ರಾಮಯ್ಯ ಗೌಡರ ಪ್ರತಿಮೆಗೆ ಅದ್ದೂರಿ ಸ್ವಾಗತ ಕೋರಲು ಸಂಸದ ನಳಿನ್ ಮನವಿ

ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು, ಆ.28 : ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆ ಆ.29ರಂದು ಬೆಳಗ್ಗೆ 9:30ಕ್ಕೆ ಸಂಪಾಜೆ ಮೂಲಕ ದ.ಕ.ಜಿಲ್ಲೆ ಪ್ರವೇಶಿಸಲಿದ್ದು, ಜಿಲ್ಲೆಯ ಜನತೆ ಅದ್ದೂರಿಯ ಸ್ವಾಗತ ಕೋರುವಂತೆ ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಕಟೀಲ್ ವಿನಂತಿಸಿದ್ದಾರೆ.
ಜಿಲ್ಲೆಯ ಜನತೆ ರಾಮಯ್ಯ ಗೌಡರ ಪ್ರತಿಮೆ ಹಾದು ಬರುವ ದಾರಿಯುದ್ಧಕ್ಕೂ ಅಭೂತಪೂರ್ವ ಸ್ವಾಗತ ಕೋರ ಬೇಕು. ಹೋರಾಟದ ಅಂತ್ಯ ಕಂಡಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಮೆ ಸ್ಥಾಪನೆಯಾಗಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭ ಇತಿಹಾಸದ ಪುಟಗಳಲ್ಲಿ ಸುವರ್ಣಾ ಕ್ಷರಗಳಲ್ಲಿ ಬರೆದಿಡುವ ಐತಿಹಾಸಿಕ ಸ್ವಾತಂತ್ರ್ಯ ಹೋರಾಟಗಾರ ರಾಮಯ್ಯ ಗೌಡರ ಹೆಸರನ್ನು ಶಾಶ್ವತವಾಗಿರಿ ಸಲು ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯ ಯುವ ಪೀಳಿಗೆಯಲ್ಲಿ ಹೋರಾಟದ ಕಿಚ್ಚನ್ನು ನೆನಪಿಸು ವುದು ಮತ್ತು ಚರಿತ್ರೆ ಮುಂದಿನ ತಲೆಮಾರಿಗೆ ಶಾಶ್ವತವಾಗಿ ದೊರಕುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದು ಸಂಸದರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





