ಕೊರಟಗೆರೆ: ಭಾರೀ ಮಳೆಗೆ ಕುಸಿದು ಬಿದ್ದ ಸೇತುವೆ

ತುಮಕೂರು.ಆ.26: ಮಳೆ ನೀರಿನಿಂದ ಆಗಿರುವ ಪ್ರದೇಶಗಳ ವೀಕ್ಷಣೆ ಮುಗಿಸಿ ಶಾಸಕರು ತೆರಳಿದ ಕೆಲವೇ ಹೊತ್ತಿನಲ್ಲಿ ಹಲವು ಊರುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯೊಂದು ಬಿರುಕು ಬಿಟ್ಟು ಜನರಲ್ಲಿ ಆತಂಕ ಮೂಡಿಸಿದೆ.
ಕೊರಟಗೆರೆ ಶಾಸಕ ಹಾಗು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸತತ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ವೀಕ್ಷಣೆಗೆ ಇಂದು ಗೊರವನಹಳ್ಳಿ ದೇವಾಲಯದ ಬಳಿ ಇರುವ ಜುಮಂಗಲಿ ನದಿಗೆ ತೀತಾ ಬಳಿ ಕಟ್ಟಿರುವ ಸೇತುವೆ ಬಳಿ, ಕಾರ್ಯಕರ್ತರು ಮತ್ತು ಅಧಿಕಾರಿಗಳೊಂದಿಗೆ ಭೇಟಿ ವಾಪಸ್ಸಾದ ಕೆಲವೇ ಹೊತ್ತಿನಲ್ಲಿ ಸದರಿ ಸೇತುವೆ ಬಿರುಕು ಬಿಟ್ಟಿದೆ.
ಸುಮಾರು 100 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುರಿದು ಬಿದ್ದು ಜನರಲ್ಲಿ ಆತಂಕ ಮೂಡಿಸಿದೆ.
Next Story





