ಜಲಾಲ್‌ಬಾಗ್: ಮಾಸಿಕ ಮಜ್ಲಿಸುನ್ನೂರ್ ಉದ್ಘಾಟನೆ

ದೇರಳಕಟ್ಟೆ : ಇಲ್ಲಿನ ಜಲಾಲ್‌ಬಾಗ್‌ನ ಮಸ್ಜಿದುಲ್ ಅರಫಾ ಇದರ ಆಶ್ರಯದಲ್ಲಿ ಮಾಸಿಕ ಮಜ್ಲಿಸುನ್ನೂರ್ ಕಾರ್ಯಕ್ರಮವು ರವಿವಾರ ಉದ್ಘಾಟನೆಗೊಂಡಿತು.
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಕೇಂದ್ರ ಸಮಿತಿಯ ಸದಸ್ಯ, ಕೂರ್ನಡ್ಕ ಜಮಾಅತ್ ಖಾಝಿ ಶೈಖುನಾ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ಉದ್ಘಾಟಿಸಿದರು. ಜಮಾಅತಿನ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು.
ಖತೀಬ್ ವಿ.ಕೆ.ಅಬ್ದುಲ್ ರಹ್ಮಾನ್ ಫೈಝಿ ದುಆಗೈದರು. ಶಾಸಕ ಯು.ಟಿ.ಖಾದರ್‌ರ ಅನುದಾನದಿಂದ ಕೋಟೆಕಾರು ಪಪಂ ವ್ಯಾಪ್ತಿಯ ಜಲಾಲ್ ಬಾಗ್ ಮಸೀದಿ ಬಳಿ ನಿರ್ಮಿಸಲ್ಪಟ್ಟ ಹೈ- ಮಾಸ್ಟ್ ದೀಪವನ್ನು ಜಮಾಅತಿನ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಪಪಂ ಮಾಜಿ ಸದಸ್ಯ ಡಿ.ಎಂ.ಮುಹಮ್ಮದ್ ಉದ್ಘಾಟಿಸಿದರು.
ಅತಿಥಿಯಾಗಿ ಸೈಯದ್ ಎಸ್.ಕೆ.ತಂಳ್ ಅಲ್ ಬುಖಾರಿ, ಬಿಸಿ ರೋಡ್ ತಲಪಾಡಿ ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಹಂಝ ಫೈಝಿ, ದೇರಳಕಟ್ಟೆ ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಇಸ್ಹಾಕ್ ಫೈಝಿ, ವಿಜಯನಗರ ಜುಮ್ಮಾ ಮಸೀದಿಯ ಖತೀಬ್ ಅಬೂಬಕ್ಕರ್ ದಾರಿಮಿ ಉರುಮನೆ, ದೇರಳಕಟ್ಟೆ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ದಾರಿಮಿ, ಕಿನ್ಯಾ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಫೈಝಿ ಕಿನ್ಯಾ, ಸ್ಥಳೀಯ ಮಸೀದಿಯ ಮುಅಧ್ಧಿನ್ ಎಂ.ಬಿ.ಅಬ್ದುಲ್ ಖಾದರ್ ಮುಸ್ಲಿಯಾರ್, ಉದ್ಯಮಿ ಪನೀರ್ ಇಬ್ರಾಹಿಂ (ಕತರ್), ಉಕ್ಕುಡ ಜುಮ್ಮಾ ಮಸೀದಿಯ ಅಧ್ಯಕ್ಷ ಪಿ.ಎಂ. ಅಬ್ದುಲ್ ರಹ್ಮಾನ್ ಹಾಜಿ, ಪನೀರ್ ಜುಮ್ಮಾ ಮಸೀದಿಯ ಅಧ್ಯಕ್ಷ ಶೇಖ್ ಹುಸೈನ್, ಗ್ರೀನ್ ಗ್ರೌಂಡ್ ಮಸೀದಿಯ ಅಧ್ಯಕ್ಷ ಸೈಯದ್ ಅಲಿ, ಉಪಾಧ್ಯಕ್ಷ ಮುಹಮ್ಮದ್ ಪನೀರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಮಾಅತಿನ ಉಪಾಧ್ಯಕ್ಷ ಹನೀಫ್ ಕೊಣಾಜೆ, ಕೋಶಾಧಿಕಾರಿ ಮುಹಮ್ಮದ್ ಫಾರೂಕ್, ಆಡಳಿತ ಸಮಿತಿಯ ಸದಸ್ಯರಾದ ಅಬೂಬಕ್ಕರ್ ಪಿ.ಕೆ., ಅಬ್ದುಲ್ ರಹ್ಮಾನ್ ಹಾಜಿ, ಹಮೀದ್ ಡ್ರೈವರ್, ಡಾ. ಅಂಜುಂ ಖಾನ್, ನಾಸೀರ್, ಅಬ್ದುಲ್ ಲತೀಫ್, ಖಾದರ್ ಬೈತಾರ್, ಝಿರಾರ್ ಎಸ್.ಎ, ರಝಾಕ್ ಮೂಸಾ, ಝಾಹಿದ್, ಅಬೂಬಕ್ಕರ್ ಸಿದ್ದೀಕ್, ಅಶ್ರಫ್ ಮದನಿನಗರ, ಇಸ್ಮಾಯಿಲ್ ದರ್ಬೆ ಕುಕ್ಕಾಜೆ ಉಪಸ್ಥಿತರಿದ್ದರು.
ಮಸೀದಿಯ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ಸ್ವಾಗತಿಸಿದರು. ಮಜ್ಲಿಸುನ್ನೂರ್ ಸಂಚಾಲಕ ಮುಹಮ್ಮದ್ ಅಲಿ ಹಾಜಿ ವಂದಿಸಿದರು.