Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. 'ಬುಲ್ ಬುಲ್ ಪಕ್ಷಿ ಮೇಲೆ ಕೂತು ಹಾರಲು...

'ಬುಲ್ ಬುಲ್ ಪಕ್ಷಿ ಮೇಲೆ ಕೂತು ಹಾರಲು ಸಾಧ್ಯವೇ?': ಸಾವರ್ಕರ್ ಪಠ್ಯದ ಕುರಿತು ಮತ್ತೊಂದು ವಿವಾದ ಸೃಷ್ಟಿ

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ

ವಾರ್ತಾಭಾರತಿವಾರ್ತಾಭಾರತಿ27 Aug 2022 9:21 PM IST
share
ಬುಲ್ ಬುಲ್ ಪಕ್ಷಿ ಮೇಲೆ ಕೂತು ಹಾರಲು ಸಾಧ್ಯವೇ?: ಸಾವರ್ಕರ್ ಪಠ್ಯದ ಕುರಿತು ಮತ್ತೊಂದು ವಿವಾದ ಸೃಷ್ಟಿ

ಬೆಂಗಳೂರು, ಆ.27: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕೃತಗೊಂಡ ಪಠ್ಯವು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಎಂಟನೆ ತರಗತಿಯ ದ್ವಿತೀಯ ಭಾಷೆಯ ಕನ್ನಡ ಪಠ್ಯಕ್ಕೆ ಅಳವಡಿಸಿಕೊಂಡಿರುವ ಕೆ.ಟಿ. ಗಟ್ಟಿ ಅವರು ಬರೆದಿರುವ ‘ಕಾಲವನ್ನು ಗೆದ್ದವರು’ ಎಂಬ ಪ್ರವಾಸ ಕಥನದಲ್ಲಿ ಸಾವರ್ಕರ್ ಬಗ್ಗೆ ಪ್ರಸ್ತಾಪಿತ ಪಠ್ಯ ವಿವಾದಕ್ಕೆ ಕಾರಣವಾಗಿದೆ.

ಪಠ್ಯದಲ್ಲಿ ‘ಬ್ರಿಟಿಷರು ಸಾವರ್ಕರ್ (Vinayak Damodar Savarkar) ಅನ್ನು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿನ ಕೋಣೆಗೆ ಬುಲ್‍ಬುಲ್ ಹಕ್ಕಿಗಳು ಬರುತ್ತಿದ್ದವು. ಅವುಗಳ ಮೇಲೆ ಕುಳಿತು ಸಾವರ್ಕರ್ ಪ್ರತಿ ದಿನ ತಾಯ್ನಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು' ಎಂಬ ಸಾಲುಗಳನ್ನು ಬಳಸಲಾಗಿದೆ. ಇವು ದೇಶಭಕ್ತಿಯ ಅತಿ ಉತ್ಪ್ರೇಕ್ಷತೆಯನ್ನು ತಿಳಿಸುತ್ತದೆ ಎಂಬ ವಿವಾದ ಸೃಷ್ಟಿಯಾಗಿದೆ.

ಪಠ್ಯದಲ್ಲಿ ಈ ಮೊದಲು ಇದ್ದ ವಿಜಯಮಾಲಾ ರಂಗನಾಥ ಅವರ ‘ಬ್ಲಡ್ ಗ್ರೂಪ್’ ಎಂಬ ಪಾಠವನ್ನು ಕೈಬಿಟ್ಟು, ಈ ಪಠ್ಯವನ್ನು ಸೇರಿಸಲಾಗಿತ್ತು, ಪಠ್ಯದ ಪುಟಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಚರ್ಚೆಯಾಗುತ್ತಿವೆ.

ಇದನ್ನೂ ಓದಿ>>> ಪ್ರಧಾನಿ ಮೋದಿಗೆ 140 ಸ್ಥಾನಗಳನ್ನು ಗೆಲ್ಲುವ ಮಾತು ಕೊಟ್ಟಿದ್ದೇನೆ: ಬಿ.ಎಸ್. ಯಡಿಯೂರಪ್ಪ

-----------------------------------------------

ಕಾಲವನ್ನು ಗೆದ್ದವರು ಪಠ್ಯದಲ್ಲಿ ಸಾವರ್ಕರ್ ಅವರ ಬಗ್ಗೆ ಉಲ್ಲೇಖಿಸಿದ ಸಾಲುಗಳು ಸುಳ್ಳಲ್ಲವೆ? ನಿಜವೇ ಆಗಿದ್ದರೆ, ಹೇಗೆ ಎಂಬುದನ್ನು ತಿಳಿಸಿ. ನಿಮ್ಮ ಪ್ರಕಾರ ಗಾಳಿಬೆಳಕು ಬರದ, ಒಂದೂ ಕಿಂಡಿ ಕೂಡ ಇರದ ಕೋಣೆಲಿ ಸಾವರ್ಕರ್ ಇದ್ದರು ಎಂದು ಸುಳ್ಳು ಬರೆದು 8ನೇ ತರಗತಿ ಪುಸ್ತಕದಲ್ಲಿ ಹಾಕಿರೋದ್ಯಾಕೆ? ಬುಲ್ ಬುಲ್ ಪಕ್ಷಿ ಮೇಲೆ ಕೂತು ಹಾರಲು ಸಾಧ್ಯವೇ? ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ಗಾಳಿಬೆಳಕು ಎಲ್ಲಾ ಚೆನ್ನಾಗಿ ಬರುತ್ತಿದ್ದ ಕೋಣೆ ಇದೆಯಲ್ಲವೇ?

-ರೂಪೇಶ್ ರಾಜಣ್ಣ, ಕನ್ನಡಪರ ಹೋರಾಟಗಾರ

--------------------------------------------
ಪಠ್ಯದಲ್ಲಿ ಸಾವರ್ಕರ್‍ನ ಪ್ರಸ್ತಾಪವು ಕಾಲ್ಪನಿಕವಾಗಿ ದೇಶಭಕ್ತಿಯನ್ನು ಉತ್ತುಂಗಕ್ಕೇರಿಸಲು ಉದ್ದೇಶಪೂರ್ವಕವಾಗಿ ಅಳವಡಿಸಲಾಗಿದೆ. ಇದರಿಂದ ಮಕ್ಕಳಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯೇ ಮರೆಯಾಗಬಹುದು.

-ಪಟ್ಟಾಭಿರಾಮ ಸೋಮಯಾಜಿ, ಲೇಖಕ, ವಿಮರ್ಶಕ

​------------------------------------

'ಸಾವರ್ಕರ್ ಕತ್ತಲು ಕೋಣೆಯಲ್ಲಿ ಜೈಲುವಾಸ ಅನುಭವಿಸಿದ್ದಾರೆ ಎಂದು ಒಂದು ಗುಂಪು ಹೇಳುತ್ತದೆ. ಆದರೆ ಈಗ ಸಾವರ್ಕರ್ ಇದ್ದ ಕೋಣೆಗೆ ಪಕ್ಷಿಗಳು ಬಂದು ಹೋಗುತ್ತಿವೆ ಎಂದು ಹೇಳುತ್ತಿದ್ದಾರೆ. ಅಲ್ಲದೆ, ಪಕ್ಷಿಗಳ ರೆಕ್ಕೆಯ ಮೇಲೆ ಕುಳಿತು ಹೋಗಿದ್ದ ಎಂದು ಲೇಖಕರು ಬರೆದಿದ್ದಾರೆ. ಇದನ್ನು ಪಠ್ಯದಲ್ಲಿ ಅಳವಡಿಸಿದ್ದಾರೆ. ಇದು ಶಿಕ್ಷಣದ ದುಸ್ಥಿತಿಯಾಗಿದೆ. ಸಾವರ್ಕರ್ ಬಲ್‍ಬುಲ್ ಹಕ್ಕಿಯ ರೆಕ್ಕೆಯ ಮೇಲೆ ಹತ್ತಿ ಹೋಗಿದ್ದಾರೆ. ಇದನ್ನು ಬರೆದ ಕೆ.ಟಿ.ಗಟ್ಟಿ, ಅಳವಡಿಸಿದ ರೋಹಿತ್ ಚಕ್ರತೀರ್ಥ ಹಾಗೂ ಸಚಿವ ಬಿ.ಸಿ. ನಾಗೇಶ್ ಕಾಗೆಯ ರೆಕ್ಕೆ ಮೇಲೆ ಹೋಗಲಿ'.

-ಕುಂ. ವೀರಭದ್ರಪ್ಪ, ಹಿರಿಯ ಸಾಹಿತಿ

ಇದು ಸುಳ್ಳಲ್ಲವೆ?
ನಿಜವೇ ಆದ್ರೆ ಹೇಗೆ ತಿಳಿಸಿ
ನಿಮ್ಮ ಪ್ರಕಾರ ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ಗಾಳಿಬೆಳಕು ಎಲ್ಲಾ ಚೆನ್ನಾಗಿ ಬರುತ್ತಿದ್ದ ಕೋಣೆ ಇದು,ಆದರೆ ಗಾಳಿಬೆಳಕು ಬರಲು ಒಂದೂ ಕಿಂಡಿ ಕೂಡ ಇರದ ಕೋಣೆಲಿ ಸಾವರ್ಕರ್ ಇದ್ರು ಅಂತ ಸುಳ್ಳು ಬರೆದು 8ನೇ ತರಗತಿ ಪುಸ್ತಕದಲ್ಲಿ ಹಾಕಿರೋದ್ಯಾಕೆ?
ಬುಲ್ ಬುಲ್ ಪಕ್ಷಿ ಮೇಲೆ ಕೂತು ಹಾರಲು ಸಾಧ್ಯವೇ? pic.twitter.com/kPniR8MGj7

— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) August 27, 2022

ಸಾವರ್ಕರ್ ಅವರು ತಾಯ್ನಾಡಿಗೆ ಭೇಟಿ ನೀಡುತ್ತಿದ್ದರು ಮತ್ತು ಯಾವುದೇ ಕಿಟಕಿಗಳಿಲ್ಲದ ಅಂಡಮಾನ್ ಸೆಲ್ ಅನ್ನು ಪ್ರವೇಶಿಸಿದ ಬುಲ್ ಬುಲ್ ಹಕ್ಕಿಯ ರೆಕ್ಕೆಗಳ ಮೇಲೆ ಕುಳಿತು ಜೈಲಿಗೆ ಮರಳುತ್ತಿದ್ದರು.

8ನೇ ತರಗತಿಯ ಪಠ್ಯಪುಸ್ತಕದಲ್ಲಿ ಬಂದಿರುವ 'ಕಾಲವನ್ನು ಗೆದ್ದವರು' ಎಂಬ ಪಾಠದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ#Savarkar pic.twitter.com/Fp8Apn4XfF

— Sameer.H /ಸಮೀರ.ಹೆಚ್ (@hsameer211) August 27, 2022

ಸಾವರ್ಕರ್ ಅವರು ತಾಯ್ನಾಡಿಗೆ ಭೇಟಿ ನೀಡುತ್ತಿದ್ದರು ಮತ್ತು ಯಾವುದೇ ಕಿಟಕಿಗಳಿಲ್ಲದ ಅಂಡಮಾನ್ ಸೆಲ್ ಅನ್ನು ಪ್ರವೇಶಿಸಿದ ಬುಲ್ ಬುಲ್ ಹಕ್ಕಿಯ ರೆಕ್ಕೆಗಳ ಮೇಲೆ ಕುಳಿತು ಜೈಲಿಗೆ ಮರಳುತ್ತಿದ್ದರು.

8ನೇ ತರಗತಿಯ ಪಠ್ಯಪುಸ್ತಕದಲ್ಲಿ ಬಂದಿರುವ 'ಕಾಲವನ್ನು ಗೆದ್ದವರು' ಎಂಬ ಪಾಠದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. pic.twitter.com/GXfEYcmtJR

— Nagaraj Omkar/ನಾಗರಾಜ್ ಓಂಕಾರ್ (@NAGARAJOMKAR4) August 27, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X