Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 'ಚೌಕಿದಾರ್ ಚೋರ್ ಹೈ' ಅಭಿಯಾನದಿಂದ ಹಿರಿಯ...

'ಚೌಕಿದಾರ್ ಚೋರ್ ಹೈ' ಅಭಿಯಾನದಿಂದ ಹಿರಿಯ ಕಾಂಗ್ರೆಸ್ ನಾಯಕರಿಗೆ ಅಸಮಾಧಾನ: ಗುಲಾಂ ನಬಿ ಆಝಾದ್

ವಾರ್ತಾಭಾರತಿವಾರ್ತಾಭಾರತಿ29 Aug 2022 7:13 PM IST
share
ಚೌಕಿದಾರ್ ಚೋರ್ ಹೈ ಅಭಿಯಾನದಿಂದ ಹಿರಿಯ ಕಾಂಗ್ರೆಸ್ ನಾಯಕರಿಗೆ ಅಸಮಾಧಾನ: ಗುಲಾಂ ನಬಿ ಆಝಾದ್

ಹೊಸದಿಲ್ಲಿ: 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿಯವರು ಆರಂಭಿಸಿದ "ಚೌಕಿದಾರ್ ಚೋರ್ ಹೈ" ಅಭಿಯಾನವು ಅನೇಕ ಕಾಂಗ್ರೆಸ್ ಹಿರಿಯ ನಾಯಕರನ್ನು ಅಸಮಾಧಾನಗೊಳಿಸಿತ್ತು ಎಂದು ಕಳೆದ ವಾರ ಪಕ್ಷವನ್ನು ತೊರೆದ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.

ಚುನಾವಣಾ ಪ್ರಚಾರದ ಸಮಯದಲ್ಲಿ ʼಚೌಕಿದಾರ್‌ ಚೋರ್‌ ಹೈʼ ಎಂಬ ಘೋಷಣೆ ಪರವಾಗಿರುವವರು ಕೈ ಎತ್ತಿ ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಕೇಳಿದರು. ಈ ವೇಳೆ ಆಝಾದ್‌ ಸೇರಿದಂತೆ ಹಿರಿಯ ನಾಯಕರಾದ ಮನಮೋಹನ್ ಸಿಂಗ್, ಎಕೆ ಆಂಟನಿ, ಪಿ ಚಿದಂಬರಂ ಮೊದಲಾದವರು ಉಪಸ್ಥಿತರಿದ್ದರು ಎಂದು ಗುಲಾಂ ನಬಿ ಆಝಾದ್‌ ಹೇಳಿದ್ದಾರೆ, .

ಇಂದಿರಾಗಾಂಧಿ, ರಾಜೀವ್ ಗಾಂಧಿ, ಪಿವಿ ನರಸಿಂಹ ರಾವ್ ಅವರ ಸಂಪುಟದಲ್ಲಿದ್ದ ಹಾಗೂ ಮುಖ್ಯಮಂತ್ರಿಗಳಾಗಿದ್ದ ಎಷ್ಟೋ ಹಿರಿಯರು ಇದನ್ನು ಪ್ರಶ್ನಿಸಿದ್ದರು. ʼನೀವು ಹೇಗೆ ಇದನ್ನು ನಿರೀಕ್ಷಿಸುತ್ತೀರಿ? ಈ ಭಾಷೆಯನ್ನು ಸಾರ್ವಜನಿಕವಾಗಿ ಬಳಸಬಹುದೇ? ನಾವು ಬಲ, ಎಡ ಮತ್ತು ಮಧ್ಯಮ (ಪಂಥದ) ಯಾರನ್ನಾದರೂ ವಿರೋಧಿಸಬಹುದು, ಆದರೆ ವೈಯಕ್ತಿಕವಾಗಿ ಆಕ್ರಮಣ ಮಾಡಬಾರದುʼ ಎಂದು ಹಿರಿಯ ನಾಯಕರು ಪ್ರಶ್ನಿಸಿದ್ದರು.

ತಮ್ಮಂತಹ ರಾಜಕಾರಣಿಗಳು ಎದುರಾಳಿಗಳ ಮೇಲೆ ವೈಯಕ್ತಿಕ ದಾಳಿ ನಡೆಸುವುದನ್ನು ಯೋಚಿಸಲಾಗದು ಎಂದು ಆಝಾದ್ ಹೇಳಿದ್ದಾರೆ.

"ನಾವು ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ರಾಜಕೀಯ ಶಿಕ್ಷಣವನ್ನು ಪಡೆದಿದ್ದೇವೆ. ನಾನು ಕಿರಿಯ ಸಚಿವರಾಗಿದ್ದಾಗ ಅವರು ಎಂಎಲ್ ಫೋತೇದಾರ್ ಮತ್ತು ನನ್ನನ್ನು ಕರೆದು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಬೇಕು ಎಂದು ಇಂದಿರಾ ಗಾಂಧಿ ಹೇಳಿದರು. ನಾಯಕರ ನಡುವಿನ ವ್ಯತ್ಯಾಸವನ್ನು ನೋಡಿ. ಅಟಲ್ ಜಿ ಕೂಡ ರಾಜಕಾರಣಿ, ಅವರು ಕೆಲಸ ಹೇಗೆ ನಡೆಯುತ್ತದೆ, ಹೇಗೆ ಮಾಡಬೇಕು ಎಂದು ಅವರು (ಅಟಲ್)‌ ಕೂಡಾ ನೋಡಬೇಕು ಎಂದು ಇಂದಿರಾಗಾಂಧಿ ಹೇಳಿದರು. ಕೆಲಸ ಮಾಡುವುದನ್ನು ನೋಡಲು (ಅಟಲ್) ಸಹ ಬಯಸುತ್ತಾರೆ, ಆದರೆ, ಅವರು ನಮ್ಮೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ, ಆದ್ದರಿಂದ ನೀವು ಅವರನ್ನು ಹೋಗಿ ಭೇಟಿಯಾಗಿ,  ನಾವು ನಮ್ಮ ಹಿರಿಯರನ್ನು ಗೌರವಿಸುವ ಮತ್ತು ವಿರೋಧ ಪಕ್ಷದ ನಾಯಕರಿಗೆ ಸಮಾನ ಗೌರವವನ್ನು ನೀಡುವ ಬಗ್ಗೆ ಅವರಿಗೆ ತಿಳಿಸಿ ಎಂದರು. ಸಾರ್ವಜನಿಕವಾಗಿ ಪಿಎಂ ಚೋರ್‌ ಹೈ (ಪ್ರಧಾನಿ ಕಳ್ಳ) ಎಂದು ಹೇಳಲು ನಮಗೆ ಕಲಿಸಲಿಲ್ಲ. ರಾಜಿನಾಮೆ ನೀಡಲು ಇದೂ ಕೂಡಾ ಒಂದು ಕಾರಣ ಎಂದು ಆಝಾದ್‌ ಹೇಳಿರುವುದಾಗಿ ndtv.com ವರದಿ ಮಾಡಿದೆ.

"ನಾವು ಮೋದಿಯನ್ನು ಬಲ, ಎಡ ಮತ್ತು ಮಧ್ಯದಲ್ಲಿ ಆಕ್ರಮಣ ಮಾಡಬಹುದು, ಆದರೆ ನಾವು ಈ ರೀತಿ ವೈಯಕ್ತಿಕವಾಗಿ ಹೋಗಬಾರದು? ಇದು ಹಿರಿಯ ಕ್ಯಾಬಿನೆಟ್ ಮಂತ್ರಿಗಳು ಬಳಸಬೇಕಾದ ಭಾಷೆಯೇ?" ಎಂದು ಆಝಾದ್‌ ಪ್ರಶ್ನಿಸಿದ್ದಾರೆ,

  2013 ರ ಸುಗ್ರೀವಾಜ್ಞೆಯನ್ನು ಸಂಪೂರ್ಣವಾಗಿ ಸಾರ್ವಜನಿಕವಾಗಿ ಹರಿದು ಹಾಕುವ ರಾಹುಲ್‌ ಗಾಂಧಿ ಕೃತ್ಯವನ್ನು ಬಾಲಿಶ ನಡವಳಿಕೆ ಮತ್ತು ಅವರ ಅಪ್ರಬುದ್ಧತೆಗೆ ಒಂದು ಜ್ವಲಂತ ಉದಾಹರಣೆ ಎಂದು ಆಝಾದ್‌ ಈ ಹಿಂದೆ ಹೇಳಿದ್ದರು.

"ಆ ನಡೆಯು ಪ್ರಧಾನಿ (ಮನಮೋಹನ್ ಸಿಂಗ್) ಮತ್ತು ಇಡೀ ಸಂಪುಟದ ಅಧಿಕಾರವನ್ನು ಕಸಿದುಕೊಂಡಿದೆ. ಸುಗ್ರೀವಾಜ್ಞೆಗಳನ್ನು ಹೇಗೆ ಹೊರಡಿಸಲಾಗುತ್ತದೆ ಎಂದು ರಾಹುಲ್‌ಗೆ ಇಂದಿಗೂ ತಿಳಿದಿದೆಯೇ ಎಂದು ನನಗೆ ಗೊತ್ತಿಲ್ಲ” ಎಂದು ಆಝಾದ್ ಟೀಕಿಸಿದ್ದರು.

 ಸೋನಿಯಾ ಗಾಂಧಿಯವರು ತಮ್ಮ ಮಗ ಏನು ಮಾಡುತ್ತಿದ್ದಾರೆಂದು ತಿಳಿದಿದ್ದರು ಆದರೆ ಸಂಪೂರ್ಣವಾಗಿ ಅವರು ರಾಹುಲ್ ಮೇಲೆ ಅವಲಂಬಿತರಾಗಿದ್ದಾರೆ ಎಂದು ಆಝಾದ್ ಹೇಳಿದರು. ಎಲ್ಲಾ ತಾಯಂದಿರು ಹಾಗೆ. ಎಲ್ಲಾ ತಾಯಂದಿರು, ನನ್ನ ತಾಯಿ ಇರಲಿ, ನಿಮ್ಮ ತಾಯಿ ಇರಲಿ, ತಮ್ಮ ಮಕ್ಕಳ ಒಂದು ದೌರ್ಬಲ್ಯವನ್ನು ಹೊಂದಿರುತ್ತಾರೆ ಎಂದು ಆಝಾದ್‌ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X