ಕಮ್ಯುನಿಸ್ಟರು ಹಿಂದೂ ದೇವಸ್ಥಾನಗಳ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಾರೆ ಎಂದ ನಿವೃತ್ತ ಸುಪ್ರೀಂ ನ್ಯಾಯಾಧೀಶೆ
ವೀಡಿಯೋ ವೈರಲ್

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಇಂದು ಮಲ್ಹೋತ್ರ (Twitter/@Deepankar_0047)
ಹೊಸದಿಲ್ಲಿ: "ಕಮ್ಯುನಿಸ್ಟ್(Communists) ಸರಕಾರಗಳು ಹಿಂದು ದೇವಸ್ಥಾನಗಳ ಮೇಲೆ ನಿಯಂತ್ರಣ ಸಾಧಿಸಿವೆ,'' ಎಂದು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಇಂದು ಮಲ್ಹೋತ್ರ(Indu Malhotra) ಅವರು ಹೇಳುತ್ತಿರುವ ಹಳೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ನಿರ್ದಿಷ್ಟ ವೀಡಿಯೋದಲ್ಲಿ ಇಂದು ಮಲ್ಹೋತ್ರ ಅವರು ಕೇರಳದ ಪದ್ಮನಾಭ ಸ್ವಾಮಿ ದೇವಸ್ಥಾನವನ್ನು ಉಲ್ಲೇಖಿಸಿದ್ದರು. ತಾವು ಜಸ್ಟಿಸ್ ಯು ಯು ಲಲಿತ್ ಅವರ ಜತೆಗೂಡಿ ಕೇರಳದಲ್ಲಾದಂತೆ ಆದಾಯಕ್ಕಾಗಿ, ಮುಖ್ಯವಾಗಿ ಹಿಂದು ದೇವಸ್ಥಾನಗಳನ್ನು ಸ್ವಾಧೀನಪಡಿಸುವುದಕ್ಕೆ ತಡೆ ಹೇರಿರುವುದಾಗಿ ಹೇಳಿದ್ದರಲ್ಲದೆ ಅದಕ್ಕೆ ಅನುಮತಿಸುವುದಿಲ್ಲ ಎಂದೂ ತಿಳಿಸಿದ್ದರು.
ತಿರುವನಂತಪುರಂನ ಪದ್ಮನಾಭ ಸ್ವಾಮಿ ದೇವಸ್ಥಾನದ ಹೊರಗೆ ತೆಗೆಯಲಾದ ಈ ವೀಡಿಯೋದಲ್ಲಿ ಇಂದು ಮಲ್ಹೋತ್ರ ಅವರು 2020ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ್ದರು. ತಿರುವಾಂಕೂರು ಅರಸನ ಸಾವಿನ ನಂತರ ದೇವಸ್ಥಾನದ ನಿರ್ವಹಣೆ ಮತ್ತು ನಿಯಂತ್ರಣದ ಮೇಲೆ ತಿರುವಾಂಕೂರು ರಾಜಮನೆತನದ ಹಕ್ಕನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಆ ವರ್ಷ ಎತ್ತಿ ಹಿಡಿದಿತ್ತು.
ಕೇರಳ ಸರಕಾರಕ್ಕೆ ಪದ್ಮನಾಭ ಸ್ವಾಮಿ ದೇವಸ್ಥಾನದ ನಿರ್ವಹಣಾ ಅಧಿಕಾರವನ್ನು ನೀಡಿ ಕೇರಳ ಹೈಕೋರ್ಟ್ 2011ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಿರುವಾಂಕೂರು ರಾಜಮನೆತನ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು. ಈ ಸುಮಾರು ಒಂದು ದಶಕ ಹಳೆಯದಾದ ಪ್ರಕರಣದ ತೀರ್ಪನ್ನು ಜಸ್ಟಿಸ್ ಲಲಿತ್ ಮತ್ತು ಜಸ್ಟಿಸ್ ಇಂದು ಮಲ್ಹೋತ್ರ ಅವರ ದ್ವಿಸದಸ್ಯ ಪೀಠ ನೀಡಿತ್ತು. ತಿರುವಾಂಕೂರು ಮಹಾರಾಜನ ಸಾವು ರಾಜಕುಟುಂಬವು ಈ ದೇವಸ್ಥಾನ ನಿರ್ವಹಣಾ ಅಧಿಕಾರವನ್ನು ಬಾಧಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಇದನ್ನೂ ಓದಿ: 5ಜಿ ಸೇವೆ ಮುಂದಿನೆರಡು ತಿಂಗಳಿನಲ್ಲಿ ಜಿಯೋ ಆರಂಭಿಸಲಿದೆ ಎಂದ ಮುಕೇಶ್ ಅಂಬಾನಿ
Former #SupremeCourt Justice Indu Malhotra remarks that the Communists Government have taken over the Hindu Temples, "They want to just take over because of the Revenue...There problem is the revenue."
— Deepankar Malviya (@Deepankar_0047) August 29, 2022
She was a part of the Constitution Bench hearing Sabrimala and gave dissent. pic.twitter.com/cj5MnnnJbZ