ಪುತ್ತೂರು; ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಿಂದ ಚಿನ್ನಾಭರಣಗಳ ಪ್ರದರ್ಶನ, ಮಾರಾಟಕ್ಕೆ ಚಾಲನೆ

ಪುತ್ತೂರು: ಆಭರಣಗಳ ಸಂಗ್ರಹ, ಆಧುನಿಕ ಶೈಲಿಯ ವಿನ್ಯಾಸ ಮತ್ತು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಂದ ಪ್ರಶಂಸಿಸಲ್ಪಟ್ಟಿರುವ, ಸುಮಾರು 10 ದೇಶಗಳಲ್ಲಿ 280ಕ್ಕಿಂತಲೂ ಅಧಿಕ ಶೋರೂಮ್‍ಗಳನ್ನು ಹೊಂದಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾಗಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಿಂದ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಆ.27 ಮತ್ತು ಆ.28ರಂದು ಪುತ್ತೂರು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಆ. 27ರಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ಪ್ರದರ್ಶನ ಮಳಿಗೆ ಉದ್ಘಾಟಿಸಿ ಶುಭ ಹಾರೈಸಿದರು.
ಪುತ್ತೂರು ಮಾಯಿದೆ ದೇವುಸ್ ಚರ್ಚ್‍ನ ಪ್ರಧಾನ ಧರ್ಮಗುರು ರೆ.ಫಾ. ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ರೆ. ಫಾ. ಕೆವಿನ್ ಲಾರೆನ್ಸ್ ಡಿಸೋಜಾ, ಡಾ.ನಝೀರ್ ಅಹ್ಮದ್, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಸದಾನಂದ ಕೆ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮೌರಿಸ್ ಮಸ್ಕರೇನಸ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‍ನ ಅಧ್ಯಕ್ಷ ರಫೀಕ್ ದರ್ಬೆ, ಸೀರತ್ ಕಮಿಟಿ ಅಧ್ಯಕ್ಷ ಖಾದರ್ ಸುರಯ್ಯಾ, ಸಾಮಾಜಿಕ ಕಾರ್ಯಕರ್ತ ರೋಷನ್ ಡಯಾಸ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಮಂಗಳೂರು ಮಳಿಗೆಯ ಮುಖ್ಯಸ್ಥ ಶರತ್ ಚಂದ್ರನ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಡೆಪ್ಯುಟಿ ಮೆನೇಜರ್ ಗಿರೀಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಆಧುನಿಕ ವಿನ್ಯಾಸದ ಆಭರಣ
ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‍ನ ಉಪ-ಬ್ರಾಂಡ್‍ಗಳಾದ ಮೈನ್ ಡೈಮಂಡ್ ಜ್ಯುವೆಲ್ಲರಿ, ಎರಾ ಅನ್‍ಕಟ್ ಡೈಮಂಡ್ ಜ್ಯುವೆಲ್ಲರಿ, ಡಿವೈನ್ ಇಂಡಿಯನ್ ಹೆರಿಟೇಜ್ ಜ್ಯುವೆಲ್ಲರಿ, ಎಥ್ನಿಕ್ಸ್ ಕರಕುಶಲ ಆಭರಣಗಳು ಮತ್ತು ಸ್ಟಾರ್ಲೆಟ್ ಕಿಡ್ಸ್ ಜ್ಯುವೆಲ್ಲರಿಗಳನ್ನು ಪ್ರದರ್ಶಿಸಲಾಗುತ್ತದೆ. ಎಲ್ಲಾ ಉತ್ಪನ್ನಗಳು ವಿವರವಾದ ಮತ್ತು ಪಾರದರ್ಶಕ ಬೆಲೆಯೊಂದಿಗೆ ಒಟ್ಟು ತೂಕ, ಸ್ಟೋನ್ ತೂಕ, ಮೇಕಿಂಗ್ ಚಾರ್ಜ್, ಸ್ಟೋನ್ ಚಾರ್ಜ್ ಮತ್ತು ನಿವ್ವಳ ತೂಕದಂತಹ ವಿವರಗಳೊಂದಿಗೆ ಪ್ರಸ್ತುತಪಡಿಸಲಾಗುತ್ತಿದೆ.