ರಾಷ್ಟ್ರಕ್ಕಾಗಿ ಖಾದಿ ಆದರೆ ರಾಷ್ಟ್ರಧ್ವಜಕ್ಕೆ ಚೀನಾದ ಪಾಲಿಸ್ಟರ್: ರಾಹುಲ್ ಗಾಂಧಿ
“ಪ್ರಧಾನಿ ಅವರ ಮಾತು ಹಾಗೂ ಕಾರ್ಯಗಳು ಎಂದಿಗೂ ಹೊಂದಿಕೆಯಾಗುವುದಿಲ್ಲ’’
ಹೊಸದಿಲ್ಲಿ: ಖಾದಿ ಬಳಕೆಗಾಗಿ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಕರೆ ನೀಡಿರುವುದನ್ನು ಉಲ್ಲೇಖಿಸಿ ರವಿವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi)ಅವರು,ಪ್ರಧಾನಿ ಅವರ ಮಾತು ಹಾಗೂ ಕಾರ್ಯಗಳು "ಎಂದಿಗೂ ಹೊಂದಿಕೆಯಾಗುವುದಿಲ್ಲ" ಎಂದು ಆರೋಪಿಸಿದ್ದಾರೆ.
ಅಭಿವೃದ್ಧಿ ಹೊಂದಿದ ಹಾಗೂ ಆತ್ಮನಿರ್ಭರ ಭಾರತದ ಕನಸನ್ನು ಸಾಧಿಸಲು ಖಾದಿ ಸ್ಫೂರ್ತಿಯ ಮೂಲವಾಗಬಹುದು ಎಂದು ಪ್ರಧಾನಿ ಶನಿವಾರ ಹೇಳಿದ್ದರು.
"ರಾಷ್ಟ್ರಕ್ಕಾಗಿ ಖಾದಿ, ಆದರೆ ರಾಷ್ಟ್ರಧ್ವಜಕ್ಕೆ ಚೀನಾದ ಪಾಲಿಸ್ಟರ್! ಎಂದಿನಂತೆ, ಪ್ರಧಾನಿಯವರ ಮಾತುಗಳು ಹಾಗೂ ಕಾರ್ಯಗಳು ಎಂದಿಗೂ ಹೊಂದಿಕೆಯಾಗುವುದಿಲ್ಲ"ಎಂದು ಟ್ವೀಟ್ ಮೂಲಕ ಪ್ರಧಾನಿಯನ್ನು ರಾಹುಲ್ ಟೀಕಿಸಿದರು.
ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರಕಾರವನ್ನು ಕಾಂಗ್ರೆಸ್ ಬಲವಾಗಿ ಟೀಕಿಸಿದೆ. ಮೊದಲು, ಯಂತ್ರದಿಂದ ತಯಾರಿಸಿದ ಹಾಗೂ ಪಾಲಿಸ್ಟರ್ ಧ್ವಜಗಳನ್ನು ಬಳಸಲು ಅನುಮತಿಸಲಾಗುತ್ತಿರಲಿಲ್ಲ.
ಅಹಮದಾಬಾದ್‌ನ ಸಬರಮತಿ ನದಿಯ ಮುಂಭಾಗದಲ್ಲಿ ನಡೆದ 'ಖಾದಿ ಉತ್ಸವ' (ಖಾದಿ ಉತ್ಸವ) ಸಂದರ್ಭದಲ್ಲಿ ಶನಿವಾರ ಮಾತನಾಡಿದ ಪ್ರಧಾನಿ ಮೋದಿ, ಸ್ವಾಭಿಮಾನದ ಸಂಕೇತವಾದ ಖಾದಿ ಅನ್ನು ಸ್ವಾತಂತ್ರ್ಯದ ನಂತರ ಕೀಳು ಉತ್ಪನ್ನವೆಂದು ಪರಿಗಣಿಸಲಾಗಿದೆ. ಮುಂಬರುವ ಹಬ್ಬ ಹರಿದಿನಗಳಲ್ಲಿ ಖಾದಿ ಗ್ರಾಮೋದ್ಯೋಗದ ಉತ್ಪನ್ನಗಳನ್ನು ಮಾತ್ರ ಉಡುಗೊರೆಯಾಗಿ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ.