Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’...

‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’ ವಿಶ್ವವಿದ್ಯಾನಿಲಯಗಳಲ್ಲಿನ ಸಮಸ್ಯೆ ಬಗೆಹರಿಸುವುದೇ?

ವಸಂತ ರಾಜು ಎನ್, ತಲಕಾಡುವಸಂತ ರಾಜು ಎನ್, ತಲಕಾಡು27 Aug 2022 12:07 PM IST
share
‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’ ವಿಶ್ವವಿದ್ಯಾನಿಲಯಗಳಲ್ಲಿನ ಸಮಸ್ಯೆ ಬಗೆಹರಿಸುವುದೇ?

‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’ ಹುದ್ದೆ ಸೃಷ್ಟಿಸಲು ತುದಿಗಾಲಲ್ಲಿ ನಿಂತಿರುವ ಸರಕಾರ ಈ ಬಗ್ಗೆ ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ಮಾಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈಗ ಕರಡು ಪ್ರತಿಯನ್ನು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಬಿಡುಗಡೆ ಮಾಡಲಾಗಿದೆ. ಎಲ್ಲವನ್ನೂ ಸಾರ್ವಜನಿಕ ಅಭಿಪ್ರಾಯಕ್ಕೆ ಬಿಡುವುದು ಸರಿ. ಆದರೆ ಇವುಗಳ ಸಾಧಕ ಬಾಧಕಗಳನ್ನು ಶಿಕ್ಷಣ ತಜ್ಞರ ಜೊತೆ ಚರ್ಚಿಸುವುದು ಕೂಡ ತುಂಬಾ ಅಗತ್ಯ.

ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ) ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಾಪನ ಮಾಡಲು ಉದ್ಯಮಿಗಳನ್ನು, ಮಾಧ್ಯಮ ತಜ್ಞರು, ಬ್ಯಾಂಕಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕಲೆ ಇನ್ನೂ ಮುಂತಾದ ಕ್ಷೇತ್ರಗಳಲ್ಲಿನ ಪರಿಣಿತರನ್ನು ‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’ ಎಂಬ ಹೊಸ ಹೆಸರಿನೊಂದಿಗೆ ಅವಕಾಶ ಕಲ್ಪಿಸುವ ಸಂಬಂಧ ಕರಡು ಮಾನದಂಡಗಳನ್ನು ಒಳಗೊಂಡ ದಾಖಲೆಯನ್ನು ಸಾರ್ವಜನಿಕ ಅವಗಾಹನೆಗೆ ಬಿಡುಗಡೆ ಮಾಡಲಾಗಿದ್ದು, ಈ ಸಂಬಂಧ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಸಲ್ಲಿಸಲು ಯುಜಿಸಿ ವೆಬ್ ತಾಣದಲ್ಲಿ ಈ ಕರಡು ಪ್ರತಿಯನ್ನು ಹಾಕಿದೆ.

ಇದೊಂದು ಬಹುಮುಖ್ಯ ಬೆಳವಣಿಗೆ ಎಂದು ಅನೇಕ ಉನ್ನತ ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೌದು ಇಂದು ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಅಲ್ಲಿಂದ ಹೊರಬರುತ್ತಿರುವ ಪದವೀಧರರ ಬಗ್ಗೆ ಒಂದು ರೀತಿಯ ಬೇರೆ ಅಭಿಪ್ರಾಯವಿದೆ. ಅಲ್ಲಿ ನಡೆಯುತ್ತಿರುವ ಸಂಶೋಧನೆಗಳು ಸಮಾಜದ ಪ್ರಸಕ್ತ ಸಮಸ್ಯೆಗಳಿಗೆ ಯಾವುದೇ ರೀತಿಯಲ್ಲೂ ಉಪಯೋಗವಿಲ್ಲವೆಂದು ಮತ್ತು ಅನೇಕ ವಿವಿಗಳ ಪದವೀಧರರು ಇವತ್ತಿನ ತಂತ್ರಜ್ಞಾನದ ಯುಗದಲ್ಲಿ ಅಗತ್ಯ ಕೌಶಲ್ಯವನ್ನು ಹೊಂದಿಲ್ಲದ ಕಾರಣ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಅವರಲ್ಲಿ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸಲು ಮತ್ತು ನಮ್ಮದೇ ಶಿಕ್ಷಣ ಪದ್ಧತಿಯನ್ನು ರೂಪಿಸಲು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಇದರ ಮುಂದುವರಿದ ಭಾಗಗಳಾಗಿ ಉನ್ನತ ಶಿಕ್ಷಣ ವಲಯದಲ್ಲಿ ಅನೇಕ ಬದಲಾವಣೆಗಳನ್ನು ತರಲಾಗುತ್ತಿದೆ.

ಅದರಲ್ಲಿ ಮುಖ್ಯವಾಗಿ ಈ ‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’ ಕೂಡ ಒಂದು. ಈ ಸಂಬಂಧ ಅಗತ್ಯ ಮಾನದಂಡಗಳನ್ನು ಒಳಗೊಂಡ ಕರಡು ದಾಖಲೆಯನ್ನು ಯುಜಿಸಿ ಈಗ ಬಿಡುಗಡೆಗೊಳಿಸಿದೆ.

ವಿಶ್ವವಿದ್ಯಾನಿಲಯಗಳನ್ನು ಹೊಸ ಜ್ಞಾನ ಸೃಷ್ಟಿಸುವ ತಾಣಗಳನ್ನಾಗಿ ನಾವು ನೋಡುತ್ತ ಬಂದಿದ್ದೇವೆ. ಅದಕ್ಕೆ ಮುಖ್ಯವಾಗಿ ಅಗತ್ಯವಿರುವುದು ಮೂಲಭೂತ ಸಂಶೋಧನೆಗಳಿಗೆ ನಿರಂತರ ಉತ್ತೇಜನ ನೀಡುವುದು. ಆದರೆ ಇಂದು ವಿಶ್ವವಿದ್ಯಾನಿಲಯಗಳಲ್ಲಿ ಮೂಲಭೂತ ಸಂಶೋಧನೆಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯಗಳನ್ನು ಹೆಚ್ಚು ಮಾಡದೆ ಅವುಗಳನ್ನು ಕೇವಲ ಕೌಶಲ್ಯಾಭಿವೃದ್ಧಿ ತಾಣಗಳಾಗಿ ನೋಡಲಾಗುತ್ತಿದೆ. ಇದರ ಮುಂದುವರಿದ ಭಾಗವೇ ‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’ ಹುದ್ದೆಯ ಸೃಷ್ಟಿ.

ಹಿಂದೆ ವಿವಿಗಳಲ್ಲಿ ತಮ್ಮ ಕ್ಷೇತ್ರಗಳಲ್ಲಿ ನುರಿತ ತಜ್ಞರನ್ನು ‘ವಿಸಿಟಿಂಗ್ ಪ್ರೊಫೆಸರ್’ಗಳಾಗಿ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಸಿಗುವಂತಹ ಅವಕಾಶಗಳನ್ನು ವಿವಿಗಳು ಮುಕ್ತವಾಗಿ ಮಾಡುತ್ತಿದ್ದವು. ಅವರಿಂದ ವಿಶೇಷ ಉಪನ್ಯಾಸಗಳನ್ನು ಆಯೋಜಿಸುವುದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಜೊತೆಗೂಡಿ ಸಂಶೋಧನೆಗಳನ್ನು ಕೈಗೊಳ್ಳುವುದು ಇತ್ಯಾದಿಯನ್ನು ಮಾಡಲಾಗುತ್ತಿತ್ತು. ಇವತ್ತಿಗೂ ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ ಮತ್ತು ಅನೇಕ ಕೇಂದ್ರೀಯ ಮತ್ತು ರಾಜ್ಯ ಸರಕಾರಗಳ ಅಧೀನದಲ್ಲಿರುವ ವಿವಿಗಳಲ್ಲಿ ಉದ್ಯಮಗಳಲ್ಲಿ ತೊಡಗಿರುವ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಮತ್ತು ಇತರ ಕ್ಷೇತ್ರಗಳಲ್ಲಿ ಸಾಕಷ್ಟು ಅನುಭವವಿರುವ ಅನೇಕರು ‘ವಿಸಿಟಿಂಗ್ ಪ್ರೊಫೆಸರ್’ಗಳಾಗಿ ತಾತ್ಕಾಲಿಕ ಪ್ರೊಫೆಸರ್‌ಗಳಾಗಿ (Adjunct Faculty) ಕಾರ್ಯನಿರ್ವಹಿಸುತ್ತಿರುವ ಉದಾಹರಣೆಗಳಿವೆ. ಈಗ ಇದನ್ನು ‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’ ಎಂದು ಮರುನಾಮಕರಣ ಮಾಡಿ ಎಲ್ಲವನ್ನೂ ಕೇಂದ್ರೀಕರಣ ವ್ಯವಸ್ಥೆಯಡಿಯಲ್ಲಿ ತರಲಾಗುತ್ತಿದೆ.

ಇವತ್ತು ಯುಜಿಸಿ ಬಹುಮಖ್ಯವಾಗಿ ಮಾಡಬೇಕಿರುವ ಕೆಲಸ ಕೇಂದ್ರೀಯ ಮತ್ತು ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕರ ಹುದ್ದೆಗಳನ್ನು ತುಂಬುವುದು. ಕರ್ನಾಟಕ ರಾಜ್ಯದಲ್ಲೇ ಇಂದು ಬಹುತೇಕ ವಿವಿಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಈಗ ‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’ ಹುದ್ದೆಗಳನ್ನು ಸೃಷ್ಟಿಸಿದರೆ ಮುಂದೆ ಈ ಹುದ್ದೆಗಳು ವಿವಿಗಳಲ್ಲಿ ಇಲ್ಲವಾಗಬಹುದು. ಕರಡು ಪ್ರತಿಯಲ್ಲಿ ವಿವಿಗಳ ಅಧ್ಯಾಪಕರ ಹುದ್ದೆಗಳಿಗೂ ಮತ್ತು ಈ ಹುದ್ದೆಗಳಿಗೂ ಯಾವುದೇ ಸಂಬಂಧ ಇಲ್ಲ ಎನ್ನಲಾಗುತ್ತಿದೆ. ಆದರೆ ವಿವಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಮೀನಾಮೇಷ ಎಣಿಸುತ್ತಿರುವ ಸರಕಾರಗಳಿಗೆ ಈ ವ್ಯವಸ್ಥೆ ವರದಾನವಾಗಬಹುದು. ಈ ಹಿನ್ನ್ನೆಲೆಯಲ್ಲಿ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆ ಇತ್ತೀಚಿಗೆ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುತ್ತಿದ್ದ ಸರಕಾರಿ ಶುಲ್ಕಗಳನ್ನು ಕಾಲೇಜುಗಳ ಬ್ಯಾಂಕ್ ಖಾತೆಗಳಲ್ಲಿ ಇರಿಸಿ ಅವುಗಳ ಅಭಿವೃದ್ಧಿಗೆ ಬಳಸಲು ಆದೇಶಿಸಿದೆ. ಇದನ್ನು ‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’ ಹೆಸರಿನಲ್ಲಿ ತಾತ್ಕಾಲಿಕ ಪ್ರೊಫೆಸರ್‌ಗಳನ್ನು ನೇಮಕ ಮಾಡಿಕೊಳ್ಳಲು ಬಳಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಮಾನವಿಕ ವಿಷಯಗಳಾದ ಸಾಹಿತ್ಯ, ಕಲೆ, ಭಾಷೆ ಮತ್ತು ತತ್ವಶಾಸ್ತ್ರದ ವಿಷಯಗಳಿಗೆ ನೀಡಬೇಕಿದ್ದ ಮಹತ್ವವನ್ನು ಇವತ್ತು ವಿವಿಗಳಲ್ಲಿ ನೀಡುತ್ತಿಲ್ಲ. ಈ ವಿಭಾಗಗಳನ್ನು ಸ್ಕಿಲ್ ಡೆವಲಪ್‌ಮೆಂಟ್ ಹೆಸರಿನಲ್ಲಿ ಮುಚ್ಚುವ ಹಂತಕ್ಕೆ ತರಲಾಗುತ್ತಿದೆ. ಅನೇಕ ಸಂಶೋಧನೆಗಳು ಮತ್ತು ಸ್ಕಾಟ್ ಹಾರ್ಟಲಿ ಎನ್ನುವವರು ಬರೆದಿರುವ ‘ದಿ ಪಝಿ ಆ್ಯಂಡ್ ದಿ ಟೆಕಿ: ವೈ ದಿ ಲಿಬರಲ್ ಆರ್ಟ್ಸ್ ವಿಲ್ ರೂಲ್ ದಿ ಡಿಜಿಟಲ್ ವರ್ಲ್ಡ್’ ಎನ್ನುವ ಪುಸ್ತಕದಲ್ಲಿ ಮಾನವಿಕ ವಿಷಯಗಳನ್ನು ಓದಿದ ಅನೇಕರು ಇಂದು ಜಗತ್ತಿನ ಪ್ರತಿಷ್ಠಿತ ತಂತ್ರಜ್ಞಾನ ಕಂಪೆನಿಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದನ್ನು ಅನೇಕ ದೃಷ್ಟಾಂತಗಳ ಮೂಲಕ ವಿವರಿಸಿದ್ದಾರೆ. ಆದರೆ ಇಂದು ಮಾನವಿಕ ವಿಷಯಗಳನ್ನು ವಿವಿಗಳಲ್ಲಿ ಉತ್ತೇಜಿಸದೆ ಕೇವಲ ಸ್ಕಿಲ್ ಹೆಸರಿನಲ್ಲಿ ತಂತ್ರಜ್ಞಾನದ ಶಿಕ್ಷಣದ ಕಡೆ ಹೆಚ್ಚು ಒಲವು ತೋರಿಸಲಾಗುತ್ತಿದೆ. ಇದು ನಮ್ಮ ದೇಶದಲ್ಲಿ ಹೊಸ ಹೊಸ ಆವಿಷ್ಕಾರಗಳಿಗೆ ಉತ್ತೇಜಿಸದೆ ಕೇವಲ ಕೂಲಿ ಆಳುಗಳಂತೆ ಐಟಿ ಕಂಪೆನಿಗಳು ನಡೆಸುವ ಹೊರಗುತ್ತಿಗೆ ಕೆಲಸಗಳಿಗೆ ಉದ್ಯೋಗಿಗಳನ್ನು ತಯಾರಿಸುವ ಕೇಂದ್ರಗಳಾಗುತ್ತಿವೆ.

ವಿಶ್ವವಿದ್ಯಾನಿಲಯಗಳು ಸಂಶೋಧನೆಗಳಿಗೆ ಹೊಸ ಹೊಸ ಆವಿಷ್ಕಾರಕ್ಕೆ ಉತ್ತೇಜಿಸುವಂತಹ ವಿಷಯಗಳನ್ನು, ಮೂಲಭೂತ ಸಂಶೋಧನೆಗೆ ಬೇಕಾಗಿರುವ ಅಗತ್ಯ ಸೌಕರ್ಯ ಸೃಷ್ಟಿಸಿ ವಿವಿಗಳಿಗೆ ಬೇಕಾಗಿರುವ ಸ್ವಾಯತತ್ತೆಯನ್ನು ನೀಡಬೇಕಿದೆ. ಕಳೆದ ಕೆಲವು ವರ್ಷಗಳಿಂದ ವಿವಿಗಳ ಸಂಶೋಧನೆಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ. 2016-17ರಲ್ಲಿ 42.70 ಕೋಟಿ ರೂ. ಅನುದಾನ ನೀಡಿದರೆ, 2017-18ರಲ್ಲಿ 38.60 ಕೋಟಿ ರೂ. ಅನುದಾನ ನೀಡಲಾಗಿತ್ತು. ಮುಂದಿನ ವರ್ಷಗಳಲ್ಲಿ ಅದು ಮತ್ತಷ್ಟು ಕಡಿಮೆಯಾಗಿ 2020-21ರಲ್ಲಿ ಕೇವಲ 38 ಲಕ್ಷ ರೂ.ಯನ್ನು ಮೈನರ್ ಮತ್ತು ಮೇಜರ್ ಸಂಶೋಧನೆಗೆ ಯುಜಿಸಿ ನೀಡಿದೆ. 1,000ಕ್ಕೂ ಅಧಿಕ ವಿಶ್ವವಿದ್ಯಾನಿಲಯಗಳಿರುವ ದೇಶದಲ್ಲಿ ಸಂಶೋಧನೆಗೆ ಕೇವಲ 38 ಲಕ್ಷ ಅನುದಾನವನ್ನು ವೆಚ್ಚ ಮಾಡಿರುವುದು ವಿವಿಗಳು ಇಂದು ಯಾವ ಸ್ಥಿತಿಯಲ್ಲಿ ಸಂಶೋಧನೆ ಮಾಡಬೇಕು ಎಂದು ತಿಳಿಯದಾಗಿದೆ. ಯುಜಿಸಿ ಅನೇಕ ಫೆಲೋಶಿಫ್‌ಗಳನ್ನು ಇತ್ತೀಚೆಗೆ ನಿಲ್ಲಿಸಿದೆ. ಉದಾಹರಣೆಗೆ ಡಾ. ಎಸ್ ರಾಧಾಕೃಷ್ಣನ್ ಪೋಸ್ಟ್ ಡಾಕ್ಟಾರಲ್ ಫೆಲೋಶಿಫ್, ಮಹಿಳಾ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪೋಸ್ಟ್ ಡಾಕ್ಟಾರಲ್ ಫೆಲೋಶಿಫ್, ಇತ್ಯಾದಿ.

ವಿದ್ಯಾರ್ಥಿಗಳಲ್ಲಿ ಕೌಶಲ್ಯದ ಕೊರತೆಯನ್ನು ಬೊಟ್ಟು ಮಾಡುವ ಸರಕಾರಗಳು ಅದೇ ಉತ್ಸಾಹದಲ್ಲಿ ಸರಕಾರದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವ ಆಸಕ್ತಿ ತೋರುತ್ತಿಲ್ಲ. ಜೊತೆಗೆ ಹೊಸ ಹೊಸ ಹುದ್ದೆಗಳನ್ನು ಸೃಷ್ಟಿಸದೇ ಅಸಂಖ್ಯಾತ ಪದವೀಧರರಿಗೆ ತಾವು ಉದ್ಯೋಗ ಪಡೆಯಲು ಯೋಗ್ಯರಲ್ಲ ಎನ್ನುವ ಕೀಳರಿಮೆಯನ್ನು ಸೃಷ್ಟಿಸುತ್ತಿವೆ. ವಿಶ್ವವಿದ್ಯಾನಿಲಯಗಳನ್ನು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ. ಇದು ಸಮಾಜದಲ್ಲಿ ಬೇಕಾಗಿರುವ ಹೊಸ ಆಲೋಚನೆಗಳು, ವಿಮರ್ಶಾತ್ಮಕ ಚಿಕಿತ್ಸಕ ನೋಟ, ಪ್ರಶ್ನಿಸುವ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಇಲ್ಲವಾಗಿಸುತ್ತದೆ.

ಎಲ್ಲಾ ಕ್ಷೇತ್ರಗಳಲ್ಲೂ ಉದಾಹರಣೆಗೆ ಗ್ರಾಮ ಪಂಚಾಯತ್ ಸದಸ್ಯರು ಪದವೀಧರರಾಗಿರಬೇಕು ಎಂದು ಬಯಸುವ ಪ್ರಸ್ತುತ ಆಡಳಿತಾರೂಢ ಸರಕಾರ ವಿವಿಗಳಲ್ಲಿ ‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’ ಹುದ್ದೆಗೆ ಅನುಭವ ಹೊರತು ಪದವಿಯಲ್ಲ ಎಂದಿರುವುದು ಆಶ್ಚರ್ಯ. ದೇಶದ ಬಹುತೇಕ ಕೇಂದ್ರೀಯ ವಿವಿಗಳು, ಐಐಟಿ ಮತ್ತು ಐಐಎಂಗಳಲ್ಲಿ ತಳ ಸಮುದಾಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕೇವಲ ಬೆರಳೆಣಿಕೆಯಷ್ಟಿದ್ದಾರೆ ಎಂದು ಅನೇಕ ವರದಿಗಳು ಗುರುತಿಸಿವೆ. ಈ ಉನ್ನತ ಶಿಕ್ಷಣ ಸಂಸ್ಥೆಗಳು ‘ಸೆಂಟ್ರೆಸ್ ಆಫ್ ಎಕ್ಸ್‌ಕ್ಲೂಷನ್’’ ಎಂದು ಅನೇಕರು ಟೀಕಿಸಿದ್ದಾರೆ. ಇಂತಹ ವೈರುಧ್ಯವನ್ನು ಎದುರಿಸುತ್ತಿರುವ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’ ಹುದ್ದೆಗಳು ಯಾರಿಗೆ ಸಿಗುವುದು?

‘ಪ್ರೊಫೆಸರ್ ಆಫ್ ಪ್ರ್ಯಾಕ್ಟೀಸ್’ ಹುದ್ದೆ ಸೃಷ್ಟಿಸಲು ತುದಿಗಾಲಲ್ಲಿ ನಿಂತಿರುವ ಸರಕಾರ ಈ ಬಗ್ಗೆ ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ಮಾಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈಗ ಕರಡು ಪ್ರತಿಯನ್ನು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಬಿಡುಗಡೆ ಮಾಡಲಾಗಿದೆ. ಎಲ್ಲವನ್ನೂ ಸಾರ್ವಜನಿಕ ಅಭಿಪ್ರಾಯಕ್ಕೆ ಬಿಡುವುದು ಸರಿ. ಆದರೆ ಇವುಗಳ ಸಾಧಕ ಬಾಧಕಗಳನ್ನು ಶಿಕ್ಷಣ ತಜ್ಞರ ಜೊತೆ ಚರ್ಚಿಸುವುದು ಕೂಡ ತುಂಬಾ ಅಗತ್ಯ.

ಅನುಭವಿಗಳು ವಿವಿಗಳಿಗೆ ಬರುವುದು ಅವರ ಜ್ಞಾನವನ್ನು ವಿದ್ಯಾರ್ಥಿಗಳ ನಡುವೆ ಹಂಚಿಕೊಳ್ಳುವುದು ಅತಿ ಮುಖ್ಯ. ಆದರೆ ವಿವಿಗಳು ಕೇವಲ ಸ್ಕಿಲ್‌ಗಳಿಗೆ, ಉದ್ಯಮಶೀಲತೆಗೆ ಮಹತ್ವ ನೀಡದೆ ಹೊಸ ಜ್ಞಾನ ಸೃಷ್ಟಿಗೆ, ಸಂಶೋಧನೆಗೆ, ಯುವ ವಿದ್ಯಾರ್ಥಿ ಸಮುದಾಯದಲ್ಲಿ ಪ್ರಶ್ನಿಸುವ ಮನೋಭಾವವನ್ನು ಮತ್ತು ವಿಮರ್ಶಿಸುವ ದೃಷ್ಟಿಕೋನವನ್ನು ಬೆಳೆಸಲಿ. ನಮ್ಮ ವಿಶ್ವವಿದ್ಯಾನಿಲಯಗಳು ಅಂತಹ ಮುಕ್ತ ಜ್ಞಾನ ತಾಣಗಳಾಗಲಿ.

share
ವಸಂತ ರಾಜು ಎನ್, ತಲಕಾಡು
ವಸಂತ ರಾಜು ಎನ್, ತಲಕಾಡು
Next Story
X