತ್ರಕ್ಕಾಗಿ ಹೋರಾಡುತ್ತಿದ್ದ ಪಕ್ಷದ ಕಾರ್ಯಕರ್ತರಲ್ಲಿ ಶಿಸ್ತು, ಒಗ್ಗಟ್ಟು, ಪಕ್ಷದ ನಿಯಮಗಳನ್ನು ಕಾಪಾಡಿಕೊಳ್ಳಲು ಶಿಸ್ತುಬದ್ಧ ಸಂಘಟನೆ ಪಕ್ಷಕ್ಕೆ ಅವಶ್ಯಕತೆಯನ್ನು ಮನಗಂಡು ಎನ್.ಎಸ್.ಹರ್ಡೆಕರ್ 1923ರಲ್ಲಿ ಸೇವಾದಳ ಸಂಘಟನೆಯನ್ನು ಆರಂಭಿಸಿದ್ದರು ಎಂದರು.
ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಆಳ್ವ, ಸೇವಾದಳದ ರಾಜ್ಯ ತರಬೇತುದಾರ ವಿಶ್ವನಾಥ್, ಶುಭೋದಯ ಆಳ್ವ, ಲಾರೆನ್ಸ್ ಡಿಸೋಜ, ಸುಭಾಷ್ ಕೊಲ್ನಾಡ್, ಭಾಸ್ಕರ್ ರಾವ್, ಚಂದ್ರಕಲಾ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಶಾಂತಲಾ ಗಟ್ಟಿ, ಸಂತೋಷ್ ಭಂಡಾರಿ, ಹಾರಿಸ್ ಮುಡಿಪು, ಮೀನಾ ಟೆಲ್ಲಿಸ್, ನಾಗವೇಣಿ, ಸಲೀಂ ಮುಕ್ಕ, ಆಲ್ವಿನ್ ಪ್ರಕಾಶ್, ಫಯಾಝ್ ಅಮ್ಮೆಮ್ಮಾರ್, ರಾಬಿನ್, ಮೋಹಿಣಿ, ಅನಿತಾ, ಮೋಹನ್‌ದಾಸ್ ಕೊಟ್ಟಾರಿ, ವೆಂಕಪ್ಪಪೂಜಾರಿ, ನಾಗೇಶ್ ಶೆಟ್ಟಿ ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕ್ಕಿಂ ಡಿಸೋಜ ಸ್ವಾಗತಿಸಿದರು. ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷೆ ಶಶಿಕಲಾ ವಂದಿಸಿದರು.







