ಧ್ವನಿ ಇಲ್ಲದವರ ಧ್ವನಿಯಾಗಿ...

ನೈತಿಕ ಪ್ರಜ್ಞೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಕನ್ನಡ ಪತ್ರಿಕೆಗಳಿಗೆ ತನ್ನದೇ ಆದ ಛಾಪು ಇದೆ. ಪ್ರಜಾಪ್ರಭುತ್ವದ 4ನೇ ಅಂಗ, ಪ್ರಜಾಪ್ರಭುತ್ವದ ಕಾವಲು ಭಟ, ಕಾವಲುನಾಯಿ, fourth estate, ಸದಾ ವಿರೋಧ ಪಕ್ಷದ(ಪ್ರತಿ ಪಕ್ಷದ) ಪ್ರತಿ ನಿಧಿ ಎಂದು ಪತ್ರಿಕೆಯನ್ನು ಕರೆಯುತ್ತೇವೆ. ಆದರೆ ಸಣ್ಣ ಸಣ್ಣ ಪತ್ರಿಕೆಗಳು ತನ್ನ ನೋವಿನಲ್ಲೂ ರಂಜನೆ, ಸಮಾಜದ ಚಿಕಿತ್ಸಕನ ಪಾತ್ರ ಯಶಸ್ವಿಯಾಗಿ ನಿರ್ವಹಿಸುವಲ್ಲಿ ಮುಂದಿವೆ. ಇವುಗಳಿಗೆ ಲಾಭಕ್ಕಿಂತ ಸಂವೇದನೆಯೇ ಮುಖ್ಯವಾಗಿದೆ. ಬೃಹತ್ ಬಂಡವಾಳ ಮಾಧ್ಯಮಗಳ ನಡುವೆ ಸ್ವಸಂತೋಷಕ್ಕಾಗಿ, ಪರರ ಸಂತೋಷಕ್ಕಾಗಿ, ವೈಯಕ್ತಿಕ ಲಾಭ ನಷ್ಟ ಲೆಕ್ಕಿಸದೆ, ಸಾಂಸ್ಕೃತಿಕ ಧ್ರುವೀಕರಣಕ್ಕಾಗಿ, ಸಾಂಸ್ಕೃತಿಕ, ಸಾಮಾಜಿಕ ಲೋಕವನ್ನು ವಸ್ತುನಿಷ್ಠವಾಗಿ, ವಿಮರ್ಶಾತ್ಮಕವಾಗಿಕಟ್ಟುವ, ಅವಲೋಕಿಸಿ ದಾಖಲಿಸುವ, ಸಂಶೋಧಿಸುವ ಕೆಲಸವನ್ನು ಇಂದಿನ ಕಾರ್ಪೊರೇಟ್ ಹೌಸ್‌ಗಳ ಮಧ್ಯೆ ಟಿ.ವಿ, ಸಿನೆಮಾಗಳ ನಡುವೆ ಯಶಸ್ವಿಯಾಗಿಯೇ ತನ್ನ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ಅಭಿನಂದನಾರ್ಹ ಕೆಲಸ. ಆದರೆದೊಡ್ಡ ಪತ್ರಿಕೆಗಳಿಗೆ, ಮಾಧ್ಯಮಗಳಿಗೆ ಈ ಜವಾಬ್ದಾರಿ ಕಡಿಮೆಯಾಗುತ್ತಿದೆ.ಈ ದೃಷ್ಟಿಯಲ್ಲಿ ‘ವಾರ್ತಾಭಾರತಿ’ ಅಪವಾದವೆಂಬಂತೆ ಕೆಲಸನಿರ್ವಹಿಸುತ್ತಿದೆ.
ಮಾಧ್ಯಮಗಳು ಇಂದು
‘‘21ನೇ ಶತಮಾನವನ್ನು ಮಾಹಿತಿ ಇರುವವರು ಆಳುತ್ತಾರೆ’’.ಕಾರಣ ಇದು ‘ಮಾಹಿತಿಯುಗ’. ಮಾಹಿತಿಯು ಶಕ್ತಿ, ಸಾಮರ್ಥ್ಯ ಹಾಗೂ ಅಧಿಕಾರವಾಗಿದೆ. ಈ ಮಾಹಿತಿಯನ್ನು ಯಾವುದೇ ಒಂದು ಮಾಧ್ಯಮದ ಮೂಲಕ ಜನರಿಗೆ ತಲುಪಿಸಬೇಕಾಗುತ್ತದೆ. ಈ ಕೆಲಸವನ್ನು ಸುಮಾರು 5 ಶತಮಾನಗಳಿಗೂ ಹೆಚ್ಚು ಕಾಲದಿಂದಲೂದೇಶದಲ್ಲಿ ಮಾಧ್ಯಮಗಳು ಮಾಡುತ್ತಾ ಬಂದಿವೆ. ನಮ್ಮಲ್ಲಿ ಸುಮಾರು 200 ವರ್ಷಗಳಿಂದ ಈ ಕೆಲಸ ಸಾಗುತ್ತಿದೆ.ಇಂದು ಮಾಧ್ಯಮಗಳು ಅತ್ಯಂತ ಪ್ರಭಾವ ಶಾಲಿ ಸಂವಹನ ಮಾಧ್ಯಮಗಳಾಗಿವೆ. ಈ 21ನೇ ಶತಮಾನದಲ್ಲಿ ಪ್ರಪಂಚವನ್ನು ಸರಿ ಮಾರ್ಗದಲ್ಲಿ ನಡೆಸಲು, ಮನುಷ್ಯ ಮನುಷ್ಯರಾಗಿಇರಲು ಈ ಪತ್ರಿಕೋದ್ಯಮದ ಸ್ವರೂಪ ಬದಲಾಗಬೇಕಾದ ಅಗತ್ಯ ಸಹ ಇದೆ. ಮಹಾತ್ಮಾ ಗಾಂಧೀಜಿ ಹಾಗೂ ಡಾ.ಅಂಬೇಡ್ಕರ್‌ಅವರು ಒಬ್ಬ ಮಾದರಿ ಪತ್ರಿಕೋದ್ಯಮಿಗಳು ಆಗಿದ್ದರಿಂದಾಗಿ ಈ ದೇಶವನ್ನು ಸರಿದಾರಿಯಲ್ಲಿ ನಡೆಸಲು ಸಾಧ್ಯವಾಗಿತ್ತು. ಹೀಗಾಗಿಯೇ ಮಾಧ್ಯಮವನ್ನು ‘‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾವಲು ಕಾಯಲಿರುವ ಕಾವಲು ಭಟ’’, ಇದಕ್ಕೆ ಪ್ರಜಾಪ್ರಭುತ್ವದಲ್ಲಿ ಸದಾ ಪ್ರತಿ ನಾಯಕನ ಪಾತ್ರ ನಿರ್ವಹಿಸುವ ಜವಾಬ್ದಾರಿಗಳಿವೆ.
ಭಾರತೀಯ ಹಿನ್ನೆಲೆಯಲ್ಲಿ ಸಂವಹನ ಪರಿಕಲ್ಪನೆಯನ್ನು ಮೊಟ್ಟ ಮೊದಲ ಬಾರಿಗೆ ಕ್ರಿಸ್ತ ಪೂರ್ವ 2ನೇ ಶತಮಾನದಲ್ಲಿ ಗುರುತಿಸಿದ ಕೀರ್ತಿ ಭರತ ಮುನಿಯ ‘ನಾಟ್ಯ ಶಾಸ’್ತ್ರಕ್ಕೆ ಸಲ್ಲುತ್ತದೆ. ಹಾಗೆಯೇ ಪತ್ರಿಕೋದ್ಯಮದ ವಿಕಾಸದಲ್ಲಿ ಅಶೋಕ ಚಕ್ರವರ್ತಿ ಜನರಿಗೆ ಎಲ್ಲವನ್ನು ತಿಳಿಸಿ ಆಡಳಿತ ನಡೆಸಿದ್ದು, ಮೊಗಲರು 800 ವರ್ಷಗಳ ಕಾಲ ನಮ್ಮನ್ನು ಆಳಿ ಕೈ ಬರವಣಿಗೆ (ಕ್ಯಾಲಿಗ್ರಫಿ)ಯ ಸಂಸ್ಥೆ ಆರಂಭಿಸಿದ್ದು ಈಗ ಇತಿಹಾಸ. ‘ಸಂವಹನ’ವು ಜೀವನ ನಾಟ್ಯದಎರಡು ಮುಖ ಇದ್ದಂತೆ. ‘‘ಒಬ್ಬರು ಸಾವಿರ ಸಾರಿ ಸುಳ್ಳು ಹೇಳಿದರೆ ಅದೇ ನಿಜ’’ವಾಗುವ ಅಪಾಯ ಈ ಮಾಧ್ಯಮದಲ್ಲಿದೆ. ಇಂದು ಅದೇ ಯಥೇಚ್ಛವಾಗಿ ಸಾಗುತ್ತಿದೆ. ಹೀಗಾಗಿ ಪತ್ರಿಕೋದ್ಯಮ ಸಾಮಾನ್ಯ ಜನರ ವಿಶ್ವವಿದ್ಯಾನಿಲಯವಾಗಬೇಕು. ಪತ್ರಿಕೆಗಳು ಬಹು ಜನರ ಅದರಲ್ಲೂ ಧ್ವನಿ ಇಲ್ಲದವರ ನಾಯಕತ್ವ ವಹಿಸಬೇಕು.
ಸ್ವಾತಂತ್ರ ಪೂರ್ವದಲ್ಲಿ ಪತ್ರಿಕೆಗಳ ಉದ್ದೇಶ ಸೀಮಿತವಾಗಿದ್ದರೂ ಸ್ವಾತಂತ್ರ ಹೋರಾಟದಲ್ಲಿ ಮಹತ್ವವಾದ ಪಾತ್ರವನ್ನು ನಿರ್ವಹಿಸಿವೆ. ಈಗ ಇವುಗಳ ಪ್ರಭಾವ ವಿಶಾಲ ಕ್ಷೇತ್ರಕ್ಕೆ ಆವರಿಸಿದೆ. ಇಂದಿನ ಜಾಗತೀಕರಣ, ಭ್ರಷ್ಟಾಚಾರ, ಸಾಮಾಜಿಕ, ಆರ್ಥಿಕ, ರಾಜಕೀಯ, ಸೈದ್ಧಾಂತಿಕ, ಧಾರ್ಮಿಕ, ಸ್ವಜನ ಹಿತ, ಕೋಮುವಾದ ಹಾಗೂ ಸಾಂಸ್ಕೃತಿಕ ಸಮಸ್ಯೆಗಳ ನಡುವೆ ಸಂಪೂರ್ಣ ಸ್ವಾತಂತ್ರವುಳ್ಳ ರಾಷ್ಟ್ರ ನಿರ್ಮಾಣದಲ್ಲಿ ಪತ್ರಿಕೆಗಳು ಬಹುಮುಖ್ಯ ಪಾತ್ರ ನಿರ್ವಹಿಸ ಬೇಕಾಗಿದೆ. ಪ್ರಜಾಪ್ರಭುತ್ವದ 4ನೇ ಅಂಗವೆಂದೇ ಪರಿಗಣಿಸುವ ಕೆಲವು ಸಮೂಹ ಮಾಧ್ಯಮಗಳಿಗೆ ಇಂದು ಹಣ ಒಂದೇಉದ್ದೇಶ (ವಾಣಿಜ್ಯ ಮಾಧ್ಯಮ) ಎನ್ನುವಂತಾಗಿದೆ.ಅದಕ್ಕೆ ತಾಜಾ ಉದಾಹರಣೆ ಎಂದರೆ ಇತ್ತೀಚೆಗೆ ನಡೆದ ಚುನಾವಣೆಗಳ ಸಂದರ್ಭದಲ್ಲಿ ಬಹುತೇಕ ಪತ್ರಿಕೆಗಳು ಟೆಲಿವಿಷನ್ ವಾಹಿನಿಗಳು ವಾಣಿಜ್ಯ ಉದ್ದೇಶದಿಂದ ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಂದ ಇಂತಿಷ್ಟು ಹಣಎಂದು ಪಡೆದು ಅಭ್ಯರ್ಥಿಗಳನ್ನು ಅವರು ಹೊಗಳಿದ್ದು (ರೌಡಿಗಳು, ಸಮಾಜ ದ್ರೋಹಿಗಳನ್ನು ಒಳಗೊಂಡು), ಪೆಯಿಡ್ ನ್ಯೂಸ್ ಮತ್ತು ಕೆಲ ಪತ್ರಿಕೆಗಳು ತಮಗೆ ಬೇಕಾದ ಪಕ್ಷಗಳಿಗೆ ಮುಖ ಪುಟಗಳಲ್ಲಿ ಸ್ಥಾನ ಕೊಟ್ಟು ಪ್ರಚಾರ ನೀಡಿ ಹಣದೋಚಿದ್ದು ನಗ್ನ ಸತ್ಯ. ಇದು ಮಾಧ್ಯಮಗಳು ಇಂದು ಎತ್ತ ಸಾಗುತ್ತಿವೆ, ಇವುಗಳ ಉದ್ದೇಶವಾದರೂ ಏನು? ಎಂಬುದನ್ನು ಸ್ಪಷ್ಟಪಡಿಸುತ್ತದೆ ಮತ್ತು ಒಂದು ಸಾಮಾಜಿಕ ಸಂಸ್ಥೆಯ ಸ್ಥಾನ ಪಡೆಯಬೇಕಾಗಿದ್ದ ಮಾಧ್ಯಮಗಳ ಮಾಲಕರು ಏಕೆ ಹೀಗಾದರು? ಮುಂದೆಯೂ ಇದೇ ಸ್ಥಿತಿ ಮುಂದುವರಿದರೆ ಇವುಗಳ ಮೇಲೆ ಯಾರು ನಿಯಂತ್ರಣ ಹಾಕಬೇಕು. ಇವುಗಳು ನೈತಿಕತೆ ಎತ್ತಿ ಹಿಡಿದು, ಸಮಾಜಕ್ಕೆ ಶಕ್ತಿ ವರ್ಧನೆ ಮಾಡಿ ಸ್ವಸ್ಥಪರಿಸರ ಸ್ಪಸ್ಥದೇಶ ನಿರ್ಮಾಣ ಮಾಡಬಲ್ಲವೇ ಎಂಬುದು ಪ್ರಶ್ನಾತೀತ.ಇದಕ್ಕೆ ಮಾಧ್ಯಮಗಳೇ ಉತ್ತರಿಸಬೇಕು. ಇಲ್ಲವೇ ಇನ್ನೊಂದು ಮಾಧ್ಯಮ ಇವುಗಳ ಬಣ್ಣ ಬಯಲು ಮಾಡಲು ಹುಟ್ಟಿಕೊಳ್ಳಬಹುದಾದರೂ ಅದರ ಸಾಚಾತನದ ಬಗ್ಗೆ ಗ್ಯಾರಂಟಿಯನ್ನು ಯಾರು ಕೊಡುತ್ತಾರೆ? ಇದು ಇಂದು ಚಿಂತಿಸಬೇಕಾದ ಅತೀ ಜರೂರಿನ ವಿಷಯವಾಗಿದೆ. ಮಾಹಿತಿ, ಶಿಕ್ಷಣ ಹಾಗೂ ಜನರ ತಪ್ಪುಗಳನ್ನು ಅವರಿಗೆ ತಿಳಿ ಹೇಳುವ ಈ ಮಾಧ್ಯಮ ವಸ್ತು ನಿಷ್ಠವಾಗಬೇಕಾದ ಸ್ಥಿತಿಯಲ್ಲಿ ರಂಗಭೂಮಿ, ಸಾಹಿತ್ಯವಲಯ, ಬುದ್ದಿಜೀವಿ ವಲಯ, ಪ್ರಗತಿಪರರ ವಲಯ, ಮತ್ತು ಪತ್ರಿಕಾ ಮಾಧ್ಯಮಗಳ ಮೇಲಿನ ಹೊಣೆ ಹೆಚ್ಚಿದೆ ಎಂಬುದು ನನ್ನ ಭಾವನೆ. ಪತ್ರಿಕೆಗಳ ಮಾಲಕರಿಗೂ ಪತ್ರಿಕೆ ನಡೆಸುವುದು ಕಷ್ಟ ಎಂಬ ಅರಿವಿನೊಂದಿಗೆ ಈ ಮಾತು ಹೇಳಬೇಕಾಗಿದೆ.
ಈ ಎಲ್ಲ ನಿಟ್ಟಿನಲ್ಲಿ ನೇರ, ನಿಷ್ಠುರ, ಸತ್ಯ ಹಾಗೂ ಧ್ವನಿ ಇಲ್ಲದವರ ಪರಧ್ವನಿಯಾಗಿ, ಕ್ರಾಸ್‌ಚೆಕ್ ಮೂಲಕ ಶುದ್ದ ಕನ್ನಡದಲ್ಲಿ ಜನರನ್ನು ತಲುಪುತ್ತಿರುವ ಪತ್ರಿಕೆ ಎಂದರೆ ‘ವಾರ್ತಾಭಾರತಿ’ ಎಂದು ಹೇಳಬಹುದು, ಈ ಪತ್ರಿಕೆಗೆ ಸರ್ವರನ್ನು ಒಳಗೊಳ್ಳುತ್ತಿದ್ದ ಲಂಕೇಶರ ಪ್ರಭಾವ ಹೆಚ್ಚಿದೆ ಅನಿಸುತ್ತಿದೆ. ಸರ್ವಜನರ ಪರಧ್ವನಿಯಾಗಿ, ಧೈರ್ಯವಾಗಿ, ನಷ್ಟದಲ್ಲೂ ಕೆಲಸ ನಿರ್ವಹಿಸಿ ತಳವರ್ಗಗಳಿಗೆ, ಹಿಂದುಳಿದ, ಅಲ್ಪಸಂಖ್ಯಾತ, ದಲಿತ, ಅಲೆಮಾರಿ, ಬುಡಕಟ್ಟುಗಳಿಗೆ, ಆದಿವಾಸಿಗಳಿಗೆ ವೇದಿಕೆಯಾಗಿದೆ.ಇಂತಹವರ ಸುದ್ದಿ ಎಲ್ಲಿಯೂ ಪ್ರಸಾರಕಾಣದಿದ್ದಾಗ ‘ವಾರ್ತಾಭಾರತಿ’ಯೇ ಆಪ್ತವಾಗಿ ಕಾಣುತ್ತದೆ. ಇದುಧ್ವನಿ ಇಲ್ಲದವರಿಗೆಆತ್ಮ ವಿಶ್ವಾಸವನ್ನು ಇಂದಿಗೂ ತುಂಬುತ್ತಿರುವುದು ಸಾಮಾಜಿಕ ನ್ಯಾಯಒದಗಿಸುತ್ತಿರುವುದುವಿಶೇಷವಾಗಿದೆ.
‘ವಾರ್ತಾಭಾರತಿ’ ‘‘ಸಮಾಜಕ್ಕೆ ಕನ್ನಡಿಯಂತಿದೆ. ವಸ್ತು ನಿಷ್ಠ ವಾಗಿದೆ, ಮಾಹಿತಿದಾಯಕವಾಗಿದೆ. ಪತ್ರಿಕೆಗಳು ವಸ್ತು ನಿಷ್ಠ ಮಾಹಿತಿ ಪೂರೈಕೆ, ಮನರಂಜನೆ, ತಿಳಿವಿನ ಸ್ವಾತಂತ್ರವನ್ನು ಭಯರಹಿತವಾಗಿ, ಅಭಿವ್ಯಕ್ತಿಯ ಪ್ರತಿ ಫಲವಾಗಿ, ಜೊತೆಗೆ ದೇಶದ ರಕ್ಷಣೆ, ದೇಶದ ಏಕತೆ, ಸೌಹಾದರ್, ಸಭ್ಯತೆ ಕಾಯ್ದುಕೊಂಡಿದೆ. ಒಟ್ಟಾರೆ ಜನರ ಹಕ್ಕುಗಳನ್ನು ರಕ್ಷಿಸುತ್ತಿದೆ, ಇದನ್ನು ಇತರೆ ಪತ್ರಿಕೆಗಳು ಸಹ ಅನುಸರಿಸಬೇಕು ಮತ್ತು ಮಾಡಬೇಕಾಗುತ್ತದೆ. ದೇಶವೊಂದರ ಅಭಿವೃದ್ಧಿ ಮಟ್ಟವು ಪ್ರಚಲಿತ ದಿನಪತ್ರಿಕೆಯ ಪ್ರಸಾರ, ಓದುಗರ ಸಂಖ್ಯೆ ಆಧರಿಸಿ ಅಳೆಯು ವಂತಾಗಬೇಕು. ಪತ್ರಿಕೆಗಳು ಮ್ಯಾಂಚೆಸ್ಟರ್ ಗಾರ್ಡಿಯನ್ ಸಂಪಾದಕ ಸಿ.ಪಿ.ಸ್ಕಾಟ್ ಹೇಳುವಂತೆ ‘‘ವಾಸ್ತವಾಂಶಗಳು ಪವಿತ್ರವಾದಂತಹವು ಟೀಕೆ, ಸರ್ವ ಸ್ವತಂತ್ರವಾಗಿರಬೇಕು. ಎಂದಿದ್ದಾರೆ.
ನನಗನಿಸುವಂತೆ,
1.ಈಗ ಪತ್ರಿಕೆಗಳ ಉದ್ದೇಶಧನ ಮುಖಿಯಾಗಿದೆ.
2.ಪತ್ರಿಕೆಗಳು ‘‘ಅಕ್ಷರ’’ ಜ್ಞಾನಕ್ಕಾಗಿಇರಬೇಕುಆದರೆ ಲಾಭಕ್ಕಾಗಿ ಆಗಿದೆ. 3.ಪತ್ರಿಕೆಗಳು ಸಂಸ್ಕೃತಿಯನ್ನು ಹಾಗೂ ಇತಿಹಾಸವನ್ನು ಮುಂದಿನ ಪೀಳಿಗೆಗಳಿಗೆ ಸಾಗಿಸಬೇಕು.
4.ನೈತಿಕ ಪ್ರಜ್ಞೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಪತ್ರಿಕೆಗಳ ಪ್ರಜ್ಞೆ ಹೆಚ್ಚಬೇಕು
5.ಆನೆ (ಬೃಹತ್ ಮಾಧ್ಯಮಗಳು) ಕಬ್ಬುತಿಂದರೆ ಸಣ್ಣ ಇರುವೆ (ಸಣ್ಣ ಪತ್ರಿಕೆಗಳು) ಸಕ್ಕರೆಯನ್ನೇ ತಿನ್ನುತ್ತದೆ’’ ಎನ್ನುವಂತಿರ ಬೇಕು. ಸರಕಾರದ ಬಹುತೇಕ ಪ್ರಮುಖ ಮುದ್ರಣ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳು ಇಂದು ‘‘ಸಮಾಜದ ಹುಲ್ಲುತಿಂದು ಭ್ರಷ್ಟ ಸರಕಾರಗಳಿಗೆ ಹಾಲುಕರೆಯುತ್ತಿವೆ. ನಮ್ಮ ದೇಶದಲ್ಲಿ ಪತ್ರಿಕೆಗಳು, ಪುಸ್ತಕಗಳು ಹಾಗೂ ಗ್ರಂಥಾಲಯಗಳ ಬಗ್ಗೆ ಅಸಡ್ಡೆಇದೆ.ಕಾರಣ ಅವು ಲಾಭತರುವುದಿಲ್ಲ. ಅವು ಕೇವಲ ಬೌದ್ಧ್ದಿಕ ಮಟ್ಟಕ್ಕೆ ಸೀಮಿತ ಎಂದು ಭಾವಿಸಲಾಗುತ್ತಿರುವುದೇ ಕಾರಣ ಇರಬಹುದು. ಆದರೆ ಒಂದು ರಾಷ್ಟ್ರದ ಗ್ರಂಥಾಲಯ ವ್ಯವಸ್ಥೆಯು ಆ ರಾಷ್ಟ್ರದ ಪ್ರಗತಿಯ ಸೂಚ್ಯಂಕವಾಗಿರುತ್ತದೆ ಎಂಬುದು ನಮಗೆ ತಿಳಿದಿಲ್ಲ. ಇಡೀ ವಿಶ್ವದಲ್ಲಿರುವ ಗ್ರಂಥಾಲಯಗಳಲ್ಲಿ ಸರಿ ಸುಮಾರು 160 ಮಿಲಿಯನ್‌ಗಿಂತಲೂ ಹೆಚ್ಚು ಸಂಖ್ಯೆಯ ಗ್ರಂಥಗಳು ಪತ್ರಿಕೆಗಳು ಹಾಗೂ ಮಾಹಿತಿ ಸಂಪನ್ಮೂಲಗಳು ಸಂಗ್ರಹಿಸಲ್ಪಟ್ಟಿವೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಅಮೆರಿಕ, ರಶ್ಯ, ಯೂರೋಪ್‌ನ, ಪಾಲೇ ಅರ್ಧದಷ್ಟಿದೆ. ಈ ಮಾಹಿತಿ ಹಂಚಿಕೆಎಂಬುದು ಸಮಾನವಾಗಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಫ್ರೀಡಂ ಹೌಸ್ ತನ್ನ 2002 ರ ವರದಿಯಲ್ಲಿಜಗತ್ತಿನ 200 ದೇಶಗಳ ಪೈಕಿ 85 ದೇಶಗಳನ್ನು ಮಾತ್ರ ಸ್ವತಂತ್ರವೆಂದು ಪರಿಗಣಿಸಬಹುದುಎನ್ನಲಾಗಿದೆ.
ಈ ಹಿಂದಿನ ‘ಪತ್ರಿಕಾ ಸಿದ್ಧಾಂತ’ದ ದೇಶಗಳಲ್ಲಿ ಕೂಡ ‘‘ಪತ್ರಿಕೆ ಸರಕಾರದ ‘ಕಾವಲುನಾಯಿ’ ಎಂಬ ಕಲ್ಪನೆ ಮಾಯವಾಗಿ ಸರಕಾರದ ಆಜ್ಞಾಪಾಲಕವಾಗುತ್ತಿದೆ’’.ಇಂತಹ ಸಂದರ್ಭದಲ್ಲಿ ‘‘ಸಮಾಜದ ಪ್ರತಿ ಬಿಂಬ’’ವಾದ ಪತ್ರಿಕೆಯನ್ನುಅದರ ಶೈಲಿ, ಸಿದ್ಧಾಂತ ವಿಷಯವನ್ನು ಜನರಿಗೆ ತಲುಪಿಸಿ ಚಿಂತನೆಗೆ ಹಚ್ಚಿ ಅರಿವು ತರುವುದರೊಂದಿಗೆ ಒಂದು ಕಾಲದ ಸಾಹಿತ್ಯಿಕ, ಸಾಂಸ್ಕೃತಿಕ ದಾಖಲಾತಿಯನ್ನು ಮಾಡುವ ಮಹತ್ವದ ಜವಾಬ್ದಾರಿ ಹೊಂದಿರುವ ಪತ್ರಿಕೆಗಳಿಗೆ ಇಂದು ಬಹಳ ದೊಡ್ಡ ಪ್ರಮಾಣದ ಮಹತ್ವ ಇದೆ ಎಂಬುದನ್ನು ಎಲ್ಲಾ ಚಿಂತಕರು, ಸಾಹಿತಿಗಳು, ಪತ್ರಕರ್ತರು ಹಾಗೂ ರಂಗಕರ್ಮಿಗಳು ಅರಿಯಬೇಕು. ಪತ್ರಿಕೆಗಳಿಗೆ ರಕ್ಷಣೆ ನೀಡಿಧನ ಸಹಾಯ ಒದಗಿಸಿ ಬೆಳೆಸಬೇಕಾದ ಅಗತ್ಯ ಸಹ ಇಂದು ಬಹಳವಾಗಿದೆ.
ಹಲವು ಕಾರಣಗಳಿಂದ ಪ್ರಾಮಾಣಿಕ ಪತ್ರಿಕೆಗಳು ಮುಚ್ಚಿವೆ ಅಥವಾ ಮುಚ್ಚಲಾಗುತ್ತಿದೆ. ಉತ್ತಮ ಪತ್ರಿಕೆಗಳ ಬೆಳವಣಿಗೆ ಎಂದರೆಇಡೀ ಮಾನವಕುಲದ ಬೆಳವಣಿಗೆಯಾಗಿದೆ.
ಈ ಎಲ್ಲಾ ನಿಟ್ಟಿನಲ್ಲಿ ನಾನಂತು ‘ವಾರ್ತಾ ಭಾರತಿ’ಗೆ ಸದಾ ಚಿರಋಣಿಯಾಗಿದ್ದೇನೆ. ನನ್ನ ಅನೇಕ ಸಂಶೋಧನಾ, ಪ್ರಗತಿಪರ ಲೇಖನಗಳನ್ನು ವಿಮರ್ಶೆಗಳನ್ನು ತಳವರ್ಗಗಳ ಅದರಲ್ಲೂ ಅಲೆಮಾರಿ-ಬುಡಕಟ್ಟುಗಳ ಸುದ್ದಿಯನ್ನು ನಿರಂತರವಾಗಿ ಪ್ರಕಟಿಸಿ ನಿರ್ಗತಿಕತಬ್ಬಲಿ ಅಲೆಮಾರಿ-ಬುಡಕಟ್ಟು ಸಮುದಾಯಗಳಿಗೆ ‘ಅಲೆಮಾರಿ ಕೋಶ’ ಸ್ಥಾಪನೆಯಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದು ವಾರ್ತಾಭಾರತಿ’ ಹಾಗೂ ಪ್ರಜಾವಾಣಿ ಎಂದು ಹೇಳಬಹುದು.







