ರಾಜ್ಯದಲ್ಲಿ ರಸ್ತೆ ತೀರ ಹದಗೆಟ್ಟಿದ್ದು, ತುರ್ತು ದುರಸ್ತಿಗೆ 200 ಕೋಟಿ ರೂ. ಬಿಡುಗಡೆ: ಸಚಿವ ಸಿಸಿ ಪಾಟೀಲ್
ʼದಕ್ಷಿಣ ಕನ್ನಡ ಜಿಲ್ಲೆಗೆ 12 ಕೋಟಿ ರೂ., ಉಡುಪಿ ಜಿಲ್ಲೆಗೆ 7.5 ಕೋಟಿʼ

ಸಚಿವ ಸಿಸಿ ಪಾಟೀಲ್
ಮಂಗಳೂರು : ಮಳೆಯಿಂದಾಗಿ ರಾಜ್ಯದಲ್ಲಿ ರಸ್ತೆ ತೀರ ಹದಗೆಟ್ಟಿದ್ದು ತುರ್ತು ದುರಸ್ತಿಗೆ ರಾಜ್ಯ ಸರಕಾರ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್ ರಾಜ್ಯದಲ್ಲಿ ರಸ್ತೆಗಳ ದುರಸ್ತಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 12 ಕೋಟಿ ಉಡುಪಿ ಜಿಲ್ಲೆಗೆ 7.5ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಮಳೆಬಿಟ್ಟ ತಕ್ಷಣವೇ ರಸ್ತೆ ದುರಸ್ತಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣನ ಆರೋಪದ ಬಗ್ಗೆ ನಿನ್ನೆಯೇ ಸುದೀರ್ಘವಾಗಿ ಮಾಧ್ಯಮದೊಂದಿಗೆ ಮಾತನಾಡಿದ್ದೇನೆ. 40% ಕಮಿಷನ್ ಬಗ್ಗೆ ಮಾತನಾಡುವ ಅವರು ಎಷ್ಟು ಪರ್ಸೆಂಟ್ ಕಾಂಗ್ರೆಸ್ ನವರಿಂದ ಪಡೆದುಕೊಂಡಿದ್ದಾರೆಂದು ಬಹಿರಂಗಪಡಿಸಲಿ ಎಂದು ಸಿ.ಸಿ. ಪಾಟೀಲ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
Next Story





