ಉಲಮಾ ಉಮರಾ ಕಾನ್ಫರೆನ್ಸ್ ಕಾರ್ಯಕ್ರಮದ ಪ್ರಚಾರ ಸಭೆ

ದೇರಳಕಟ್ಟೆ: ಸಮಸ್ತ ಕರ್ನಾಟಕ ಮುಶಾವರ ವತಿಯಿಂದ ಆಗಸ್ಟ್ 30 ರಂದು ನೆರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ನಡೆಯುವ ಸಮಸ್ತ ಉಲಮಾ ಉಮರಾ ಕಾನ್ಫರೆನ್ಸ್ ನ ಪ್ರಚಾರ ಸಭೆಯು ಎಸ್.ವೈ.ಎಸ್ ಹಾಗೂ ಎಸ್.ಕೆ.ಎಸ್.ಎಫ್ ದೇರಳಕಟ್ಟೆ ವಲಯ ಸಮಿತಿ ವತಿಯಿಂದ ದೇರಳಕಟ್ಟೆ ಎಸ್.ಕೆ.ಎಸ್.ಎಫ್ ಕಚೇರಿಯಲ್ಲಿ ನಡೆಯಿತು.
ಜಂ-ಇಯ್ಯತ್ತುಲ್ ಮುದರ್ರಿಸೀನ್ ಕೇಂದ್ರ ಸಮಿತಿ ಕೋಶಾಧಿಕಾರಿ ಉಸ್ಮಾನ್ ಫೈಝಿ ತೋಡಾರ್ ರವರ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ಕರ್ನಾಟಕ ಮುಶಾವರ ಪ್ರಧಾನ ಕಾರ್ಯದರ್ಶಿ ಶೈಖುನಾ ಬಿ.ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ರವರು ನೆರಳಕಟ್ಟೆಯಲ್ಲಿ ನಡೆಯುವ ಉಲಮಾ ಉಮರಾ ಕಾನ್ಫರೆನ್ಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂ-ಇಯ್ಯತ್ತುಲ್ ಮುದರ್ರಿಸೀನ್ ಕೇಂದ್ರ ಸಮಿತಿ ನೂತನ ಕೋಶಾಧಿಕಾರಿಯಾಗಿ ಆಯ್ಕೆಗೊಂಡ ಬಹು ಉಸ್ಮಾನ್ ಫೈಝಿ ತೋಡಾರ್ ರವರನ್ನು ಸನ್ಮಾನಿಸಲಾಯಿತು.
ಹನೀಫ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಸ್ತ ಕರ್ನಾಟಕ ಮುಶಾವರ ಕಾರ್ಯಾಧ್ಯಕ್ಷ ಇಬ್ರಾಹಿಂ ಬಾಖವಿ ಕೆ.ಸಿ ರೋಡ್, ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಖತೀಬ್ ಇಸ್ಹಾಖ್ ಫೈಝಿ, ಕಿನ್ಯ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ದಾರಿಮಿ, ಉಮರ್ ದಾರಿಮಿ ಸಾಲ್ಮರ, ಎಸ್.ಕೆ.ಎಸ್.ಎಫ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ಅಧ್ಯಕ್ಷ ಸಯ್ಯದ್ ಅಮೀರ್ ತಂಙಳ್, ಎಸ್.ಕೆ.ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಖಾಸಿಂ ದಾರಿಮಿ, ಬದ್ರಿಯಾ ಜುಮಾ ಮಸೀದಿ ದೇರಳಕಟ್ಟೆ ಅಧ್ಯಕ್ಷ ಹಾಜಿ ಅಬೂಬಕ್ಕರ್, ಕಿನ್ಯ ಅಹ್ಮದ್ ಸಿರಾಜುದ್ದೀನ್, ಕೋಶಾಧಿಕಾರಿ ಅಬುಸ್ವಾಲಿಹ್ ಹಾಜಿ ಕಿನ್ಯ, ರಫೀಕ್ ಹಾಜಿ ಕೆ.ಸಿ ರೋಡ್, ಮೇಲಂಗಡಿ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಸಯ್ಯದ್ ಮದನಿ ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಇಲ್ಯಾಸ್ ಡಿ. ದೇರಳಕಟ್ಟೆ ಎಸ್.ವೈ. ಎಸ್ ನೇತಾರರಾದ
ಅಬ್ದುರ್ರಹ್ಮಾನ್ ಹಾಜಿ ಪನೀರ್, ಮೊಹಮ್ಮದ್ ನಡುಪದವು, ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯರಾದ ಹಾಜಿ ಕರೀಂಹೆಚ್.ಆರ್, ದೇರಳಕಟ್ಟೆ ಮದ್ರಸಾ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ಇಬ್ರಾಹಿಂ ಕೊಣಾಜೆ, ದೇರಳಕಟ್ಟೆ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುರ್ರಹ್ಮಾನ್ ಫೈಝಿ ಕೊಡಾಜೆ.ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ, ಕಿನ್ಯ ರೇಂಜ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ, ಎಸ್.ಕೆ.ಎಸ್.ಎಸ್.ಎಫ್ ದ.ಕ ಜಿಲ್ಲಾ ವೆಸ್ಟ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ರಿಯಾಝ್ ರಹ್ಮಾನಿ, ಎಸ್.ಕೆ.ಎಸ್.ಎಫ್ ದೇರಳಕಟ್ಟೆ ವಲಯ ಅಧ್ಯಕ್ಷ ಫಾರೂಖ್ ದಾರಿಮಿ, ನಡುಪದವು ಜುಮಾ ಮಸೀದಿ ಖತೀಬ್ ಮಜೀದ್ ನಿಝಾಮಿ, ಇನೋಳಿ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಮೋನು ಚಕ್ಕರ್, ಪ್ರಧಾನ ಕಾರ್ಯದರ್ಶಿ ಅಬ್ಬಾಸ್, ದೇರಿಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್, ಎಸ್.ಕೆ.ಎಸ್.ಎಫ್ ವಿಖಾಯ ದ.ಕ ವೆಸ್ಟ್ ಜಿಲ್ಲಾ ಸಮಿತಿ ಚೆಯರ್ಮ್ಯಾನ್ ಸಮೀರ್ ಹೆಚ್.ಕಲ್,
ಎಸ್.ಕೆ.ಎಸ್.ಎಸ್.ಎಫ್ ಉಳ್ಳಾಲ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಹರ್ಷಾದ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್.ವೈ. ಎಸ್ ದೇರಳಕಟ್ಟೆ ವಲಯ ಪ್ರಧಾನ ಕಾರ್ಯದರ್ಶಿ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ ಸ್ವಾಗತಿಸಿ ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ವಂದಿಸಿದರು.







