ಭಾರತೀಯ ಫುಟ್ಬಾಲ್ ಫೆಡರೇಶನ್ ಮೇಲಿನ ಅಮಾನತನ್ನು ಹಿಂಪಡೆದ ಫಿಫಾ

ಹೊಸದಿಲ್ಲಿ: ಅನಗತ್ಯ ಮೂರನೇ ವ್ಯಕ್ತಿಯ ಪ್ರಭಾವದಿಂದಾಗಿ ಈ ತಿಂಗಳ ಆರಂಭದಲ್ಲಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಮೇಲೆ ವಿಧಿಸಲಾಗಿದ್ದ ಅಮಾನತನ್ನು ಫಿಫಾ ಹಿಂತೆಗೆದುಕೊಂಡಿದೆ ಎಂದು ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿ ಶುಕ್ರವಾರ ತಿಳಿಸಿದ್ದಾಗಿ Reuters ವರದಿ ಮಾಡಿದೆ.
ಭಾರತದಲ್ಲಿ ಅಕ್ಟೋಬರ್ 11-30 ರವರೆಗೆ ನಡೆಯಬೇಕಿದ್ದ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಪಂದ್ಯಾಟಗಳು ಯೋಜನೆಯಂತೆಯೇ ದೇಶದಲ್ಲಿ ನಡೆಯಲಿದೆ ಎಂದೂ ವರದಿ ತಿಳಿಸಿದೆ.
Next Story