ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಕಂಚಿನ ಪದಕ ಗೆದ್ದ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್

ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ಸಾಯಿರಾಜ್, Photo: twitter
ಟೋಕಿಯೊ: ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ(BWF World Championships) ಶನಿವಾರ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ (Chirag Shetty and Satwiksairaj Rankireddy)ಕಂಚಿನ ಪದಕ ಗೆದ್ದಿದ್ದಾರೆ.
76 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್ ಸೆಮಿಫೈನಲ್ನಲ್ಲಿ ಚಿರಾಗ್-ಸಾತ್ವಿಕ್ ಸಾಯಿರಾಜ್ ಜೋಡಿ ಮಲೇಷ್ಯಾದ ಆರೋನ್ ಚಿಯಾ ಹಾಗೂ ಸೊಹ್ ವೂಯಿ ಯಿಕ್ ವಿರುದ್ಧ 22-20, 18-21, 16-21 ಗೇಮ್ ಗಳಿಂದ ಸೋಲುಂಡಿದೆ.
BWF ವಿಶ್ವ ಚಾಂಪಿಯನ್ಶಿಪ್ನಲ್ಲಿ ಪುರುಷರ ಡಬಲ್ಸ್ ಈವೆಂಟ್ನ ಸೆಮಿಫೈನಲ್ಗೆ ತಲುಪಿದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಚಿರಾಗ್ ಹಾಗೂ ಸಾತ್ವಿಕ್ ರಾಜ್ ಶುಕ್ರವಾರ ಭಾರತಕ್ಕೆ ಪದಕದ ಭರವಸೆ ನೀಡಿತ್ತು.
ಡಬಲ್ಸ್ನಲ್ಲಿ ಭಾರತಕ್ಕೆ ಇದು ಎರಡನೇ ವಿಶ್ವ ಚಾಂಪಿಯನ್ಶಿಪ್ ಪದಕವಾಗಿದೆ. 2011ರಲ್ಲಿ ಮಹಿಳೆಯರ ಡಬಲ್ಸ್ನಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಕಂಚಿನ ಪದಕ ಜಯಿಸಿದ್ದರು.
Next Story