ಉಡುಪಿ; ಪೆನ್ಸಿಲ್ ಮೊನೆಯಲ್ಲಿ ಮೂಡಿಬಂದ ಗಣಪತಿ!

ಉಡುಪಿ, ಆ.29: ಏಳು ಮಿಲಿ ಮೀಟರ್ ಉದ್ದ ಮತ್ತು ಎರಡು ಮಿಲಿ ಮೀಟರ್ ದಪ್ಪದ ಪೆನ್ಸಿಲ್ ಮೊನೆ(ಲೆಡ್)ಯಲ್ಲಿ ಕಲಾವಿದ ಸುರೇಂದ್ರ ರಚಿಸಿರುವ ಗಣೇಶನ ಬಲಮುರಿ ಸೂಕ್ಷ್ಮ ಕಲಾಕೃತಿ ಅದ್ಭುತವಾಗಿ ಮೂಡಿ ಬಂದಿದೆ.
ಕಾರ್ಕಳದ ಕೆಪಿಟಿಸಿಎಲ್ ಕಂಪನಿಯ ಸಬ್‌ಸ್ಟೇಷನ್‌ನಲ್ಲಿ ಗುತ್ತಿಗೆ ಆಧಾರದ ಪಾಲಿ ನೌಕರರಾಗಿರುವ ಸುರೇಂದ್ರ, ನಾಲ್ಕು ದಿನಗಳಲ್ಲಿ ಸುಮಾರು ಎಂಟು ಗಂಟೆಗಳ ಶ್ರಮದಿಂದ ಈ ಕಲಾಕೃತಿ ರಚಿಸಿದ್ದಾರೆ.
ಈ ಕಲಾಕೃತಿಯನ್ನು ಆ.31ರ ಚೌತಿಯ ದಿನದಂದು ಬೆಳಗ್ಗಿನಿಂದ ಸಂಜೆಯ ತನಕ ಉಡುಪಿ ಮಾರುತಿ ವೀಥೀಕಾದಲ್ಲಿರುವ(ಶ್ಯಾಮ್ ಕಾಂಪ್ಲೆಕ್ಸ್‌ನ ಮುಂಭಾಗ ದಲ್ಲಿ) ಪೆಂಡಾಲಿನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್‌ರಾಜ್ ಸರಳೇಬೆಟ್ಟು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
Next Story





